Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

FSSAI ಪ್ರಕಾರ ದಿನಕ್ಕೆ ಎಷ್ಟು ಪ್ರಮಾಣದ ಎಣ್ಣೆ ಸೇವನೆ ಉತ್ತಮ? ಆರೋಗ್ಯಕರ ಜೀವನಕ್ಕೆ ಇಲ್ಲಿದೆ ಟಿಪ್ಸ್!

04/04/2026 4:35 AM

Watch Video: ಬೆಚ್ಚಿಬೀಳಿಸುವ ವಿಡಿಯೋ: ಗುಜರಾತ್‌ನಲ್ಲಿ ಸ್ಕೂಟಿ ಸವಾರನ ಮೇಲೆ ಮುಗಿಬಿದ್ದ ಅತಿ ಬಲಶಾಲಿ ಗೂಳಿ!

04/04/2026 4:30 AM

ಮಕ್ಕಳಲ್ಲಿನ ಲೈಂಗಿಕ ಕುತೂಹಲ ಮತ್ತು ನಡವಳಿಕೆ: ಪೋಷಕರು ತಿಳಿದಿರಲೇಬೇಕಾದ ಸತ್ಯಗಳು

04/04/2026 4:11 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣ ಶೂನ್ಯಕ್ಕೆ ಇಳಿಸಲು ಸರ್ಕಾರ ಮಹತ್ವದ ಕ್ರಮ: ಉನ್ನತ ಮಟ್ಟದ ಸಮಿತಿ ರಚನೆ
KARNATAKA

ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣ ಶೂನ್ಯಕ್ಕೆ ಇಳಿಸಲು ಸರ್ಕಾರ ಮಹತ್ವದ ಕ್ರಮ: ಉನ್ನತ ಮಟ್ಟದ ಸಮಿತಿ ರಚನೆ

By kannadanewsnow0920/02/2026 3:10 PM

ಬೆಂಗಳೂರು: ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ಅಭಿಯಾನವನ್ನು ಸರ್ಕಾರ ಆರಂಭಿಸಿದೆ. ಇದರ ಪರಿಣಾಮಕಾರಿ ಅನುಷ್ಟಾನಕ್ಕಾಗಿ ಉನ್ನುತ ಮಟ್ಟದ ಸಮಿತಿಯನ್ನು ರಚನೆ ಮಾಡಿ ಸರ್ಕಾರ ಆದೇಶಿಸಿದೆ.

ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, 2025-26ನೇ ಸಾಲಿನ ಆಯವ್ಯಯ ಕಂಡಿಕೆ- 136ರಲ್ಲಿ ರಾಜ್ಯದಲ್ಲಿ ತಡೆಗಟ್ಟಬಹುದಾದ ತಾಯಿ ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ಅಭಿಯಾನದ ಘೋಷಣೆಯನ್ವಯ ತಾಯಂದಿರ ಮರಣ ಅನುಪಾತ (MMR) ಕಡಿತಗೊಳಿಸಲು ರೂ. ಕೋಟಿಗಳ ವೆಚ್ಚದಲ್ಲಿ KTPP ಕಾಯ್ದೆ ಮತ್ತು ನಿಯಮಗಳನ್ನು ಅನುಸರಿಸಿ ಅನುಷ್ಠಾನಗೊಳಿಸಲು ಸಮಗ್ರ ಕ್ರಿಯಾಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿರುತ್ತದೆ ಎಂದಿದೆ.

ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ರವರ ಏಕಕಡತದಲ್ಲಿ 2025-26ನೇ ಸಾಲಿನ ಆಯವ್ಯಯ ಕಂಡಿಕೆ-136ರ ಘೋಷಣೆಯನ್ವಯ ಆಡಳಿತಾತ್ಮಕ ಅನುಮೋದನೆ ನೀಡಲಾಗಿರುವ ಆಕುಕ 172 ಎಫ್.ಪಿ.ಎಸ್ 2025, ದಿನಾಂಕ:13.10.2025 ಆದೇಶದಲ್ಲಿ ತಾಯಂದಿರ ಮರಣ ಅನುಪಾತ (ಎಮ್.ಎಮ್.ಆರ್.) ಶೂನ್ಯಕ್ಕೆ ಇಳಿಸುವ ಗುರಿಯನ್ನು ಸಾಧಿಸಲು ಪುಸ್ತಾಪಿಸಲಾಗಿರುವ ಕ್ರಿಯಾಯೋಜನೆಯಲ್ಲಿ ಕ್ರಸಂ.4 ರಲ್ಲಿ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸರ್ಕಾರಿ ಮಟ್ಟದಲ್ಲಿ ಉನ್ನತ ಮಟ್ಟ ಒಂದು ಅಧಿಕಾರಯುಕ್ತ ಸಮಿತಿಯನ್ನು ರಚಿಸಲು ಪುಸ್ತಾಪಿಸಲಾಗಿದ್ದು, ಅದರನ್ವಯ ಈ ಕೆಳಕಂಡ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಲು ಕೋರಿ ಪುಸ್ತಾವನೆಯನ್ನು ಸಲ್ಲಿಸಲಾಗಿರುತ್ತದೆ.

  • ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರು- ಅಧ್ಯಕ್ಷರು
  • ಪ್ರಧಾನ ಕಾರ್ಯದರ್ಶಿ, ಹಣಕಾಸು ಇಲಾಖೆ – ಸದಸ್ಯರು
  • ಪ್ರಧಾನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ -ಸಂಚಾಲಕರು
  • ಪ್ರಧಾನ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ಇಲಾಖೆ- ಸದಸ್ಯರು
  • ಪ್ರಧಾನ ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ – ಸದಸ್ಯರು
  • ಪ್ರಧಾನಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ – ಸದಸ್ಯರು
  • ಪ್ರಧಾನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ – ಸದಸ್ಯರು
  • ಪ್ರಧಾನ ಕಾರ್ಯದರ್ಶಿ, ಶಿಕ್ಷಣ ಇಲಾಖೆ -ಸದಸ್ಯರು
  • ಪ್ರಧಾನ ಕಾರ್ಯದರ್ಶಿ ಯೋಜನೆ, ಅರ್ಥಶಾಸ್ತ್ರ ಮತ್ತು ಸಾಂಖ್ಯಿಕ ಇಲಾಖೆ- ಸದಸ್ಯರು

ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ತಾಯಂದಿರ ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ಅಭಿಯಾನದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಈ ಕೆಳಕಂಡಂತೆ ಉನ್ನತ ಮಟ್ಟದ ಅಧಿಕಾರಯುಕ್ತ ಸಮಿತಿಯನ್ನು ರಚಿಸಿದೆ.

  • ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರು- ಅಧ್ಯಕ್ಷರು
  • ಪ್ರಧಾನ ಕಾರ್ಯದರ್ಶಿ, ಹಣಕಾಸು ಇಲಾಖೆ – ಸದಸ್ಯರು
  • ಪ್ರಧಾನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ -ಸಂಚಾಲಕರು
  • ಪ್ರಧಾನ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ಇಲಾಖೆ- ಸದಸ್ಯರು
  • ಪ್ರಧಾನ ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ – ಸದಸ್ಯರು
  • ಪ್ರಧಾನಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ – ಸದಸ್ಯರು
  • ಪ್ರಧಾನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ – ಸದಸ್ಯರು
  • ಪ್ರಧಾನ ಕಾರ್ಯದರ್ಶಿ, ಶಿಕ್ಷಣ ಇಲಾಖೆ -ಸದಸ್ಯರು
  • ಪ್ರಧಾನ ಕಾರ್ಯದರ್ಶಿ ಯೋಜನೆ, ಅರ್ಥಶಾಸ್ತ್ರ ಮತ್ತು ಸಾಂಖ್ಯಿಕ ಇಲಾಖೆ- ಸದಸ್ಯರು

ಸಮಿತಿಯ ಅಧಿಕಾರಗಳು:

1. ಖಾಲಿ ಇರುವ ನಿರ್ಣಾಯಕ (Critical) ಮಂಜೂರಾದ ಹುದ್ದೆಗಳನ್ನು ಒಪ್ಪಂದ ಅಥವಾ ಹೊರಗುತ್ತಿಗೆ ಮೂಲಕ ಭರ್ತಿ ಮಾಡಲು ಅನುಮತಿ ನೀಡುವ ಅಧಿಕಾರ.

2. ಶಿಸ್ತು ಕ್ರಮಕ್ಕೆ ಸಂಬಂಧಿಸಿದ ಆಡಳಿತಾತ್ಮಕ ಅಧಿಕಾರಗಳು ಮತ್ತು ನಿರ್ದಿಷ್ಟ ಕಾರ್ಯಗಳಿಗಾಗಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳನ್ನು ನಿಯೋಜಿಸುವುದು.

3. ಅಂತರ ಇಲಾಖಾ ಸಮನ್ವಯತೆಗೆ ನಿರ್ದೇಶನ ನೀಡುವುದು.

ಸಮಿತಿಯ ಕಾರ್ಯಗಳು

1. ರಾಜ್ಯದಲ್ಲಿ ತಾಯಂದಿರ ಮರಣದ ಕಾರಣಗಳನ್ನು ಪರಿಶೀಲಿಸಿ, ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವುದು.

2. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಗರಾಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ ಮತ್ತು ಇತರ ಸಂಬಂಧಿತ ಇಲಾಖೆಗಳ ನಡುವೆ ಸಮನ್ವಯವನ್ನು ಖಚಿತಪಡಿಸಿಕೊಳ್ಳುವುದು. ಇದರಿಂದ ತಡೆಗಟ್ಟಬಹುದಾದ ತಾಯಂದಿರ ಮರಣವನ್ನು ಶೂನ್ಯಕ್ಕೆ ಇಳಿಸುವ ಅಭಿಯಾನಕ್ಕೆ ಸಹಾಯವಾಗುತ್ತದೆ.

3. ಎಲ್ಲಾ ಗರ್ಭಿಣಿ ಮಹಿಳೆಯರಿಗೆ ತಾಯಂದಿರ ಆರೋಗ್ಯ ಸೇವೆಗಳ ಸಾರ್ವತ್ರಿಕ ಲಭ್ಯತೆಯನ್ನು ಖಚಿತಪಡಿಸಿ ಕೊಳ್ಳುವುದು.

4. ವಿಶೇಷವಾಗಿ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ತಾಯಂದಿರ ಆರೋಗ್ಯ ಆರೈಕೆಯ ಅಸಮಾನತೆಗಳನ್ನು ಪರಿಹರಿಸುವುದು.

5. ಸುರಕ್ಷಿತ ಹೆರಿಗೆಗಾಗಿ ಅಗತ್ಯವಾದ ಮಾನವಸಂಪನ್ಮೂಲಗಳು, ಉಪಕರಣಗಳು, ಔಷಧಿಗಳು ಮತ್ತು ಸೇವೆಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಪ್ರಾಥಮಿಕ, ಮಾಧ್ಯಮಿಕ ಮತ್ತು ತೃತೀಯ ಹಂತದ ಆರೋಗ್ಯ ಸೇವೆಗಳನ್ನು ಬಲಪಡಿಸುವುದು.

5. ಆರೈಕೆಯ ಗುಣಮಟ್ಟ ಮತ್ತು ತಾಯಿಯ ಆರೋಗ್ಯ ಫಲಿತಾಂಶಗಳನ್ನು ಸುಧಾರಿಸಲು ಹೊಣೆಗಾರಿಕೆ ಹಾಗೂ ಕಾರ್ಯವಿಧಾನಗಳನ್ನು ಸ್ಥಾಪಿಸುವುದು.

7. ಖಾಸಗಿ ವಲಯದೊಂದಿಗೆ ಸಮನ್ವಯ ಸಾಧಿಸಿ, ರಾಜ್ಯವ್ಯಾಪಿ ತಾಯಿಯ ಆರೋಗ್ಯ ಸೇವೆಗಳ ನಿರಂತರತೆಯನ್ನು ಖಚಿತಪಡಿಸಿಕೊಳ್ಳುವುದು.

8. ಮುಂದಿನ ಎರಡು ವರ್ಷಗಳಲ್ಲಿ ಕರ್ನಾಟಕದಲ್ಲಿ ತಾಯಂದಿರ ಮರಣ ಮಾಡುವ ಗುರಿಯನ್ನು ಸಾಧಿಸಲು 40 ಅನುಪಾತವನ್ನು (MMR) ಕ್ಕಿಂತ ಕಡಿಮೆ ಕಾರ್ಯನಿರ್ವಹಿಸುವುದು.

 

ರಾಜ್ಯ ಸರ್ಕಾರದಿಂದ ‘ಮೂತ್ರಪಿಂಡ ಕಸಿ’ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್

Share. Facebook Twitter LinkedIn WhatsApp Email

Related Posts

ಆತಿಥ್ಯ ವಹಿಸಿದ ಬೀದರ್ ಜಿಲ್ಲೆ KUWJ ಪ್ರಶಸ್ತಿ ಪ್ರಕಟ: 94 ವರ್ಷದ ಶಿವಶರಣಪ್ಪ ವಾಲಿ ಸೇರಿ 9 ಪತ್ರಕರ್ತರಿಗೆ ಗೌರವ

03/04/2026 10:07 PM1 Min Read

BIG UPDATE: ಆರೋಗ್ಯದಲ್ಲಿ ಚೇತರಿಗೆ, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಆಸ್ಪತ್ರೆಯಿಂದ ಡಿಸ್ಚಾರ್ಜ್

03/04/2026 7:42 PM1 Min Read

ರೈತರು ನೀರಾವರಿ ಕಛೇರಿ ಮುಂದೆ ಹೋರಾಟ ಮಾಡಲ್ಲ: ಮದ್ದೂರು ಶಾಸಕ ಕೆ.ಎಂ.ಉದಯ್

03/04/2026 6:50 PM2 Mins Read
Recent News

FSSAI ಪ್ರಕಾರ ದಿನಕ್ಕೆ ಎಷ್ಟು ಪ್ರಮಾಣದ ಎಣ್ಣೆ ಸೇವನೆ ಉತ್ತಮ? ಆರೋಗ್ಯಕರ ಜೀವನಕ್ಕೆ ಇಲ್ಲಿದೆ ಟಿಪ್ಸ್!

04/04/2026 4:35 AM

Watch Video: ಬೆಚ್ಚಿಬೀಳಿಸುವ ವಿಡಿಯೋ: ಗುಜರಾತ್‌ನಲ್ಲಿ ಸ್ಕೂಟಿ ಸವಾರನ ಮೇಲೆ ಮುಗಿಬಿದ್ದ ಅತಿ ಬಲಶಾಲಿ ಗೂಳಿ!

04/04/2026 4:30 AM

ಮಕ್ಕಳಲ್ಲಿನ ಲೈಂಗಿಕ ಕುತೂಹಲ ಮತ್ತು ನಡವಳಿಕೆ: ಪೋಷಕರು ತಿಳಿದಿರಲೇಬೇಕಾದ ಸತ್ಯಗಳು

04/04/2026 4:11 AM
BIG BREAKING NEWS: Mild tremors felt again in Kodagu's Sampaje

BREAKING: ದೆಹಲಿ-ಎನ್‌ಸಿಆರ್, ಉತ್ತರ ಭಾರತದ ಹಲವು ಭಾಗಗಳಲ್ಲಿ ಭೂಕಂಪನದ ಅನುಭವ | Earthquick In Delhi-NCR

03/04/2026 10:12 PM
State News
KARNATAKA

ಆತಿಥ್ಯ ವಹಿಸಿದ ಬೀದರ್ ಜಿಲ್ಲೆ KUWJ ಪ್ರಶಸ್ತಿ ಪ್ರಕಟ: 94 ವರ್ಷದ ಶಿವಶರಣಪ್ಪ ವಾಲಿ ಸೇರಿ 9 ಪತ್ರಕರ್ತರಿಗೆ ಗೌರವ

By kannadanewsnow0903/04/2026 10:07 PM KARNATAKA 1 Min Read

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಬೀದರ್‌ನಲ್ಲಿ ಏ.11 ಮತ್ತು 12 ರಂದು ನಡೆಯಲಿರುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನ…

BIG UPDATE: ಆರೋಗ್ಯದಲ್ಲಿ ಚೇತರಿಗೆ, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಆಸ್ಪತ್ರೆಯಿಂದ ಡಿಸ್ಚಾರ್ಜ್

03/04/2026 7:42 PM

ರೈತರು ನೀರಾವರಿ ಕಛೇರಿ ಮುಂದೆ ಹೋರಾಟ ಮಾಡಲ್ಲ: ಮದ್ದೂರು ಶಾಸಕ ಕೆ.ಎಂ.ಉದಯ್

03/04/2026 6:50 PM

SSLC ಪರೀಕ್ಷೆಯಲ್ಲಿ ತೃತೀಯ ಭಾಷೆ ಅಂಕ ಕಡಿತ: ಸರ್ಕಾರದ ನಿರ್ಧಾರ ಮರುಪರಿಶೀಲಿಸುವಂತೆ ರಾಜ್ಯಪಾಲರ ಪತ್ರ

03/04/2026 6:38 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.