ಬೆಂಗಳೂರು : ದೇಶಾದ್ಯಂತ ಇಂದು 75ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದ್ದೂ ರಾಜಧಾನಿ ಬೆನಗಳೂರಿನಲ್ಲಿ ಮಾಣಿಕ್ ಶಾ ಮೈದಾನದಲ್ಲಿ ಇಂದು ಬೆಳಗ್ಗೆ 9 ಗಂಟೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ ಅವರು ಧ್ವಜಾರೋಹಣ ನೆರವೇರಿಸಲಿದ್ದು ಧ್ವಜಾರೋಹಣ ಮಾಡಿ ರಾಜ್ಯಪಾಲರು ಗೌರವವನ್ನು ಸ್ವೀಕರಿಸಲಿದ್ದಾರೆ. ಬಿಬಿಎಂಪಿ ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆಯಿಂದ ಗಣರಾಜ್ಯೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
38 ತುಕಡಿಯಿಂದ 1,150 ಜನ ಪರೇಡ್ ನಲ್ಲಿ ಭಾಗವಹಿಸಲಿದ್ದು ಪೊಲೀಸರು ಗ್ರಹ ರಕ್ಷಕ ದಳ ಕೇರಳ ಪೊಲೀಸರು ಸ್ಕೌಟ್ ಮತ್ತು ಗೈಡ್ಸ್ ಎನ್ಸಿಸಿ ಸೇರಿದಂತೆ ಶಾಲಾ ಮಕ್ಕಳು ಪೆರೇಡ್ ನಲ್ಲಿ ಭಾಗಿಯಾಗಲಿದ್ದಾರೆ. ಯಾವುದೇ ಅಹಿತಕರ ಘಟನೆ ಸಂಭವಿಸಿದಂತೆ ಪೊಲೀಸರು ಎಚ್ಚರಿಕೆವಹಿಸಿದ್ದು, 7,000 ಆಸನಗಳ ವ್ಯವಸ್ಥೆ ಇರಲಿದ್ದು 100 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.
ವಿಐಪಿ ವಿವಿಐಪಿ ಸಾರ್ವಜನಿಕರ ಪ್ರವೇಶಕ್ಕೆ ಪ್ರತ್ಯೇಕ ಗೇಟ್ ವ್ಯವಸ್ಥೆ ಮಾಡಲಾಗಿದ್ದು 9 ಡಿಸಿಪಿ, 16 ಎಸಿಪಿ 575 ಪೊಲೀಸ್ ಅಧಿಕಾರಿಗಳನ್ನು ಯೋಜನೆ ಮಾಡಲಾಗಿದೆ.ಒಂದು ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆ ನಿಯೋಜಿಸಲಾಗಿದೆ.ಕಬ್ಬನ್ ರಸ್ತೆ ಇನ್ ಫ್ರೆಂಟಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದ್ದು ಚಾಕು, ಸಿಗರೇಟ್, ಕಪ್ಪುಬಟ್ಟೆಗೆ ನಿರ್ಬಂಧ ವಿಧಿಸಲಾಗಿದೆ.
ಸಂಚಾರ ಮಾರ್ಗ ಬದಲಾವಣೆ
ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕೆಲ ಮಾರ್ಗ ಬದಲಾವಣೆ ಮಾಡಿದ್ದು ಬೆಂಗಳೂರಿನಲ್ಲಿ ಬೆಳಗ್ಗೆ 9:30 ರಿಂದ 10:30 ವರೆಗೆ ಕಬ್ಬನ್ ರಸ್ತೆ ಬಿ ಆರ್ ವಿ ಜಂಕ್ಷನ್ ಕಾಮರಾಜ ರಸ್ತೆಯಲ್ಲಿ ವಾಹನಗಳ ಸಂಚಾರ ಬಂದ್ ಮಾಡಲಾಗಿದೆ ಪರ್ಯಾಯ ಮಾರ್ಗಗಳ ಮೂಲಕ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಇನ್ಫೆಂಟ್ರಿ ರಸ್ತೆ ಮಣಿಪಾಲ ಸೆಂಟರ್ ಕಡೆ, ಸಂಚರಿಸುವ ವಾಹನಗಳು ಇನ್ವೆಂಟ್ರಿ ರಸ್ತೆ ಸಫಿನಾ ಪ್ರಜಾ ಮೂಲಕ ಎಡ ತಿರುವು ಪಡೆದುಕೊಂಡು ಮೈನ್ ಗಾರ್ಡ್ ದಿಕನ್ಸ್ ಅಂಡ್ ರಸ್ತೆ ಮೂಲಕ ಕಬ್ಬಣ ರಸ್ತೆಗೆ ಸಂಪರ್ಕವಿದೆ.