ಬೆಂಗಳೂರು : ಸರ್ಕಾರ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡಿದೆ ಹಣ ಬಾಕಿ ಉಳಿಸಿಕೊಂಡಿದ್ದರಿಂದ ಹಾಲು ಉತ್ಪಾದನೆಯು ಕುಂಠಿತಗೊಂಡಿದೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಈ ಕುರಿತು ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿತ್ತು ಹೀಗಾಗಿ ಪ್ರತಿನಿತ್ಯ 26 ಲಕ್ಷ ರೈತರಿಂದ 85 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು.ಆದರೆ ಕಾಂಗ್ರೆಸ್ ಸರ್ಕಾರ 716 ಕೋಟಿ ಬಾಕಿ ಹಣ ಉಳಿಸಿಕೊಂಡಿದೆ. ಇದರಿಂದ ರಾಜ್ಯದಲ್ಲಿ 10 ಲಕ್ಷ ಲೀಟರ್ ಹಾಲು ಸಂಗ್ರಹ ಕಡಿಮೆಯಾಗಿದೆ ಜನ ಅಷ್ಟೇ ಅಲ್ಲ ಜಾನುವಾರುಗಳು ಕೂಡ ಸರ್ಕಾರದ ಮೇಲೆ ಶಾಪ ಹಾಕುತ್ತಿವೆ.
ರಾಜ್ಯ ಸರ್ಕಾರ ಜಾನುವಾರುಗಳ ಕೋಪಕ್ಕು ಬಲಿಯಾಗಿದೆ.ರಾಜ್ಯ ಸರ್ಕಾರ ತನ್ನ ಹೊಣೆ ಮರೆತು ಕೇಂದ್ರದ ಕಡೆ ಕೈ ತೋರಿಸುತ್ತದೆ ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹ ಧನವನ್ನು ತಕ್ಷಣ ಬಿಡುಗಡೆ ಮಾಡಬೇಕು. ಜನ ಮತ್ತು ಜಾನುವಾರುಗಳ ಜೊತೆ ಹೋರಾಟ ಮಾಡಬೇಕಾಗುತ್ತದೆ ಪದೇ ಪದೇ ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲವೆಂದು ಟೀಕಿಸುತ್ತಾರೆ ನಾನು ಆ ಪದ ಬಳಸಲ್ಲ ಸರ್ಕಾರ ಕೂಡಲೇ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹ ಧನ ತಕ್ಷಣ ಬಿಡುಗಡೆ ಮಾಡಲಿ. ರೈತರ ಹಣ ಬಾಕಿ ಉಳಿಸಿಕೊಂಡ ಪಾಪದ ಸರ್ಕಾರ ವಾಗುತ್ತದೆ .ಹಣ ಬಿಡುಗಡೆ ಮಾಡದಿದ್ದರೆ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಬಿವೈ ವಿಜಯೇಂದ್ರ ತಿಳಿಸಿದರು.ಇನ್ನೂ ಬಿಜೆಪಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಬಿವೈ ವಿಜಯೇಂದ್ರಗೆ ಲಾಟರಿ ಮೂಲಕ ರಾಜ್ಯಾಧ್ಯಕ್ಷ ಆಗಿದ್ದರೆ ಎಂದು ಡಿಸಿಎಂ ಡಿಕೆ ಹೇಳಿಕೆಗೆ ಬಿವೈ ವಿಜಯೇಂದ್ರ ಇದೀಗ ತಿರುಗೇಟು ನೀಡಿದ್ದು ಲೋಕಸಭಾ ಚುನಾವಣೆಯಲ್ಲಿ ಇದಕ್ಕೆ ಜನರೇ ಉತ್ತರಿಸುತ್ತಾರೆ ಎಂದು ತಿಳಿಸಿದರು.