ಉಡುಪಿ : ಸರ್ಕಾರಿ ನೌಕರರ ಒಕ್ಕೂಟ ಬೆಂಗಳೂರು ಇವರು ವೇತನ ಆಯೋಗ ರಚನೆ ಹಾಗೂ ಎಸ್ ಪಿ ಎಸ್ ರದ್ದತಿ ಬಗ್ಗೆ ಸರ್ಕಾರದ ಗಮನ ಸೆಳೆಯಲು ಸೆ. 29 ರಂದು ಮುಷ್ಕರಕ್ಕೆ ಕರೆ ನೀಡಿದ್ದಾರೆ.
ಸರ್ಕಾರಿ ನೌಕರರ ಒಕ್ಕೂಟದ ಹೆಸರಿನಲ್ಲಿ ಸೆ. 29 ರಂದು ಕರೆ ನೀಡಿರುವ ಮುಷ್ಕರಕ್ಕೆ ನಮ್ಮ ಬೆಂಬಲವಿಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಉಡುಪಿ ಜಿಲ್ಲಾ ಶಾಖೆ ಬೆಂಬಲ ನೀಡುತ್ತಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದದವರು ಈ ಮುಷ್ಕರದಲ್ಲಿ ಯಾವುದೇ ನೌಕರರು ಭಾಗವಹಿಸುತ್ತಿಲ್ಲ ಎಂದು ಜಿಲ್ಲಾ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ಅಂಪಾರು ತಿಳಿಸಿದ್ದಾರೆ. ಸರ್ಕಾರಿ ನೌಕರರ ಒಕ್ಕೂಟ ಬೆಂಗಳೂರು ಇವರು ವೇತನ ಆಯೋಗ ರಚನೆ ಹಾಗೂ ಎಸ್ ಪಿ ಎಸ್ ರದ್ದತಿ ಬಗ್ಗೆ ಸರ್ಕಾರದ ಗಮನ ಸೆಳೆಯಲು ಸೆ. 29 ರಂದು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇದು ನಮ್ಮ ಗಮನಕ್ಕೆ ಬಂದಿದೆ. ಈಗಾಗಲೇ ವೇತನ ಆಯೋಗ ರಚಿಸುವ ಬಗ್ಗೆ ಸಿಎಂ ಭರವಸೆ ನೀಡಿದರೂ ನೌಕರರಲ್ಲಿ ಗೊಂದಲ ಮೂಡಿಸುತ್ತಿರುವುದು ವಿಪರ್ಯಾಸ ಎಂದರು.
7ನೇ ವೇತನ ಆಯೋಗದ ಶಿಫಾರಸುಗಳನ್ನು ಅಳವಡಿಸಿಕೊಳ್ಳುವುದರಿಂದ 2023-24ರಲ್ಲಿ ವೇತನದ ಮೇಲಿನ ರಾಜ್ಯ ಸರ್ಕಾರದ ವೆಚ್ಚವನ್ನು 15,654 ಕೋಟಿ ರೂ.ಗಳಷ್ಟು ಹೆಚ್ಚಿಸುವ ನಿರೀಕ್ಷೆಯಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಕಳೆದ 18 ತಿಂಗಳಿಂದ ತಡೆಹಿಡಿಯಲಾದ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಬಿಡುಗಡೆ ಮಾಡಬೇಕೆಂದು ಜಂಟಿ ಸಮಿತಿಯು ಒತ್ತಾಯಿಸಿತ್ತು. ಉದ್ಯೋಗಿಗಳ ಸಂಘಟನೆಯು ಕೆಲವು ಸರ್ಕಾರಿ ಹುದ್ದೆಗಳನ್ನು ರದ್ದುಪಡಿಸುವ ಪ್ರಸ್ತಾಪದ ಆಡಳಿತಾತ್ಮಕ ಸುಧಾರಣೆಗಳ ಮೇಲೆ ಗಮನ ಹರಿಸಿದೆ. ಖಾಲಿ ಇರುವ ಮೂರು ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಬದಲು ಹೆಚ್ಚುವರಿ ಹೊಣೆಗಾರಿಕೆಯನ್ನು ಸರ್ಕಾರಿ ನೌಕರರ ಮೇಲೆ ಹೊರಿಸಲಾಗುತ್ತಿದೆ ಎಂದು ಸರ್ಕಾರಿ ನೌಕರರ ಸಂಘವು ಆರೋಪಿಸಿತ್ತು.
BIGG NEWS : ಅಭ್ಯರ್ಥಿಗಳೇ ಗಮನಿಸಿ : ‘ಸಿಇಟಿ’ ಪರಿಷ್ಕೃತ Rank ಪಟ್ಟಿ ಅ.1 ರಂದು ಪ್ರಕಟ |KCET Result 2022
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಗಮನಕ್ಕೆ : ‘ಡಿ.ದೇವರಾಜ ಅರಸು ಪ್ರತಿಭಾ ಪುರಸ್ಕಾರ’ಕ್ಕಾಗಿ ಅರ್ಜಿ ಆಹ್ವಾನ