ಮೈಸೂರು : ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆ ಹಲವರ ಬಾಳಿಗೆ ಬೆಳಕಾಗಿದೆ. ಇದೀಗ ಮಹಿಳೆಯೊಬ್ಬರು ಗೃಹಲಕ್ಷ್ಮೀ ಯಿಂದ ತಮ್ಮ ಜೀವನ ಕಟ್ಟಿಕೊಟ್ಟ ಬಗ್ಗೆ ಹೇಳಿದ್ದು, ಗೃಹಲಕ್ಷ್ಮಿ ಯೋಜನೆ ಹಣದಿಂದ ಪೆಟ್ರೋಲ್ ಮತ್ತು ಇಸ್ಪೀಟ್ ಕಾರ್ಡ್ ಮಾರಾಟ ಮಾಡ್ತಿದ್ದಿನಿ ಎಂದು ಯೋಜನೆಯ ಫಲಾನುಭವಿ ಮಹಿಳೆಯೊಬ್ಬರು ಹೇಳಿದ್ದಾರೆ. ಈ ವೇಳೆ ಶಾಸಕ ದರ್ಶನ್ ಧ್ರುವನಾರಾಯಣ್ ಅರೆ ಕ್ಷಣ ಗಾಬರಿಯಾಗಿದ್ದಾರೆ.
ಇಂದು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ತಾಲ್ಲೂಕು ಸಮಿತಿ ಶಾಸಕ ದರ್ಶನ್ ಧ್ರುವನಾರಾಯಣ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಈ ವೇಳೆ ಗೃಹ ಲಕ್ಷ್ಮಿ ಯೋಜನೆಯ ಬಗ್ಗೆ ಇಂದಿರಾನಗರ ಗ್ರಾಮದ ಮಹಿಳೆ ಮಾತನಾಡಿದರು.
ಗೃಹಲಕ್ಷ್ಮಿ ಹಣದಿಂದ ಪೆಟ್ಟಿ ಅಂಗಡಿ ಇಟ್ಟುಕೊಂಡು ಮನೆಯ ವ್ಯವಹಾರ ಮಾಡಿಕೊಂಡಿದ್ದೇನೆ. ಇದರಿಂದ ಬಂದ ಲಾಭದಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಕಷ್ಟು ಸಹಾಯವಾಗಿದೆ. ಪೆಟ್ರೋಲ್ ಮತ್ತು ಇಸ್ಪೀಟ್ ಕಾರ್ಡ್ ಮಾರಾಟ ಮಾಡುತ್ತಿದ್ದೇನೆ ಎಂದ ಮಹಿಳೆ ಹೇಳಿದ್ದಾರೆ. ಈ ವೇಳೆ ಶಾಸಕ ದರ್ಶನ್ ಧ್ರುವನಾರಾಯಣ್ ಅರೆ ಕ್ಷಣ ಗಾಬರಿಯಾಗಿದ್ದಾರೆ.