ಮೈಸೂರು : ದುಷ್ಟ ಶಕ್ತಿಗಳ ಎದುರು ಸತ್ಯದ ಜಯ ಎಂಬ ಕಾಂಗ್ರೆಸ್ ಪತ್ರಿಕಾ ಜಾಹಿರಾತು ವಿಚಾರವಾಗಿ ಮೈಸೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದು, ದುಷ್ಠ ಶಕ್ತಿಗಳು ಯಾರು ಎಂಬುದನ್ನು ಸರ್ಕಾರ ತೀರ್ಮಾನ ಮಾಡಲ್ಲ, ಜನರು ತೀರ್ಮಾನ ಮಾಡುತ್ತಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರು ಸರ್ಕಾರದ ಹಣ, ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ಯಾರು ಭಷ್ಟಾಚಾರವನ್ನೇ ಉದ್ಯಮ ಮಾಡಿಕೊಂಡಿದ್ದಾರೆ. ವರ್ಗಾವಣೆಗೂ ದುಡ್ಡು, ಕೆಲಸ ಕೊಡಿಸಲಿಕ್ಕೂ ದುಡ್ಡು. ಎಲ್ಲರದಲ್ಲೂ ದುಡ್ಡು ತಗೋಳ್ತಾರೆ, ಅಂತವರು ಯಾವ ದೃಷ್ಟರ ಬಗ್ಗೆ ಮಾತನಾಡುತ್ತಾರೆ ಅವರಿಗೆ ಅವರೇ ಪ್ರಶ್ನೆ ಹಾಕಿಕೊಳ್ಳಬೇಕು.
ಇಂತಹ ಜಾಹೀರಾತಿಗೆ ಸರ್ಕಾರದ ಹಣ ಬಳಕೆ ಮಾಡಿಕೊಂಡು ಅವರ ಮುಖಕ್ಕೆ ಅವರೇ ಮಸಿ ಬಳೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಮೈಸೂರಿನ ಮುಡಾ ಹಗರಣದಲ್ಲಿ ಸ್ವತಃ ಸಿಎಂ ಧರ್ಮಪತ್ನಿ ಸೈಟ್ ವಾಪಸ್ ಮಾಡಿದರು. ಯಾಕೆ ವಾಪಸ್ ಮಾಡಿದ್ರು, ತಪ್ಪು ಮಾಡಿದ್ರಿ ಅದಕ್ಕೆ ವಾಪಾಸ್ ನೀಡಿದ್ರಿ. ವಾಲ್ಮೀಕಿ ನಿಗಮದಲ್ಲಿ ಹಗರಣ ಆಗಿರೋದರ ಬಗ್ಗೆ ಇಡಿ ವರದಿ ನೀಡಿದೆ. ಪರಿಶಿಷ್ಟ ಪಂಗಡದ ಹಣವನ್ನು ಆಂಧ್ರ ಪ್ರದೇಶ, ಬಳ್ಳಾರಿ ಚುನಾವಣೆಗೆ ನೀಡಿರುವುದರ ಬಗ್ಗೆ ವರದಿ ನೀಡಿದೆ.
ಯಾರು ಸರ್ಕಾರವನ್ನು ಲೂಟಿ ಮಾಡುತ್ತಿದ್ದಾರೆ. ಅಂತಹವರಿಗೆ ಸರ್ಕಾರದ ಇರಲಿಕ್ಕೆ ಅಧಿಕಾರ.
ನೀವೇನು ಬೇಕಿದ್ರು ಜಾಹಿರಾತು ನೀಡಬಹುದು. ಏನು ಬೇಕಾದರೂ ಭಾಷಣ ಮಾಡಬಹುದು ಸರ್ಕಾರ ನಿಮ್ಮ ಕೈಯಲ್ಲಿದೆ. ಯಾರು ದುಷ್ಟರು ಯಾರು ಶಿಷ್ಟರು ಎಂಬುದನ್ನು ಜನರು ಗಮನಿಸುತ್ತಿದ್ದಾರೆ ಅದೇ ರೀತಿಯಾಗಿ ಚುನಾವಣೆ ಆಯೋಗಕ್ಕೆ ದೂರು ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಈಗ ತನಿಖೆ ನಡೆಯುತ್ತಿದೆ.ಈಗಾಗಲೇ ಇದರ ಬಗ್ಗೆ ದೂರು ನೀಡಿದ್ದೇವೆ.ಎಲ್ಲಾ ತನಿಖೆಗಳ ಬಳಿಕ ಸತ್ಯ ಹೊರ ಬರುತ್ತದೆ ಎಂದರು.
ಜಾತಿಗಣತಿ ವರದಿ ಜಾರಿಯಾದರೆ ಸಿದ್ದರಾಮಯ್ಯರಿಗೇ ತಿರುಗುಬಾಣ
ಇನ್ನು ಜಾತಿಗಣತಿ ವರದಿ ಜಾರಿ ವಿಚಾರವಾಗಿ ವಿರೋಧ ವ್ಯಕ್ತಪಡಿಸಿದ ಅವರು, ಜಾತಿಜನಗಣತಿ ಒಡೆದು ಆಳುವ ನೀತಿ.ಹಿಂದೆ ಬ್ರಿಟಿಷರು ಮಾಡಿದ ಕೆಲಸವನ್ನು ಇವರು ಮಾಡುತ್ತಿದ್ದಾರೆ. ರಾಜ್ಯದ ಬಹು ಸಂಖ್ಯಾತರು ಜಾತಿಗಣತಿ ವರದಿಯನ್ನು ವಿರೋಧ ಮಾಡಿದ್ದಾರೆ. ಬಹುಸಂಖ್ಯಾತರಿಗೆ ಅಪಮಾನ ಮಾಡಲು, ಜಾತಿ ಜಾತಿ ನಡುವೆ ಬೆಂಕಿ ಹಚ್ಚಲು, ಬಹು ಸಂಖ್ಯಾತರನ್ನು ಒಡೆದು ಹಾಕಲು ಯೋಚನೆ ಮಾಡುತ್ತಿದ್ದಾರೆ. ಇದನ್ನು ನಾವು ಒಪ್ಪಲು ಸಾಧ್ಯವಿಲ್ಲ. ಇದು ಜಾರಿಯಾದರೆ ಸಿದ್ದರಾಮಯ್ಯರಿಗೇ ತಿರುಗುಬಾಣವಾಗುತ್ತದೆ.ಮೈಸೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದರು.
ಮಾವುತರ ಕುಟುಂಬಕ್ಕೆ ಉಪಹಾರ ಬಡಿಸಿದರೆ ಸಚಿವೆ
ಮಾವುತರ ಕುಟುಂಬಕ್ಕೆ ಉಪಹಾರ ಬಡಿಸಿದ ಬಳಿಕ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದೇನೆ.ಅದೇ ರೀತಿ ಕಾವಾಡಿಗರು ಮಾವುತರ ಕುಟುಂಬಕ್ಕೆ ಉಪಹಾರ ಬಡಿಸಿದ್ದೇನೆ.ದಸರಾ ವೇಳೆ ಮಾವುತರು ಕಾವಾಡಿಗಳು ಕಾಡಿನಿಂದ ನಾಡಿಗೆ ಬರುತ್ತಾರೆ.ಮುಂಚೆ ಮಾವುತರು ಕಾವಾಡಿಗರಿಗೆ 3ಸಾವಿರ ಗೌರವ ಧನ ನೀಡಲಾಗುತ್ತಿತ್ತು.ಆಗ ಮಾವುತರು ಕಾವಾಡಿಗರು ಪ್ರತಿಭಟನೆ ಮಾಡುತ್ತಿದ್ದರು.
ನಾವು ಇದನ್ನು ಮನಗಂಡು ಅವರಿಗೆ ಪ್ರತಿ ತಿಂಗಳು ಸಂಬಳ ನೀಡುವ ಕೆಲಸ ಮಾಡಿದೆವು. ಯಡಿಯೂರಪ್ಪನವರು ಇದ್ದಾಗ ಸರ್ಕಾರಕ್ಕೆ ಮನವಿ ಸಲ್ಲಿಸಿ ಸಂಬಳ ಕೊಡಿಸುವ ಕೆಲಸ ಮಾಡಿದೆವು.ಮಾವುತರು ಕಾವಾಡಿಗರ ಮಕ್ಕಳಿಗೆ ಶಿಕ್ಷಣ ನೀಡಬೇಕೆಂದು ಹೇಳಿದ್ವಿ ಎಂದು ಮೈಸೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯಿಂದ ಬೆಳಗಿನ ಉಪಹಾರ ಕೂಟ ಏರ್ಪಡಿಸಲಾಗಿತ್ತು. ಪ್ರತಿ ವರ್ಷ ಗಜಪಡೆಯ ಕಾವಾಡಿಗಳು, ಮಾವುತರ ಕುಟುಂಬಸ್ಥರಿಗೆ ಉಪಹಾರ ಕೂಟ ಏರ್ಪಡಿಸುತ್ತಾ ಬಂದಿರುವ ಸಚಿವೆ ಶೋಭಾ ಕರಂದ್ಲಾಜೆ ಇಂದು ಕೂಡಇಡ್ಲಿ, ದೋಸೆ, ಪೊಂಗಲ್, ಹೋಳಿಗೆ, ಕೇಸರಿ ಬಾತ್ ಬಡಿಸಿದರು. ಈ ಮೂಲಕ ಗಜಪಡೆಯ ಮಾವುತರು ಕಾವಾಡಿಗಳ ಕುಟುಂಬಸ್ಥರಿಗೆ ದಸರಾ ಹಬ್ಬದ ಶುಭಕೋರಿದರು. ಶೋಭಾ ಕರಂದ್ಲಾಜೆ.ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಶ್ರೀವತ್ಸ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಸಾಥ್ ನೀಡಿದರು.
ಅಶುಚಿತ್ವದ ಕುರಿತು ಕಿಡಿ
ನೆನ್ನೆಯಷ್ಟೇ ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲುಗಳ ಮುಖಾಂತರ ತೆರಳಿ ದರ್ಶನ ಪಡೆದೆ. ಚಾಮುಂಡಿ ಬೆಟ್ಟದಲ್ಲಿ ಶುಚಿತ್ವವೇ ಇಲ್ಲ.ದೇವಸ್ಥಾನದ ಆವರಣದಲ್ಲಿ ಯಾರೋ ಖಾಸಗಿ ವ್ಯಕ್ತಿಗಳು ಇದ್ದಾರೆ. ಅವರಿಗೆ ನಮ್ಮ ಮುಖ ಪರಿಚಯವೇ ಇಲ್ಲ. ದರ್ಶನಕ್ಕೆ ಬರುವ ಜನರನ್ನು ಎಳೆದು ಹಾಕುವ ಕೆಲಸ ಆಗುತ್ತಿದೆ. ಧಾರ್ಮಿಕ ಕ್ಷೇತ್ರದಲ್ಲಿ ಇಂತಹ ಘಟನೆ ನಡೆಯಬಾರದು.ಸ್ವಚ್ಛತೆ ಬಗ್ಗೆ ನಾವು ಸಾಕಷ್ಟು ಮಾತನಾಡುತ್ತೇವೆ. ದಸರಾ ಆಚರಣೆ ಜೊತೆಗೆ ಸ್ವಚ್ಛತೆ ಕಾಪಾಡಬೇಕು. ಇದರ ಜೊತೆಗೆ ಅಭಿವೃದ್ಧಿಯನ್ನು ಸಹ ಮಾಡಬೇಕು ಎಂದು ಮೈಸೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.