ಹಾಸನ: ರಾಷ್ಟ್ರೀಯ ಹೆದ್ದಾರಿ 75 ದೋಣಿಗಾಲ್ ಶಿರಾಡಿಘಾಟ್ ಮಾರ್ಗದಲ್ಲಿ ಲಾರಿ ಮತ್ತು ಬಸ್ ಸೇರಿದಂತೆ ಎಲ್ಲಾ ವಾಹನ ಸಂಚಾರಕ್ಕೆ ಅನುಮತಿ ಸಿಕ್ಕಿದೆ.
BREAKING NEWS: ಚಿತ್ರದುರ್ಗದಲ್ಲಿ ಬಿಸಿಯೂಟ ಸೇವಿಸಿ 80 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ; ಪೋಷಕರಿಗೆ ಆತಂಕ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರ ವರದಿ ಮೆರೆಗೆ ಎಲ್ಲಾ ರೀತಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಕಳೆದ ಒಂದು ವಾರ ಹಿಂದೆ ಭಾರಿ ಮಳೆಯಿಂದಾಗಿ ರಸ್ತೆ ಕುಸಿತವಾಗಿತ್ತು. ಹೀಗಾಗಿ ಬಸ್ ಮತ್ತು ಲಾರಿ ಸಂಚಾರಕ್ಕೆ ಜಿಲ್ಲಾಧಿಕಾರಿ ಬ್ರೇಕ್ ಹಾಕಿದ್ದರು. ಇದೀಗ ಎಲ್ಲ ವಾಹನ ಸಂಚಾರಕ್ಕೂ ಅನುಮತಿ ನೀಡಲಾಗಿದೆ ಎಂದು ತಹಸೀಲ್ದಾರ್ ಜಯಕುಮಾರ್ ಹೇಳಿದ್ದಾರೆ.