ಮಂಡ್ಯ: ಜಿಲ್ಲೆಯಲ್ಲಿ ಮತ್ತೊಂದು ಸರ್ಕಾರಿ ಕಚೇರಿ ಜಪ್ತಿ ಮಾಡಲಾಗಿದೆ. ರೈತನಿಗೆ ಭೂ ಪರಿಹಾರ ಕೊಡದೆ ಸತಾಯಿಸಿದ ಅಧಿಕಾರಿ ಕಚೇರಿ ಜಪ್ತಿಗೆ ಕೋರ್ಟ್ ಆದೇಶದಂತೆ ಮಂಡ್ಯ ನಗರದಲ್ಲಿರುವ ಕಾರ್ಯಪಾಲಕ ಇಂಜಿನಿಯರ್ ವಿಸಿ ನಾಲಾ ವಿಭಾಗದ ಎಇ ಕಚೇರಿ ಜಪ್ತಿ ಮಾಡಲಾಗಿದೆ.
ಮಂಡ್ಯದ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಜಪ್ತಿಗ ಆದೇಶ ಮಾಡಿತ್ತು. ಹೀಗಾಗಿ ಮಂಡ್ಯ ನಗರದಲ್ಲಿರುವ ಕಾರ್ಯಪಾಲಕ ಇಂಜಿನಿಯರ್ ವಿಸಿ ನಾಲಾ ವಿಭಾಗದ ಎಇ ಕಚೇರಿ ಜಪ್ತಿ ಮಾಡಲಾಗಿದೆ. ವಕೀಲರ ಜೊತೆ ಕೋರ್ಟ್ ಜಪ್ತಿ ಆದೇಶದೊಂದಿಗೆ ಬಂದ ರೈತನಿಂದ ಕಚೇರಿ ಪೀಠೋಕರಣ ಸೇರಿ ಕಂಪ್ಯೂಟರ್ ಜಪ್ತಿ ಮಾಡಿದ್ದಾರೆ.
ಮದ್ದೂರು ತಾಲೂಕಿನ ಹೆಬ್ಬೆರಳು ಗ್ರಾಮದ ರೈತ ಜವರೇಗೌಡ ಭೂ ಪರಿಹಾರ ಕೊಡದೆ ನಿರ್ಲಕ್ಷ್ಯ ತೋರಿದ್ದರು. ನೀರಾವರಿ ಇಲಾಖೆ ಅಧಿಕಾರಿಯ ನಿರ್ಲಕ್ಷ್ಯ ಧೋರಣೆ ಗೆ ಜಪ್ತಿ ಆದೇಶ ಕೊಟ್ಟು ಕೋರ್ಟ್ ಚಾಟಿ ಬೀಸಿದೆ. ನಾಲೆಗೆ ಭೂಮಿ ಕಳೆದುಕೊಂಡಿದ್ದ ರೈತನಿಗೆ 84 ಲಕ್ಷ ಪರಿಹಾರ ಕೊಡದೆ ವಿಳಂಬ ಮಾಡಿತ್ತು. ಗ್ರಾಮದ ಮುತ್ತುರಾಯನಕೆರೆಯ ಪೋಷಕ ನಾಲೆಗೆ ರೈತರ ಜಮೀನು ವಶಪಡಿಸಿಕೊಳ್ಳಲಾಗಿತ್ತು. ಸುಮಾರು 1.17ಎಕರೆ ವಶ ಮಾಡಿಕೊಳ್ಳಲಾಗಿತ್ತು. 2020ರಲ್ಲಿ ಕೋರ್ಟ್ ನಿಂದ ಆದೇಶ, ಆದೇಶ ವಿದ್ದರು ಪರಿಹಾರ ನೀಡದೇ ಅಧಿಕಾರಿಗಳ ನಿರ್ಲಕ್ಷ್ ವಹಿಸಿದ್ದರು.
ರೈತರಿಗೆ ಪರಿಹಾರ ಕೊಡದೆ ಅಲೆದಾಡಿಸ್ತಿರೋ ಅಧಿಕಾರಿಗಳಿಗೆ ಕಚೇರಿ ಜಪ್ತಿ ಆದೇಶ ಕೊಟ್ಟು ಚಾಟಿಯನ್ನು ನ್ಯಾಯಾಲಯ ಬೀಸಿತ್ತು. ಅದರಂತೆ ಇಂದು ಸರ್ಕಾರಿ ಕಚೇರಿಯಲ್ಲಿನ ಪೀಠೋಪಕರಣಗಳನ್ನು ಜಪ್ತಿ ಮಾಡಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಇದು 4 ನೇ ಕಚೇರಿ ಜಪ್ತಿ ಪ್ರಕರಣವಾಗಿರೋದು ವಿಶೇಷವಾಗಿದೆ.
ವರದಿ; ಗಿರೀಶ್ ರಾಜ್, ಮಂಡ್ಯ
BIG NEWS: ಬೆಂಗಳೂರಲ್ಲಿ ಮಾರ್ಗಸೂಚಿಯನ್ವಯ ಕಾರ್ಯ ನಿರ್ವಹಿಸದ ಬೆಂಗಳೂರಿನ 14 ಪಿಜಿಗಳಿಗೆ ಬೀಗ ಜಡಿದ GBA








