ಬೆಂಗಳೂರು : ರಾಜ್ಯದಲ್ಲಿ ಶೇಕಡ 60ರಷ್ಟು ಕನ್ನಡ ನಾಮಫಲಕ ಅಳವಡಿಕೆಗೆ ಸಂಬಂಧಿಸಿದಂತೆ ಕನ್ನಡ ಪರ ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಕ್ರಿಯೆ ನೀಡಿದ್ದು ಸರ್ಕಾರ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ.ಅದರ ಬಗ್ಗೆ ಬೇರೆ ಪ್ರಶ್ನೆ ಏನಿಲ್ಲ ನಾಮಫಲಕ ಒಂದೇ ಅಲ್ಲ ಕನ್ನಡಿಗರ ಉದ್ಯೋಗದ ಬಗ್ಗೆನೂ ಸರ್ಕಾರ ಸ್ಪಷ್ಟವಾಗಿ ನಿಲ್ಲಬೇಕು ಎಂದು ತಿಳಿಸಿದರು.
BREAKING: ನಾಳೆ ಸಿಎಂ ಸಿದ್ಧರಾಮಯ್ಯಗೆ ‘ಜಾತಿಗಣತಿ ವರದಿ’ ಸಲ್ಲಿಕೆ – ಅಧ್ಯಕ್ಷ ಜಯಪ್ರಕಾಶ್ ಹೆಗಡೆ
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದ್ಯೋಗದ ಬಗ್ಗೆ ಸರ್ಕಾರದಲ್ಲಿ ಪ್ರಾಮಾಣಿಕತೆ ನನಗೆ ಕಾಣುತ್ತಿಲ್ಲ.ಕರ್ನಾಟಕದಲ್ಲಿ ಇದ್ದವರಿಗೆ, ನಿಮಗೆ ನೀರು ಬೇಕು, ಊಟ ಬೇಕು, ಜಾಗ ಬೇಕು ವ್ಯಾಪಾರ ವಹಿವಾಟು ಬೇಕು ಆದರೆ ನಿಮಗೆ ಕನ್ನಡದ ಅಭಿಮಾನ ಇಲ್ಲ ಅಂತ ಅಂದರೆ ನಿಮ್ಮೂರು ಗಳಿಗೆ ಹೋಗಿ ಉತ್ತರ ಭಾರತದವರು ಉತ್ತರಕ್ಕೆ ಹೋಗಿ ತಮಿಳರು ಅವರ ಊರಿಗೆ ಹೋಗಿ. ಆಂಧ್ರದವರು ಅವರ ಊರಿಗೆ ಹೋಗಿ ಎಂದರು.
ಎಚ್ಚರ, ನೀವು ಈ 5 ವಹಿವಾಟುಗಳನ್ನ ಮಾಡಿದ್ರೆ, ಮನೆಗೆ ‘ತೆರಿಗೆ ನೋಟಿಸ್’ ಬರುತ್ತೆ.!
ಆದರೆ ನಾಮಫಲಕ್ಕೆ ಇದಕ್ಕೆ ನಾವು ಹೋರಾಟ ಮಾಡಿ ಕಾಯ್ದೆ ಮಾಡಿ ನಿಮಗೆ ಹೇಳಬೇಕು ಅನ್ನುವುದಿದೆಯಲ್ಲ ಅದು ಅಗೌರವ. ವ್ಯಾಪಾರ ಆಗಬೇಕು ಆದರೆ ನಿಮಗೆ ಕನ್ನಡ ಬೇಡ್ವಾ ಇದು ಸಾಧ್ಯವಿಲ್ಲ. ನೀವು ಕರ್ನಾಟಕದಲ್ಲಿ ಇರಬೇಕಾ ಕನ್ನಡದಲ್ಲಿ ಹಾಕಿ ವ್ಯಾಪಾರ ವಹಿವಾಟು ಬೇಕ ಕನ್ನಡ ನಾಮಫಲಕ ಹಾಕಿ. ಇನ್ನೂ ಐಟಿ ಬಿಟಿ ಅವರಿಗೆ ಎಲ್ಲೂ ಇಲ್ಲದ ನೋವು ಎದುರಾಗಿದೆ.ಅವರು ಈ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ನಾಮಫಲಕ ಬಂದರೆ ಎಲ್ಲಾ ಊರು ಬಿಟ್ಟು ಹೊರಟು ಹೋಗುತ್ತಾರೆ ಅಂತ ಹೇಳುತ್ತಾರೆ.
ಚಾಮರಾಜನಗರ : ನರ್ಸಿಂಗ್ ಕಾಲೇಜಿನಲ್ಲಿ ಹೆಜ್ಜೇನು ದಾಳಿ : ಸಿಬ್ಬಂದಿ ಸೇರಿದಂತೆ ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
ಜಮೀನು ಕೊಟ್ಟವರ ನಾವು ನೀರು ಕೊಟ್ಟವರು ನಾವು ಕರೆಂಟ್ ಕೊಟ್ಟವರು ನಾವು ನಮ್ಮ ಫಲಕ ಬೇಡ್ವಾ? ಐಟಿ ಬಿಟಿ ಅವರಿಗೆ ಕನ್ನಡ ನಾಮಫಲಕ ಹಾಕಿ ಎಂದು ಎಚ್ಚರಿಕೆ ಕೊಡುತ್ತೇನೆ ಇದು ಸಂಪೂರ್ಣ ಹಾಕಬೇಕು ಒಂದು ವೇಳೆ ಹಾಕಲಿಲ್ಲ ಅಂದರೆ ನಾವೇ ಕಿತ್ತಾ ಹಾಕುತೇವಿ. ಸರ್ಕಾರ ಕನ್ನಡಿಗರಿಗೆ ಉದ್ಯೋಗ ಕೊಡಲೇಬೇಕು ಒಂದು ವೇಳೆ ಕೊಡದಿದ್ದರೆ ಕನ್ನಡಿಗರಿಗೆ ಮೋಸ ಮಾಡಿದಂತಾಗುತ್ತದೆ ಎಂದರು