ಬೆಂಗಳೂರು: ರಾಜ್ಯ ಸರ್ಕಾರದಿಂದ 2025ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಆಯ್ಕೆಗೆ ಸಲಹಾ ಸಮಿತಿಯನ್ನು ರಚಿಸಿ ಆದೇಶಿಸಿದೆ.
ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, 2025ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರನ್ನು ಆಯ್ಕೆ ಮಾಡಲು ಈ ಕೆಳಕಂಡ ಆಯ್ಕೆ ಸಲಹಾ ಸಮಿತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ರಚಿಸಿ ಆದೇಶಿಸಿದ್ದಾರೆ.
2025ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಆಯ್ಕೆಗೆ ರಚಿಸಿದಂತ ಸಲಹಾ ಸಮಿತಿಯ ಅಧ್ಯಕ್ಷರನ್ನಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರನ್ನು ನೇಮಿಸಿದ್ದರೇ, ಸದಸ್ಯರನ್ನಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ, ಸಮಾಜ ಸೇವೆ ಕ್ಷೇತ್ರದಿಂದ ಬೀದರಿನ ಮಾರುತಿ ಬೌದ್ಧೆ, ಉಡುಪಿಯ ಕೆ.ಪಿ ಸುರೇಶ್, ಕೊಪ್ಪಳದ ಇಟಿ ರತ್ನಕರ್ ತಳವಾರ ಅವರನ್ನು ನೇಮಕ ಮಾಡಲಾಗಿದೆ.
ಸಾಹಿತ್ಯ ಕ್ಷೇತ್ರದಿಂದ ಸದಸ್ಯರನ್ನಾಗಿ ಧಾರವಾಡದ ಡಾ.ಮಾಲತಿ ಪಟ್ಟಣಶೆಟ್ಟಿ, ಬೆಂಗಳೂರಿನ ಪ್ರೊ.ಜಿ.ಅಬ್ದುಲ್ ಬಷೀರ್, ಕೋಲಾರದ ಚಂದ್ರಶೇಖರ ನಂಗ್ಲಿ, ಉತ್ತರ ಕನ್ನಡದ ಡಾ.ಎಂಕೆ ಮಾಸ್ಕೇರಿ ನಾಯಕ್, ಹಾಸನದ ಹೆಚ್.ಕೆ ಸುಬ್ಬು ಹೊಲೇಯಾರ್, ಶಿವಮೊಗ್ಗದ ಡಿ.ಬಿ ರಜಿಯಾ, ದಕ್ಷಿಣ ಕನ್ನಡದ ಸಬಿಹಾ ಭೂಮಿಗೌಡ ಅವರನ್ನು ನೇಮಕ ಮಾಡಲಾಗಿದೆ.
ಇನ್ನೂ ಜಾನಪದ ಕ್ಷೇತ್ರದಿಂದ ಸದಸ್ಯರನ್ನಾಗಿ ಗದಗ ಸಿದ್ದಣ್ಣ ಜಕ್ಕಬಾಳ, ದಕ್ಷಿಣ ಕನ್ನಡದ ಪ್ರೊ.ಶಿವರಾಂಶೆಟ್ಟಿ, ಬೆಂಗಳೂರಿನ ಡಾ.ಅಪ್ಪಗೆರೆ ತಿಮ್ಮರಾಜು ನೇಮಿಸಿದೆ. ಹೀಗೆ ಒಟ್ಟು 47 ಮಂದಿಯನ್ನು ಆಯ್ಕೆ ಸಲಹಾ ಸಮಿತಿಗೆ ನಿಯೋಜಿಸಿದೆ.
ಬೆಂಗಳೂರಿನ ಲಾಡ್ಜ್ ನಲ್ಲಿ ಯುವಕ-ಯುವತಿ ಸಾವು ಕೇಸಿಗೆ ಬಿಗ್ ಟ್ವಿಸ್ಟ್: ಪೊಲೀಸರ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ
‘RBD ಮೋಟಾರ್ಸ್’ನ ನೂತನ ‘ರಾಯಲ್ ಎನ್ ಫೀಲ್ಡ್ ಶೋ ರೂಂ’ ಉದ್ಘಾಟಿಸಿದ ‘ಶಾಸಕ ಗೋಪಾಲಕೃಷ್ಣ ಬೇಳೂರು’