ಕಲಬುರಗಿ: ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದರಿಂದ ರಾಜ್ಯ ಸರ್ಕಾರ ಮೀನಾ ಮೇಷ ಏಣಿಸದೇ ಈ ಕೂಡಲೇ ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ಮಾಜಿ ಶಾಸಕ, ರಾಜಕುಮಾರ ಪಾಟೀಲ್ ತೇಲ್ಕೂರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಕೇಂದ್ರ ಸರ್ಕಾರ ಪ್ರಸಕ್ತವಾಗಿ ತೊಗರಿ ಖರೀದಿಗೆ ಒಪ್ಪಿಗೆ ನೀಡಿದ್ದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರದ ಸಚಿವ ಪ್ರಲ್ಹಾದ ಜೋಶಿ ಹಾಗೂ ಶಿವರಾಜಸಿಂಗ್ ಚೌವಾಣ ಅವರನ್ನು ಪತ್ರಿಕಾ ಹೇಳಿಕೆಯಲ್ಲಿ ತೇಲ್ಕೂರ ಅಭಿನಂದಿಸಿ. ಕೇಂದ್ರ ಸರ್ಕಾರ 9.67 ಲಕ್ಷ ಮೆಟ್ರಿಕ್ ಟನ್ ತೊಗರಿ ಖರೀದಿಗೆ ಕೇಂದ್ರ ಅನುಮತಿ ನೀಡಿದ್ದನ್ನು ಸಹ ಸ್ವಾಗತ ವ್ಯಕ್ತಪಡಿಸಿದ್ದಾರೆ. ಕೇಂದ್ರದ ಅನುಮತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈಗಿನಿಂದಲೇ ರೈತರ ನೊಂದಣಿ ಪ್ರಕ್ರಿಯೆ ಆರಂಭಿಸಿ ವಾರದೊಳಗೆ ತೊಗರಿ ಖರೀದಿ ಶುರು ಮಾಡಬೇಕೆಂದಿದ್ದಾರೆ.
ಸಾವಿರ ರೂ ಪ್ರೋತ್ಸಾಹ ಧನ ನೀಡಲಿ
ಅತಿವೃಷ್ಟಿ ಯಿಂದ ತೊಗರಿ ಬೆಳೆ ಹಾನಿಯಾಗಿ ಅಲ್ಲಲ್ಲಿ ಅಲ್ಪ ಸ್ವಲ್ಪ ಬೆಳೆ ಉಳಿದು ರಾಶಿಯಾಗುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗಿಂತ ಕಡಿಮೆವಿದ್ದು, ಕ್ವಿಂಟಾಲ್ ತೊಗರಿಗೆ ಕೇವಲ 7000 ರೂ. ದರದಲ್ಲಿ ಮಾರಾಟವಾಗುತ್ತಿದೆ. ರೈತರಿಗೆ ಕ್ವಿಂಟಾಲ್ ಗೆ 9000 ರೂ. ದರದಲ್ಲಿ ಖರೀದಿ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ ಜತೆಗೆ ಮಾರುಕಟ್ಟೆಯಲ್ಲೂ ದರ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹೀಗಾಗಿ ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್ ಗೆ ಸಾವಿರ ರೂ ಪ್ರೋತ್ಸಾಹ ಧನ ನಿಗದಿ ಮಾಡಿ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಪ್ರಾರಂಭಿಸಬೇಕು. ಕೇಂದ್ರದ ಬೆಂಬಲ ಬೆಲೆ ಕ್ವಿಂಟಾಲ್ ಗೆ 8 ಸಾವಿರ ರೂ ಇದ್ದು, ರಾಜ್ಯ ಸರ್ಕಾರ 1 ಸಾವಿರ ರೂ ಪ್ರೋತ್ಸಾಹ ಧನ ನಿಗದಿ ಮಾಡಿದರೆ ಕ್ವಿಂಟಾಲ್ ಗೆ 9 ಸಾವಿರ ರೂ ದರದಲ್ಲಿ ಖರೀದಿ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ತೇಲ್ಕೂರ ಆಗ್ರಹಿಸಿದ್ದಾರೆ.
ಕಳೆದ ವರ್ಷ ನೆಪಕ್ಕೆ ಮಾತ್ರ ತೊಗರಿ ಖರೀದಿ ಆರಂಭಿಸಲಾಗಿತ್ತು. ರೈತರ ನೊಂದಣಿಗೂ ಸಹ ಹಿಂದೇಟು ಹಾಕಲಾಯಿತ್ತಲ್ಲದೇ ತೊಗರಿ ಖರೀದಿ ಪ್ರಕ್ರಿಯೆಯೇ ನಡೆಯಲಿಲ್ಲ. ಮಾರುಕಟ್ಟೆಯಲ್ಲಿ ತೊಗರಿ ದರ ಬೆಂಬಲ ಬೆಲೆಗಿಂತ ಕಡಿಮೆಯಾಗಿದ್ದರೂ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಇಚ್ಚಾಶಕ್ತಿ ಕೊರತೆಯಿಂದ ಖರೀದಿ ನಡೆಯಲಿಲ್ಲ ಹಾಗೂ ರೈತರ ನೆರವಿಗೆ ಬರಲೇ ಇಲ್ಲ. ಹೀಗಾಗಿ ರೈತ ಮಾರುಕಟ್ಟೆಯಲ್ಲಿ ಇದ್ದ ದರಕ್ಕೆ ತೊಗರಿ ಮಾರಾಟ ಮಾಡಿ ಕೈ ಸುಟ್ಟುಕೊಂಡಿದ್ದಾನೆ. ಆದರೆ ಈ ಸಲ ಪ್ರತಿ ರೈತನು ತೊಗರಿ ಖರೀದಿ ಕೇಂದ್ರಗಳಲ್ಲೇ ಮಾರಾಟ ಮಾಡುವಂತೆ ಕ್ರಮ ಕೈಗೊಳ್ಳಬೇಕು. ಪ್ರಮುಖವಾಗಿ ಪಿಕೆಪಿಎಸ್ ಕಾರ್ಯದರ್ಶಿಗಳಿಗೆ ಖಡಕ್ ಎಚ್ಚರಿಕೆ ನೀಡಬೇಕು. ಒಂದು ವೇಳೆ ಸರ್ಕಾರ ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದ್ದಲ್ಲಿ ರೈತರು ಯಾವತ್ತು ಕ್ಷಮಿಸುವುದಿಲ್ಲ ಎಂದಿದ್ದಾರೆ.
ಎನ್ ಡಿ ಆರ್ ಎಫ್ ಅಡಿ ಎಲ್ಲರಿಗೂ ಪರಿಹಾರ ದೊರಕಲಿ: ಪ್ರಸಕ್ತವಾಗಿ ಅತಿವೃಷ್ಟಿಯಿಂದ ಬೆಳೆಗಳು ಹಾಳಾಗಿ ರೈತ ತೊಂದರೆಯಲ್ಲಿರುವುದು ಎಲ್ಲರಿಗೂ ತಿಳಿದ ವಿಷಯ. ಹೀಗಾಗಿ ಸರ್ಕಾರ ಇಷ್ಟೋತ್ತಿಗೆ ಬೆಳೆ ಹಾನಿ ಪರಿಹಾರವನ್ನು ಸಂಪೂರ್ಣವಾಗಿ ರೈತರ ಖಾತೆಗೆ ಜಮಾ ಮಾಡಬೇಕಿತ್ತು. ಮೂರು ಇಲ್ಲವೇ ಆರೇಳು ಸಾವಿರ ರೂ ಮಾತ್ರ ಹಾಕಲಾಗಿದೆ. ಎನ್ ಡಿಆರ್ ಎಫ್ ನಿಯಮಾವಳಿ ಅಡಿ ಪ್ರತಿಯೊಬ್ಬ ರೈತರಿಗೆ ಕೇಂದ್ರ ಸರ್ಕಾರದವೇ ಹೆಕ್ಟೇರ್ ಗೆ 8500 ರೂ. ನಂತೆ ಎರಡು ಹೆಕ್ಟೇರ್ ಸೇರಿ 17000 ರೂ ನೀಡಲಾಗುತ್ತದೆ. ಅದರ ಜತೆಗೆ ರಾಜ್ಯ ಸರ್ಕಾರದ್ದು ಸೇರಿದರೆ 34000 ರೂ. ಆಗುತ್ತದೆ. ಆದ್ದರಿಂದ ಪ್ರತಿ ರೈತಗೆ 34 ಸಾವಿರ ರೂ ಪರಿಹಾರ ನೀಡಬೇಕು. ಇಲ್ಲದಿದ್ದರೆ ರಾಜ್ಯ ಸರ್ಕಾರದ ಬೊಕ್ಕಸ್ ಖಾಲಿಯಾಗಿದೆ ಎಂಬುದಾಗಿ ತಿಳಿದುಕೊಳ್ಳಬೇಕಾಗುತ್ತದೆ. ಎಂದಿದ್ದಾರೆ.
ರೈತರು ಈಗಾಗಲೇ ತೊಗರಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸುವಂತೆ ಹಾಗೂ ಪ್ರೋತ್ಸಾಹ ಧನ ನೀಡುವಂತೆ ಆಗ್ರಹಿಸಿದ್ದಾರೆ. ಅದೇ ತೆರನಾಗಿ ಸರ್ಕಾರದ ಬಿಡಿಗಾಸು ಬೆಳೆ ಹಾನಿ ಪರಿಹಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳೆ ಹಾನಿ ಸಮೀಕ್ಷೆ ಸರೊಯಾಗಿ ಮಾಡದ ಕಾರಣ ರೈತರಿಗೆ ಹಾನಿ ತಕ್ಕ ಪರಿಹಾರ ಸಿಗದಂತಾಗಿದೆ. ಆದ್ದರಿಂದ ಸರ್ಕಾರ ಎಲ್ಲ ರೈತರಿಗೆ ಪರಿಹಾರ ದೊರಕಲು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ರೈತರು ಬೀದಿಗಿಳಿದು ಕಾನೂನು ಕೈಗೆತ್ತಿಕೊಂಡರೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ತೇಲ್ಕೂರ ಎಚ್ಚರಿಕೆ ನೀಡಿದ್ದಾರೆ.
100ಕ್ಕೆ 100ರಷ್ಟು ಬೆಳೆವಿಮೆ ದೊರಕಲಿ: ಪ್ರಸಕ್ತವಾಗಿ ಕೇಂದ್ರದ ಪ್ರಧಾನ ಮಂತ್ರಿ ಫಸಲು ವಿಮಾ ಯೋಜನೆ ಅಡಿ ಅತಿ ಹೆಚ್ಚಿನ ರೈತರು ಬೆಳೆವಿಮೆ ಮಾಡಿಸಿದ್ದಾರೆ. ಹೀಗಾಗಿ ತೊಗರಿ ಬೆಳೆ ಹಾಳಾಗಿದ್ದರಿಂದ ನೂರಕ್ಕೆ ನೂರಷ್ಟು ಬೆಳೆ ವಿಮೆ ದೊರಕುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಲಾಡಳಿತ ಮುಂದಾಗಬೇಕು. ಕನಿಷ್ಠ ಸಾವಿರ ಕೋ.ರೂ. ಯಾದರೂ ಜಿಲ್ಲೆಯ ರೈತರಿಗೆ ಬೆಳೆವಿಮೆ ದೊರಕಬೇಕೆಂದಿದ್ದಾರೆ.
ಈ ಮಂತ್ರವನ್ನು ಪಠಿಸಿ ನೋಡಿ, ಗುರು ರಾಯರೇ ಕನಸ್ಸಿನಲ್ಲಿ ಬಂದು ನಿಮ್ಮ ಕಷ್ಟ ನಿವಾರಣೆ
ಬೆಂಗಳೂರು ಜನತೆಗೆ ಮತ್ತೊಂದು ಗುಡ್ ನ್ಯೂಸ್: ‘ಗುಲಾಬಿ ಮಾರ್ಗ’ದ ಮೊದಲ ಚಾಲಕರಹಿತ ರೈಲು ಅನಾವರಣ








