ಬೆಂಗಳೂರು: ‘ಇನ್ನು ಮುಂದೆ ಸರ್ಕಾರ ‘ಜಾಡಮಾಲಿ’ ಪದ ಬಳಸಬಾರದು ಅದಕ್ಕೆ ಪರ್ಯಾಯವಾಗಿ ಸ್ವಚ್ಛತಾ ಸಹಾಯಕ ಎಂದೇ ಬಳಸಬೇಕು’ ಎಂದು ಹೈಕೋರ್ಟ್ ಮಹತ್ವದ ಆದೇಶವನ್ನು ಹೊರಡಿಸಿದೆ.
ಸಮಾಜದಲ್ಲಿ ಅಮೂಲ್ಯ ಸೇವೆ ಸಲ್ಲಿಸುವ ಒಂದು ವರ್ಗದ ನೌಕರರನ್ನು ಉದ್ದೇಶಿಸುವ ಪದ ಗೌರವದಿಂದ ಕೂಡಿರಬೇಕು. ಹೀಗಾಗಿ, ಸರ್ಕಾರ ಇನ್ನು ಮುಂದೆ ಜಾಡಮಾಲಿ ಪದದ ಬಳಕೆ ಮಾಡಬಾರದು ಆಂತ ತಿಳಿಸಿದೆ.ಹೆಚ್ಚುವರಿ ಅಡ್ವೊಕೇಟ್ ಜನರಲ್ ಎಸ್ ಎ ಅಹಮದ್ ಅವರು “ಸರ್ಕಾರ ಜಾಡಮಾಲಿ ಪದ ಬಳಸುತ್ತಿರುವುದು ಸರಿಯಲ್ಲ. ಆದ್ದರಿಂದ, ಈ ಪದಕ್ಕೆ ಪರ್ಯಾಯವಾಗಿ ಸ್ವಚ್ಛತಾ ನೌಕರ ಎಂಬುದನ್ನು ಬಳಸುವಂತೆ ಪೀಠ ಆದೇಶಿಸಬೇಕು” ಎಂದು ಕೋರಿದರು.ಮನವಿ ಪುರಸ್ಕರಿಸಿ, ಅದಕ್ಕೆ ಶ್ಲಾಘಿಸಿದ ಪೀಠವು ಮುಂದೆ ಜಾಡಮಾಲಿ ಪದದ ಬಳಕೆಯ ಬದಲಾಗಿ ‘ಸ್ವಚ್ಛತಾ ನೌಕರ’ ಎಂಬುದಾಗಿಯೇ ಬಳಸಬೇಕು” ಎಂದು ನ್ಯಾಯಾಂಗ ಆದೇಶ ಹೊರಡಿಸಿದೆ