ಬೆಂಗಳೂರು: ತೀವ್ರ ವಿರೋಧದಿಂದಾಗಿ ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾ ಮಂಡಳಿ ಅಧ್ಯಕ್ಷ ಹಾಗೂ ಬಿಜೆಪಿ ಕಾರ್ಯಕರ್ತ ಡಾ.ಬಿ.ಡಿ ಭೂಕಾಂತ್ ಅವರಿಗೆ ನೀಡಿದ್ದಂತ ರಾಜ್ಯ ಸಚಿವ ಸಂಪುಟ ಸ್ಥಾನವನ್ನ ಸರ್ಕಾರ ಹಿಂಪಡೆದು ಆದೇಶಿಸಿದೆ.
ರಾಜ್ಯ ಸರ್ಕಾರದಿಂದ ಕೆಲ ದಿನಗಳ ಹಿಂದಷ್ಟೇ ನಿಗಮ, ಮಂಡಳಿಗಳ ಅಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಿ ಆದೇಶಿಸಿತ್ತು. ಇದರಲ್ಲಿ ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಂಡಳಿ ಅಧ್ಯಕ್ಷ ಡಾ.ಬಿ.ಡಿ ಭೂಕಾಂತ್ ಕೂಡ ಸೇರಿದ್ದರು. ಅವರು ಬಿಜೆಪಿ ಕಾರ್ಯಕರ್ತರಾಗಿದ್ದರಿಂದ ಇದಕ್ಕೆ ತೀವ್ರ ವಿರೋಧವೇ ವ್ಯಕ್ತವಾಗಿತ್ತು.
ಈ ಹಿನ್ನಲೆಯಲ್ಲಿ ಇಂದು ರಾಜ್ಯ ಸರ್ಕಾರವು ಬಿ.ಡಿ.ಭೂಕಾಂತ್ ಅವರಿಗೆ ನೀಡಿದ್ದ ರಾಜ್ಯ ಸಂಪುಟ ಸ್ಥಾನವನ್ನ ಸರ್ಕಾರ ಹಿಂಪಡೆದಿರುವುದಾಗಿ ಆದೇಶ ಹೊರಡಿಸಿದೆ. ಆ ಮೂಲಕ ತೀವ್ರ ವಿರೋಧದ ಕಾರಣದಿಂದಾಗಿ ಬಿಜೆಪಿ ಕಾರ್ಯಕರ್ತನಿಗೆ ನೀಡಿದ್ದಂತ ರಾಜ್ಯ ಸಚಿವ ಸಂಪುಟ ದರ್ಜೆಯ ಸ್ಥಾನಮಾನವನ್ನು ಹಿಂಪಡೆದಿದೆ.

ಮಲಗುವ ಮುನ್ನ ಬೆಣ್ಣೆ ತಿನ್ನುವುದರಿಂದ ನಿಜವಾಗಿಯೂ ಚೆನ್ನಾಗಿ ನಿದ್ರೆ ಬರಬಹುದೇ? | Eating Butter
SHOCKING: ಪರೀಕ್ಷೆಗೆ ಹೆದರಿ SSLC ವಿದ್ಯಾರ್ಥಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ








