ವಿಜಯಪುರ: ರಾಜ್ಯಾಧ್ಯಂತ ಹೊಸದಾಗಿ ಸಾವಿರಾರೂ ಬಾರ್ ಲೈಸೆನ್ಸ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಇದು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸೋದಕ್ಕೆ ಅಲ್ಲ ಅಂತ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ಸ್ಪಷ್ಟ ಪಡಿಸಿದ್ದಾರೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕು ಚಿಕ್ಕಗಲಗಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಸಾವಿರಾರೂ ಬಾರ್ ಲೈಸೆನ್ಸ್ ಬಗ್ಗೆ ಇಲ್ಲ ಸಲ್ಲದ ಆರೋಪ ಸರಿಯಲ್ಲ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸೋದಕ್ಕೆ ಲೈಸೆನ್ಸ್ ನೀಡುತ್ತಿಲ್ಲ ಎಂಬುದಾಗಿ ತಿಳಿಸಿದರು.
ಎಲ್ಲದಕ್ಕೂ ಅಬಕಾರಿ ಇಲಾಖೆಯನ್ನು ಟಾರ್ಗೆಟ್ ಮಾಡೋದು ಬೇಡ. ಸಾಮಾನ್ಯವಾಗಿ ಬಾರ್ ಲೈಸೆನ್ಸ್ ನೀಡುತ್ತಿದ್ದೇವೆ ಎಂಬುದಾಗಿ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ಹೇಳಿದರು.
ಮಹಾರಾಷ್ಟ್ರ ಮಾರುಕಟ್ಟೆಗೂ, ನಮ್ಮ ಮಾರುಕಟ್ಟೆಗೂ ದರವನ್ನು ಪರಿಶೀಲಿಸಿ. ಅಜಗಜಾಂತರ ವ್ಯತ್ಯಾಸವಿದೆ. ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದ ಮದ್ಯ ಬರದಂತೆ ತಡೆಯೋದಕ್ಕೆ ಹೊಸ ಬಾರ್ ಗಳಿಗೆ ಲೈಸೆನ್ಸ್ ನೀಡುತ್ತಿರೋದಾಗಿ ತಿಳಿಸಿದರು.