Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಹಾಸನದಲ್ಲಿ ‘ಹೃದಯಾಘಾತಕ್ಕೆ’ ಮತ್ತೊಂದು ಬಲಿ : ಚಲಿಸುತ್ತಿದ್ದ ಕಾರಿನಲ್ಲಿಯೇ ಹಾರ್ಟ್ ಅಟ್ಯಾಕ್ ಗೆ ವ್ಯಕ್ತಿ ಸಾವು!

06/07/2025 5:08 PM

SHOCKING : ಯಾದಗಿರಿ : ಮೊಹರಂ ಕೆಂಡ ತುಳಿದ ಕೆಲವೇ ಕ್ಷಣಗಳಲ್ಲಿ ‘ಹೃದಯಘಾತಕ್ಕೆ’ ವ್ಯಕ್ತಿ ಬಲಿ

06/07/2025 4:35 PM

BREAKING : ಬೆಳಗಾವಿಯಲ್ಲಿ ಭೀಕರ ಅಪಘಾತ : ‘KSRTC’ ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು!

06/07/2025 4:28 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯಪಾಲರು ಬಿಜೆಪಿ ಏಜೆಂಟರು: ಕೆಪಿಸಿಸಿ ಮುಖ್ಯ ವಕ್ತಾರ ಎ.ಎನ್ ನಟರಾಜ್ ಗೌಡ ಕಿಡಿ
KARNATAKA

ರಾಜ್ಯಪಾಲರು ಬಿಜೆಪಿ ಏಜೆಂಟರು: ಕೆಪಿಸಿಸಿ ಮುಖ್ಯ ವಕ್ತಾರ ಎ.ಎನ್ ನಟರಾಜ್ ಗೌಡ ಕಿಡಿ

By kannadanewsnow0917/08/2024 5:01 PM

ಬೆಂಗಳೂರು: ರಾಜ್ಯಪಾಲರು ಬಿಜೆಪಿ ಏಜೆಂಟರು ಎಂಬುದಾಗಿ ಪದವೀಧರರ ಘಟಕ, ಕೆಪಿಸಿಸಿ, ಹಾಗೂ ಮುಖ್ಯ ವಕ್ತಾರರಾದಂತ ಎ.ಎನ್ ನಟರಾಜ್ ಗೌಡ ಅವರು ಕಿಡಿಕಾರಿದ್ದಾರೆ.

ಸಾಂವಿಧಾನಿಕ ಪ್ರಜ್ಞೆಯ ಸಂಕೇತವಾಗಿದ್ದ ರಾಜ್ಯಪಾಲರನ್ನು ಮತ್ತವರು ಕಾರ್ಯನಿರ್ವಹಿಸುವ ರಾಜಭವನವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಮ್ಮ ಪಕ್ಷ ಮತ್ತು ಸರ್ಕಾರದ ಏಜಂಟರನ್ನಾಗಿ ಮಾಡಿಕೊಂಡಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕರಣದ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ಜನಾಭಿಪ್ರಾಯ ಮತ್ತು ಜನತಂತ್ರಗಳ ಭಾಗವಾಗಿ ದೇಶಾದ್ಯಂತ ಗೆದ್ದು ಬಂದಿರುವ ತಮಗೆ ರುಚಿಸದ ಸರ್ಕಾರಗಳನ್ನು ಅದರ ಮುಖ್ಯಮಂತ್ರಿಗಳನ್ನು ಕ್ಷುಲ್ಲಕ ಕಾರಣಗಳ ಮೂಲಕ ದಮನಿಸುವ ಬಿ.ಜೆ.ಪಿ ಕಾರ್ಯಸೂಚಿ ಪ್ರಜಾಪ್ರಭತ್ವಕ್ಕೆ ನಾರಕ ಎಂಬುದಯ ಈಗ ಜಗಜ್ಜಾಹಿರಾಗಿದೆ. ಇದಕ್ಕೆ ಕನ್ನಡ ನಾಡಿನ ನೆಲ ಎಂದಿಗೂ ಅವಕಾಶ ಕೊಡುವುದಿಲ್ಲ ಎಂದು ಕೆಪಿಸಿಸಿ ಪದವಿಧರರ ವಿಭಾಗದ ರಾಜ್ಯ ಅಧ್ಯಕ್ಷರಾದ ಎ.ಎನ್.ನಟರಾಜ್ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವರು ಮತ್ತು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿಯವರ ವಿರುದ್ಧದ ಗಣಿ ಹಗರಣದ ತನಿಖೆ ಕೈಗೊಳ್ಳುವಂತೆ ಲೋಕಾಯುಕ್ತ ಸಂಸ್ಥೆ ಕಳೆದ 10 ತಿಂಗಳ ಹಿಂದೆಯೇ ರಾಜ್ಯಪಾಲರಿಗೆ ಅನುಮತಿ ಕೋರಿತ್ತು. ಅದೂ ಸಾಲದೆಂಬಂತೆ ಹಿಂದಿನ ಸರ್ಕಾರದ ಸಚಿವೆಯಾಗಿದ್ದ ಶಶಿಕಲಾ ಜೊಲ್ಲೆ ವಿರುಧ್ಧದ ದೂರು ಕೂಡ ಇತ್ಯರ್ಥಪಡಿಸದೇ ಹಾಗೇ ಉಳಿಸಿಕೊಂಡಿರುವ ಮಾನ್ಯ ರಾಜ್ಯಪಾಲರು, ಕೇವಲ ಮುಖ್ಯಮಂತ್ರಿ ಸಿಧ್ದರಾಮಯ್ಯನವರ ವಿರುಧ್ದ ಬಂದ ದೂರಿನ ಬಗ್ಗೆಯಷ್ಟೆ ವಿಶೇಷ ಆಸಕ್ತಿ ವಹಿಸಿರುವುದರಲ್ಲಿ ರಾಜಕೀಯ ಷಡ್ಯಂತ್ರ ಅಡಗಿದೆ ಎಂಬುದು ನೂರಕ್ಕೆ ನೂರರಷ್ಟು ಸತ್ಯ.

ಹೆಚ್. ಡಿ.ಕುಮಾರಸ್ವಾಮಿ ಸೇರಿದಂತೆ ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಮುರುಗೇಶ ನಿರಾಣಿ ಮೇಲಿರುವ ಗುರುತರ ದೂರುಗಳ ವಿರುದ್ಧ ತನಿಖೆ ನಡೆಸಲು ಕೋರಿದ್ದ ಕಡತವನ್ನ ರಾಜ್ಯಪಾಲರು ಮೂಲೆಗೆ ತಳ್ಳಿದ್ದಾರೆ ಎಂಬುದನ್ನು ರಾಜಭವನದ ಅವರ ಕೊಠಡಿಯಲ್ಲಿ ಕೊಳೆಯುತ್ತಿರುವ ಕಡತಗಳೇ ಸಾಕ್ಷೀಕರಿಸುತ್ತಿವೆ. ಹೀಗೆ ತನಿಖೆಗಾಗಿ ಕಾಯುತ್ತಿರುವ ಕಡತಗಳನ್ನು ವಿಲೇವಾರಿ ಮಾಡುವುದು ಬಿಟ್ಟು ರಾಜ್ಯಪಾಲರು, ಸಿದ್ದರಾಮಯ್ಯನವರ ಮೇಲೆ ಬೆಳಿಗ್ಗೆ ನೀಡಿದ ದೂರಿಗೆ ಅವತ್ತು ಸಂಜೆಯೇ ಶರಾ ಬರೆದು ಕಡತ ವಿಲೇವಾರಿಗೆ ಇನ್ನಿಲ್ಲದ ಆಸಕ್ತಿ ವಹಿಸಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ರಾಜ್ಯಪಾಲರ ಇಂತಹ ನಡೆಯು ಸಾಂವಿಧಾನಿಕ ಹುದ್ದೆಯ ಅಪಮೌಲ್ಯೀಕರಣದ ಜೊತೆಗೆ ಅದರ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತಿದೆ ಎಂದು ಎ.ಎನ್.ನಟರಾಜಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಮೂಡ’ ಪ್ರಕರಣದ ವಿರುಧ್ದ ರಾಜ್ಯಪಾಲರಿಗೆ ಸಲ್ಲಿಕೆಯಾಗಿರುವ ದೂರನ್ನು ಪರಾಮರ್ಶೆಗೆ ಒಳಪಡಿಸಿದರೆ, ದೂರಿನ ಹಿಂದಿನ ರಾಜಕಾರಣ ಸರಳವಾಗಿ ಅರ್ಥವಾಗುತ್ತದೆ. ನ್ಯಾಯಾಲಯದಿಂದಲೇ ಛೀಮಾರಿ ಹಾಕಿಸಿಕೊಂಡಿರುವ ವ್ಯಕ್ತಿ ನೀಡಿದ ದೂರನ್ನು ಆಧರಿಸಿ, ಮಾನ್ಯ ರಾಜ್ಯಪಾಲರು ರಾತ್ರೋರಾತ್ರಿ ಮುಖ್ಯಮಂತ್ರಿ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿಗೊಳಿಸುತ್ತಾರೆ. ಒಂದರ್ಥದಲ್ಲಿ ರಾಜ್ಯಪಾಲರು, ದೇಶದ ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ದೂರು ಪ್ರಕರಣಗಳಿಗಿಂತಲೂ ವೇಗವಾಗಿ ಪ್ರಕರಣ ದಾಖಲಿಸಿಕೊಂಡು ಅಷ್ಟೇ ವೇಗದಲ್ಲಿ ಪ್ರಕರಣದ ತನಿಖೆಯನ್ನು ಮುಗಿಸಲು ರಾಜಭವನವನ್ನು ‘ತ್ವರಿತ ನ್ಯಾಯಾಲಯ’ ಆಗಿ ಪರಿವರ್ತಿಸುವ ಆಸೆ ಹೊಂದಿದ್ದಾರೆ ಎನ್ನುವ ಅನುಮಾನ ನಮ್ಮೆಲ್ಲರನ್ನು ಕಾಡುತ್ತಿದೆ ಎಂದು ಎ.ಎನ್.ನಟರಾಜ್ ಗೌಡ ರಾಜ್ಯಪಾಲರ ನಡೆಗೆ ವ್ಯಂಗ್ಯವಾಡಿದ್ದಾರೆ.

ಇಂಥವೆಲ್ಲ ರಾಜಕೀಯ ಹಿನ್ನೆಲೆಯ ಪ್ರಕರಣಗಳ ಹೊರತಾಗಿ ರಾಜ್ಯಪಾಲರು ನಿರ್ವಹಿಸುವ ಕೆಲಸ ಕಾರ್ಯಗಳು ಬಹಳಷ್ಟಿವೆ. ನಾಡಿನ ಜನಸಮುದಾಯಗಳ ಆರ್ಥಿಕ ಮತ್ತು ಸಾಮಾಜಿಕ ಪರಸ್ಥಿತಿ ಸುಧಾರಿಸಲು ರಾಜ್ಯ ಸರ್ಕಾರಕ್ಕೆ ಕೇಂದ್ರದ ಮೂಲಕ ಅಗತ್ಯ ಉತ್ತೇಜನಗಳನ್ನು ದೊರಕಿಸಿಕೊಡಲು ಸೇತುವೆಯಾಗಿ ರಾಜ್ಯಪಾಲರು ಕೆಲಸ ಮಾಡಬೇಕಿರುತ್ತದೆ. ಇಂತಹ ನ್ಯಾಯ ಸಮ್ಮತ ಮತ್ತು ಸಂವಿಧಾನದ ಆಶಯಗಳ ಪರವಾಗಿ ಇರಬೇಕಿದ್ದ ರಾಜ್ಯಪಾಲರು, ಒಂದು ಪಕ್ಷ ದ ನೇತೃತ್ವದ ಸರ್ಕಾರದ ಏಜಂಟರಾಗಿ, ಚುನಾಯಿತ ಸರ್ಕಾರದ ಅಸ್ಥಿರತೆಗೆ ಪ್ರಯತ್ನಿಸುವುದು ಅವರು ಕುಳಿತಿರುವ ಹುದ್ದೆಯ ಘನತೆಗೆ ತಕ್ಕುದಾದದ್ದಲ್ಲ. ಈ ಕೂಡಲೇ ಮಾನ್ಯ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಕರ್ನಾಟಕದ ರಾಜ್ಯಪಾಲರ ಸಂವಿಧಾನ ಬಾಹಿರ ಕೃತ್ಯವನ್ನು ಪರಿಗಣಿಸಿ ಅವರನ್ನು ರಾಜ್ಯಪಾಲರ ಹುದ್ದೆಯಿಂದ ವಜಾಗೊಳಿಸಬೇಕೆಂದು ಅಗ್ರಹಪಡಿಸುತ್ತೇನೆ ಎಂದು ಎ.ಎನ್.ನಟರಾಜ್ ಗೌಡ ಒತ್ತಾಯಿಸಿದ್ದಾರೆ.

ಸಿಎಂ ಸಿದ್ಧಾರಮಯ್ಯ ವಿರುದ್ಧದ ಮುಡಾ ಹಗರಣ: ರಾಜೀನಾಮೆಗೆ ಛಲವಾದಿ ನಾರಾಯಣಸ್ವಾಮಿ ಆಗ್ರಹ

ಆ.19ರಂದು ರಾಜ್ಯಾಧ್ಯಂತ ‘ಜಿಲ್ಲಾ ಕೇಂದ್ರ’ಗಳಲ್ಲಿ ಪ್ರತಿಭಟನೆಗೆ ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್’ ಆದೇಶ | Karnataka Congress

BREAKING : ಪ್ರಾಸಿಕ್ಯೂಷನ್ ಗೆ ಅನುಮತಿ : `CM ಸಿದ್ದರಾಮಯ್ಯ’ ಬೆನ್ನಿಗೆ ನಿಂತ ಕುರುಬ ಸಮುದಾಯ

Share. Facebook Twitter LinkedIn WhatsApp Email

Related Posts

SHOCKING : ಹಾಸನದಲ್ಲಿ ‘ಹೃದಯಾಘಾತಕ್ಕೆ’ ಮತ್ತೊಂದು ಬಲಿ : ಚಲಿಸುತ್ತಿದ್ದ ಕಾರಿನಲ್ಲಿಯೇ ಹಾರ್ಟ್ ಅಟ್ಯಾಕ್ ಗೆ ವ್ಯಕ್ತಿ ಸಾವು!

06/07/2025 5:08 PM1 Min Read

SHOCKING : ಯಾದಗಿರಿ : ಮೊಹರಂ ಕೆಂಡ ತುಳಿದ ಕೆಲವೇ ಕ್ಷಣಗಳಲ್ಲಿ ‘ಹೃದಯಘಾತಕ್ಕೆ’ ವ್ಯಕ್ತಿ ಬಲಿ

06/07/2025 4:35 PM1 Min Read

BREAKING : ಬೆಳಗಾವಿಯಲ್ಲಿ ಭೀಕರ ಅಪಘಾತ : ‘KSRTC’ ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು!

06/07/2025 4:28 PM1 Min Read
Recent News

SHOCKING : ಹಾಸನದಲ್ಲಿ ‘ಹೃದಯಾಘಾತಕ್ಕೆ’ ಮತ್ತೊಂದು ಬಲಿ : ಚಲಿಸುತ್ತಿದ್ದ ಕಾರಿನಲ್ಲಿಯೇ ಹಾರ್ಟ್ ಅಟ್ಯಾಕ್ ಗೆ ವ್ಯಕ್ತಿ ಸಾವು!

06/07/2025 5:08 PM

SHOCKING : ಯಾದಗಿರಿ : ಮೊಹರಂ ಕೆಂಡ ತುಳಿದ ಕೆಲವೇ ಕ್ಷಣಗಳಲ್ಲಿ ‘ಹೃದಯಘಾತಕ್ಕೆ’ ವ್ಯಕ್ತಿ ಬಲಿ

06/07/2025 4:35 PM

BREAKING : ಬೆಳಗಾವಿಯಲ್ಲಿ ಭೀಕರ ಅಪಘಾತ : ‘KSRTC’ ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು!

06/07/2025 4:28 PM

ನಿಮ್ಮ ಸುತ್ತ ಮುತ್ತ ಯಾರಾದರೂ ಕುಸಿದು ಬಿದ್ದಾಗ ಏನು ಮಾಡಬೇಕು? ಮಿಸ್‌ ಮಾಡದೇ ಓದಿ

06/07/2025 4:23 PM
State News
KARNATAKA

SHOCKING : ಹಾಸನದಲ್ಲಿ ‘ಹೃದಯಾಘಾತಕ್ಕೆ’ ಮತ್ತೊಂದು ಬಲಿ : ಚಲಿಸುತ್ತಿದ್ದ ಕಾರಿನಲ್ಲಿಯೇ ಹಾರ್ಟ್ ಅಟ್ಯಾಕ್ ಗೆ ವ್ಯಕ್ತಿ ಸಾವು!

By kannadanewsnow0506/07/2025 5:08 PM KARNATAKA 1 Min Read

ಹಾಸನ : ಇತ್ತೀಚೆಗೆ ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಹಾಸನದಲ್ಲಿ ಕಳೆದ 45 ದಿನಗಳಲ್ಲಿ 35ಕ್ಕೂ ಹೆಚ್ಚು ಜನರು…

SHOCKING : ಯಾದಗಿರಿ : ಮೊಹರಂ ಕೆಂಡ ತುಳಿದ ಕೆಲವೇ ಕ್ಷಣಗಳಲ್ಲಿ ‘ಹೃದಯಘಾತಕ್ಕೆ’ ವ್ಯಕ್ತಿ ಬಲಿ

06/07/2025 4:35 PM

BREAKING : ಬೆಳಗಾವಿಯಲ್ಲಿ ಭೀಕರ ಅಪಘಾತ : ‘KSRTC’ ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು!

06/07/2025 4:28 PM

ನಿಮ್ಮ ಸುತ್ತ ಮುತ್ತ ಯಾರಾದರೂ ಕುಸಿದು ಬಿದ್ದಾಗ ಏನು ಮಾಡಬೇಕು? ಮಿಸ್‌ ಮಾಡದೇ ಓದಿ

06/07/2025 4:23 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.