ಬೆಂಗಳೂರು : ಇಂದಿನಿಂದ 10 ದಿನಗಳ ವರೆಗೆ ಕರ್ನಾಟಕ ವಿಧಾನ ಮಂಡಲ ಬಜೆಟ್ ಅಧಿವೇಶನ ನಡೆಯುತ್ತಿದ್ದು, ರಾಜ್ಯಪಾಲರ ಭಾಷಣದ ಕುರಿತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ಹೊರ ಹಾಕಿದ್ದು, ಸರ್ಕಾರದ ‘ಗ್ಯಾಂರಂಟಿ ಯೋಜನೆ’ಗಳ ಕುರಿತು ರಾಜ್ಯಪಾಲರು ಬಹಳಷ್ಟು ಸುಳ್ಳು ಹೇಳಿದ್ದಾರೆಎಂದು ತಿಳಿಸಿದರು.
ರಾಜ್ಯಪಾಲರ ಭಾಷಣ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ರಾಜಕೀಯ ಅನುಭವದಲ್ಲಿ ಇಷ್ಟು ಸಪ್ಪೆ ನಿರಾಶೆಯ ಯಾವುದೇ ಭವಿಷ್ಯವಿಲ್ಲದ ದಿಕ್ಕು ದೆಸೆ ಇಲ್ಲದ ರಾಜ್ಯಪಾಲರ ಭಾಷಣವನ್ನು ನೋಡಿಲ್ಲ.ರಾಜ್ಯಪಾಲರ ಭಾಷಣ ಕಳೆದ 9 ತಿಂಗಳಲ್ಲಿ ರಾಜ್ಯದಲ್ಲಿ ಯಾವ ರೀತಿ ಅಭಿವೃದ್ಧಿ ಶೂನ್ಯವಾಗಿರುವಂತಹ ಒಂದು ಜನ ವಿರೋಧಿ ಸರ್ಕಾರವಿದೆ ಎಂಬುದನ್ನು ಪ್ರತಿಬಿಂಬಿಸುತ್ತಿದೆ ಎಂದು ತಿಳಿಸಿದರು.
ಯಾವುದಾದರೂ ಒಂದು ವಿಚಾರದಲ್ಲಿ ಗಟ್ಟಿಯಾಗಿ ಇಂತಹದರಲ್ಲಿ ನಾವು ಸಾಧನೆ ಮಾಡಿದ್ದೇವೆ ಎಂದು ಅವರಿಗೆ ಹೇಳಕ್ಕೆ ಆಗುವುದಿಲ್ಲ.ಒಂದು ಸುಳ್ಳಿನ ಕಂತೆ ರಾಜಪಾಲರ ಭಾಷಣವಾಗಿದೆ ಗ್ಯಾರಂಟಿಗಳ ಬಗ್ಗೆ ಬಹಳಷ್ಟು ಸುಳ್ಳುಗಳನ್ನು ಹೇಳಿದ್ದಾರೆ ನಾವು ಮಾಡಿರುವಂತಹ ಕೆಲಸವನ್ನು ತಾವು ಮಾಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ ಎಂದರು.
ಉದಾಹರಣೆಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ನಿರ್ಮಾಣವಾಗಿರಬಹುದು, ಹುಬ್ಬಳ್ಳಿಯಲ್ಲಿ ಜೈದೇವ ಸಂಸ್ಥೆ ಆರಂಭವಾಗಿರುವುದನ್ನು ನಾವು ಆರಂಭಿಸಿದ್ದು ಅದನ್ನ ತಾವು ಆರಂಭಿಸಿದ್ದೇವೆ ಎಂದು ಹೇಳುತ್ತಾರೆ.ನೀರಾವರಿಗೆ 10 ಸಾವಿರ ಕೋಟಿ ಖರ್ಚು ಮಾಡಿದ್ದೇವೆ ಎಂದು ಹೇಳಿದ್ದಾರೆ ದಯವಿಟ್ಟು ಈ ಕುರಿತು ವಿವರ ಕೊಡಬೇಕು ಎಂದು ಸವಾಲು ಹಾಕಿದರು.
ಬರಗಾಲ ಬಂದಿದೆ ರೂ. 30,000 ಎಕರೆಗೆ ನೀರಾವರಿಗೆ ಹಣ ಬಿಡುಗಡೆ ಮಾಡಿದ್ದೀವಿ ಅಂತ ಹೇಳುತ್ತಾರೆ.ಇದೆಲ್ಲ ಹಸಿ ಸುಳ್ಳು ಅದೇ ರೀತಿ ಇವತ್ತು ರಾಜ್ಯಪಾಲರ ಬಾಯಿಯಿಂದ ಬಹಳಷ್ಟು ಸುಳ್ಳು ಹೇಳಿಸಿದ್ದಾರೆ.ಮತ್ತು ತಮ್ಮ ಬೆನ್ನನ್ನು ತಾವೇ ಚೆಪ್ಪರಿಸಿಕೊಳ್ಳುವಂತ ಕೆಲಸ ಮಾಡಿದ್ದಾರೆ, ಕರ್ನಾಟಕ ಮಾಡೆಲ್ ಎಂದರೆ ಕಾಂಗ್ರೆಸ್ ಶಾಸಕರಿಗೆ ಕರ್ನಾಟಕ ಮಾಡೆಲ್ ಏನು ಎಂದು ಕೇಳಿದರೆ ಹೇಳುತ್ತಾರೆ.
ಕಾಂಗ್ರೆಸ್ ಶಾಸಕರು ಕ್ಷೇತ್ರದಲ್ಲಿ ಓಡಾಡದಂತಹ ಪರಿಸ್ಥಿತಿ ಸಿದ್ದರಾಮಯ್ಯ ಸರ್ಕಾರದಲ್ಲಿ ನಿರ್ಮಾಣವಾಗಿದೆ. ಇದುವರೆಗೂ ಒಂದು ಚಿಕ್ಕ ರಸ್ತೆ ಮಾಡಿಲ್ಲ. ಬರಗಾಲ ಬಂದರು ಬಿಡಿಗಾಸು ಬಿಡುಗಡೆಯಾಗಿಲ್ಲ. ಜಿಲ್ಲಾಧಿಕಾರಿ ಕೂಡ ಒಂದು ನಯಾ ಪೈಸೆ ಬಿಡುಗಡೆ ಮಾಡಿಲ್ಲ.ಬರಗಾಲದಲ್ಲಿ ರೈತರಿಗೆ ಪೂರ್ಣ ಪ್ರಮಾಣದ ಕಂಪೋಸಿಶನ್ ನೀಡಿಲ್ಲ ಶಾಲಾ ಮಕ್ಕಳು ಬಸ್ಸಿನಲ್ಲಿ ಓಡಾಡ ದಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂತಹ ದುಸ್ಥಿತಿಯ ಪ್ರತಿಬಿಂಬ ಈ ರಾಜ್ಯಪಾಲರ ಭಾಷಣವಾಗಿದೆ. ಇಂತಹ ಆಡಳಿತವನ್ನು ಜನರು ಬಯಸಿಲ್ಲ.ಜನರ ವಿಶ್ವಾಸಕ್ಕೆ ತಾವು ದ್ರೋಹ ಮಾಡಿದ್ದೀರಾ. ಹತ್ತು ವರ್ಷ ಯುಪಿಎ ಸರ್ಕಾರ ಹಾಗೂ 10 ಎನ್.ಡಿ.ಎ ವರ್ಷ ಸರ್ಕಾರ ಎಷ್ಟು ಹಣ ರಾಜ್ಯಕ್ಕೆ ಅನುದಾನ ಬಂದಿದೆ ಎಂಬುದ ಕುರಿತು ಸದನದಲ್ಲಿ ಚರ್ಚಿಸಲಾಗುತ್ತದೆ ಎಂದು ಅವರು ತಿಳಿಸಿದರು.