ಬೆಂಗಳೂರು : ಗಣೇಶ ಹಬ್ಬದ ಸಂದರ್ಭದಲ್ಲಿ ಪೆಂಡಾಲ್ನಲ್ಲಿ ಪ್ರಸಾದ ತಯಾರಿಸುವ ಸಂಬಂಧ ರಾಜ್ಯ ಕಾಂಗ್ರೆಸ್ ಸರ್ಕಾರದ ಆದೇಶ ವಿರೋಧಿಸಿ ಬಿಜೆಪಿಯಿಂದ ಟ್ವೀಟ್ ಮಾಡಲಾಗಿದೆ. ಪರವಾನಗಿ ಪಡೆದವರಿಂದ ಮಾತ್ರ ಪ್ರಸಾದ ತಯಾರಿಸುವಂತೆ ಆದೇಶಿಸಲಾಗಿದ್ದು, ಸ್ಕ್ಯಾಮ್ ಸಿದ್ದರಾಮಯ್ಯನವರ ಓಲೈಕೆ ರಾಜಕಾರಣ ಪರಾಕಾಷ್ಠೆ ಮುಟ್ಟಿದೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
ಈ ಕುರಿತು ಬಿಜೆಪಿ ಟ್ವೀಟ್ ಮಾಡಿದ್ದೂ, ಸ್ಕ್ಯಾಮ್ ಸಿದ್ದರಾಮಯ್ಯನವರ ಓಲೈಕೆ ರಾಜಕಾರಣ ಪರಾಕಾಷ್ಠೆ ಮುಟ್ಟಿದೆ. ಗಣಪತಿ ಮೂರ್ತಿ ಪ್ರತಿಷ್ಠಾಪಿಸುವ ಪೆಂಡಾಲ್ ಗಳಲ್ಲಿ ದೇವರ ಪ್ರಸಾದವನ್ನು FSSAI ಪರವಾನಗಿ ಪಡೆದಿರುವ ವ್ಯಕ್ತಿ, ಸಂಸ್ಥೆಗಳಿಂದ ಮಾತ್ರ ತಯಾರಿಸುವಂತೆ ವಿಘ್ನ ಆದೇಶವನ್ನು ಹೊರಡಿಸಿ ಸಮಸ್ತ ಹಿಂದೂಗಳ ಮನಸ್ಸನ್ನು ಘಾಸಿಗೊಳಿಸಿದ್ದಾರೆ.
ಅನ್ಯಮತೀಯರ ಹಬ್ಬಗಳಲ್ಲಿ ಬೀದಿ ಬೀದಿಗಳಲ್ಲಿ ಆಹಾರ ಬೇಯಿಸುವಾಗ ಕೈ ಕಟ್ಟಿಕೊಂಡಿದ್ದ ಸಿದ್ದರಾಮಯ್ಯನವರು, ಈಗ ಹಿಂದೂಗಳ ಆರಾಧ್ಯ ದೈವ ಗಣಪತಿ ಹಬ್ಬದ ಆಚರಣೆಗೆ ಇಂಥ ವಿಘ್ನಾದೇಶಗಳನ್ನು ಹೊರಡಿಸುವ ಹಕೀಕತ್ತು ಏನಿದೆ? ಮುಖ್ಯಮಂತ್ರಿಗಳೇ, ನಿಮ್ಮ ಓಲೈಕೆಗೂ ಒಂದು ಮಿತಿ ಇರಲಿ ಎಂದು ಬಿಜೆಪಿ ಕುಟುಕಿದೆ.
ಸ್ಕ್ಯಾಮ್ @siddaramaiah ನವರ ಓಲೈಕೆ ರಾಜಕಾರಣ ಪರಾಕಾಷ್ಠೆ ಮುಟ್ಟಿದೆ.
ಗಣಪತಿ ಮೂರ್ತಿ ಪ್ರತಿಷ್ಠಾಪಿಸುವ ಪೆಂಡಾಲ್ ಗಳಲ್ಲಿ ದೇವರ ಪ್ರಸಾದವನ್ನು FSSAI ಪರವಾನಗಿ ಪಡೆದಿರುವ ವ್ಯಕ್ತಿ, ಸಂಸ್ಥೆಗಳಿಂದ ಮಾತ್ರ ತಯಾರಿಸುವಂತೆ ವಿಘ್ನಆದೇಶವನ್ನು ಹೊರಡಿಸಿ ಸಮಸ್ತ ಹಿಂದೂಗಳ ಮನಸ್ಸನ್ನು ಘಾಸಿಗೊಳಿಸಿದ್ದಾರೆ.
ಅನ್ಯಮತೀಯರ ಹಬ್ಬಗಳಲ್ಲಿ ಬೀದಿ… pic.twitter.com/ipBYdE9Gxn
— BJP Karnataka (@BJP4Karnataka) September 4, 2024