ತುಮಕೂರು: ರಾಜ್ಯದಲ್ಲೂ ವಿಧಾನಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡೋದಕ್ಕೆ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಿರಾಕರಿಸಿದ್ದರು. ಹೀಗಾಗಿ ತಮಿಳುನಾಡು ಬಳಿಕ ಕರ್ನಾಟಕದಲ್ಲೂ ರಾಜ್ಯಪಾಲರು ವರ್ಸರ್ ಸರ್ಕಾರದ ಸಂಘರ್ಷ ಆರಂಭಗೊಂಡಿತ್ತು. ಈ ಬೆನ್ನಲ್ಲೇ ಕರ್ನಾಟಕದಲ್ಲಿ ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆ ಹೇರಲಿದ್ದಾರೆ ಎಂಬುದಾಗಿ ಬಿಜೆಪಿ ಶಾಸಕ ಸುರೇಶ್ ಗೌಡ ಸ್ಪೋಟಕ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಅಸಂವಿಧಾನಿಕವನ್ನು ನನ್ನ ಕೈನಲ್ಲಿ ಓದಿಸಬೇಡಿ ಎಂಬುದಾಗಿ ರಾಜ್ಯಪಾಲರು ಈಗಾಗಲೇ ತೋರಿಸಿದ್ದಾರೆ. ಹೀಗಾಗಿ ಇನ್ನಾದರೂ ಕಾಂಗ್ರೆಸ್ ಪಕ್ಷದವರು ರಾಜ್ಯಪಾಲರನ್ನು ಗೌರವಯುತವಾಗಿ ಕಾಣಬೇಕು. ಇಲ್ಲದೇ ಹೋದರೇ ರಾಜ್ಯಪಾಲರು ರಾಷ್ಟ್ರಪತಿ ಆಡಳಿತವನ್ನು ಕರ್ನಾಟಕದಲ್ಲಿ ಹೇರುತ್ತಾರೆ ಎಂಬುದಾಗಿ ಎಚ್ಚರಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಕೆಲ ಶಾಸಕರು ರಾಜ್ಯಪಾಲರಿಗೆ ಧಮ್ಕಿ ಹಾಕಿದ್ದಾರೆ. ಇವರ ಗೂಂಡಾ ವರ್ತನೆಯಿಂದಲೇ ರಾಜ್ಯಪಾಲರು ಸದನದಲ್ಲಿ ಭಾಷಣ ಮಾಡದೇ ಗಡಿಬಿಡಿಯಿಂದಲೇ ಹೋಗಿದ್ದಾರೆ. ಇವರು ಬೆದರಿಕೆ ಹಾಕಿದ್ದಕ್ಕೇ ಸದನದಿಂದ ಅವರು ಭಯದಿಂದ ಹೋಗಿದ್ದು ಎಂಬುದಾಗಿ ಕಿಡಿಕಾರಿದರು.
SHOCKING: ಹೋಂ ವರ್ಕ್ ಮಾಡಲಿಲ್ಲವೆಂದು 4 ವರ್ಷದ ಮಗಳನ್ನೇ ಕೊಂದ ಪಾಪಿ ತಂದೆ
ಇನ್ಮುಂದೆ ಸರ್ಕಾರಿ ಅಧಿಕಾರಿಗಳು ‘ಜನಪ್ರತಿನಿಧಿ’ಗಳ ಪೋನ್ ಕಾಲ್ ಸ್ವೀಕರಿಸಲೇಬೇಕು: ರಾಜ್ಯ ಸರ್ಕಾರ ಖಡಕ್ ಆದೇಶ








