ಬೆಂಗಳೂರು : ಕರ್ನಾಟಕ ಕೆರೆ ಸಂರಕ್ಷಣ ಮತ್ತು ಅಭಿವೃದ್ಧಿ ಪ್ರಾಧಿಕಾರ ವಿಧೇಯಕವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ವಾಪಸ್ ಕಳುಹಿಸಿದ್ದಾರೆ. ಕೆರೆ ವಿಸ್ತೀರ್ಣ ಅನುಗುಣವಾಗಿ ಬಫರ್ ಜೋನ್ ನಿಗದಿಗೊಳಿಸಿದ ಬಿಲ್, ರಾಜಪಾಲರ ಅಂಕಿತಕ್ಕೆ ಕಳುಹಿಸಲಾಗಿದ್ದ ವಿಧೇಯಕವನ್ನು ಗವರ್ನರ್ ವಾಪಸ್ ಕಳುಹಿಸಿದ್ದಾರೆ.
ಕೆಲವು ಸ್ಪಷ್ಟನೆ ಕೇಳಿ ರಾಜಪಾಲರು ರಾಜ್ಯ ಸರ್ಕಾರಕ್ಕೆ ವಿದೇಕವನ್ನು ವಾಪಸ್ ಕಳುಹಿಸಿದ್ದಾರೆ. ಕರ್ನಾಟಕ ಟ್ಯಾಂಕ್ ಸುರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ-2014 ಕಾಯ್ದೆಯ ಸೆಕ್ಷನ್ -12 ತಿದ್ದುಪಡಿ ಮಾಡಲು ಪ್ರಸ್ತಾಪಿಸಿದೆ. ಬಿಲ್ಗೆ ಒಪ್ಪಿಗೆ ನೀಡಿದಂತೆ ರಾಜಪಾಲರ ಕಚೇರಿಗೆ ಆಕ್ಷೇಪಣೆ ಸಲ್ಲಿಸಲಾಗಿದೆ. ಬೆಂಗಳೂರು ಟೌನ್ ಹಾಲ್ ಅಸೋಸಿಯೇಷನ್ ಆಕ್ಷೆಪಣೆ ಸಲ್ಲಿಸಿದೆ. ತಜ್ಞರ ಅಭಿಪ್ರಾಯದ ಪ್ರಕಾರ 30 ಮೀಟರ್ ಬಫರ್ ಜೋನ್ ಸಾಕಾಗುವುದಿಲ್ಲ. ಪರಿಸರ ವ್ಯವಸ್ಥೆ ಸಮತೋಲನಕ್ಕಾಗಿ 300 ಮೀಟರ್ ಅವಶ್ಯಕತೆ ಇದೆ.
ರಾಜ್ಯ ಸರ್ಕಾರ ಬಫರ್ ಜೋನ್ ಕಡಿಮೆ ಮಾಡದೆ ಹೆಚ್ಚಳ ಮಾಡಬೇಕು. ರಾಜ್ಯ ಸರ್ಕಾರವು ತಜ್ಞರ ಸಮಿತಿಯೊಂದಿಗೆ ಸಮಾಲೋಚನೆ ನಡೆಸಿಲ್ಲ. ತಿದ್ದುಪಡಿ ಪರಿಣಾಮಗಳ ಬಗ್ಗೆ ಸಾರ್ವಜನಿಕರ ಜೊತೆಗೆ ಚರ್ಚೆ ನಡೆಸಿಲ್ಲ ಈ ವಿಷಯದಲ್ಲಿ ಸರಿಯಾದ ಸ್ಪಷ್ಟೀಕರಣ ನೀಡಿ ಮತ್ತೊಮ್ಮೆ ಸಲ್ಲಿಸಿ ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿ ಗವರ್ನರ್ ವಿಧೇಯಕವನ್ನು ವಾಪಸ್ ಕಳುಹಿಸಿದ್ದಾರೆ.