ಬೆಂಗಳೂರು : ಲೋಕಾಯುಕ್ತ ಉಪಲೋಕಾಯುಕ್ತ ಹೆಸರಲ್ಲಿ ವಂಚನೆಗೆ ಯತ್ನ ಮಾಡಿದ್ದು, ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ಲೋಕಾಯುಕ್ತ ಉಪಲೋಕಾಯುಕ್ತ ಹೆಸರಲ್ಲಿ ವಂಚಕರು ಗಾಳ ಹಾಕಿದ್ದಾರೆ. ಟ್ರೂ ಕಾಲರ್ ನಲ್ಲಿ ಲೋಕಾಯುಕ್ತ ಹೆಸರು ನಮೂದಿಸಿ ಕಿಡಿಗೇಡಿಗಳು ಕರೆ ಮಾಡಿದ್ದಾರೆ.
ಹೌದು ಬಿಬಿಎಂಪಿ AEE ಗೆ ಕರೆ ಮಾಡಿದ್ದಾರೆ ಟ್ರೂ ಕಾಲರ್ ನಲ್ಲಿ ಲೋಕಾಯುಕ್ತ ಬಿ ಎಸ್ ಪಾಟೀಲ್ ಅಂತ ಹೆಸರು ಬಂದಿದೆ. ಉಪಲೋಕಾಯುಕ್ತ ಫನೀಂದ್ರ ಅವರ ಹೆಸರು ಕೂಡ ಬಂದಿದೆ. ಈ ವಿಚಾರವಾಗಿ ದೂರು ಸಹ ದಾಖಲಾಗಿದ್ದು, ಎರಡು ಬಾರಿ ಕರೆ ಮಾಡಿದರು ಬಿಬಿಎಂಪಿ AEE ಕರೆ ಸ್ವೀಕರಿಸಿಲ್ಲ. ಅನುಮಾನಗೊಂಡು ಲುಕಾಯುಕ್ತ ಕಚೇರಿಗೆ ತೆರಳಿದ್ದಾರೆ.
ಸುಳ್ಳು ಕರೆ ಬಂದಿದ್ದರ ಕುರಿತು ಲೋಕಾಯುಕ್ತಕ್ಕೆ ಮಾಹಿತಿ ನೀಡಿದ್ದಾರೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಲೋಕಾಯುಕ್ತ ಇನ್ಸ್ಪೆಕ್ಟರ್ ರಿಂದ ದೂರು ದಾಖಲಾಗಿದ್ದು, ದೂರಿನ ಆಧಾರದಲ್ಲಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆಂಧ್ರಪ್ರದೇಶದಿಂದ ಕರೆ ಬಂದಿರುವ ಕುರಿತು ಮಾಹಿತಿ ತಿಳಿದು ಬಂದಿದೆ. ಯಾರು ಕರೆ ಮಾಡಿದ್ದಾರೆ ಎನ್ನುವುದರ ಕುರಿತು ಪೋಲಿಸರು ಪತ್ತೆಹಚ್ಚಲು ಮುಂದಾಗಿದ್ದಾರೆ.








