ಬೆಂಗಳೂರು: ರಾಜ್ಯದ ಸ್ಥಳೀಯ ಯೋಜನಾ ಪ್ರದೇಶವನ್ನು ಹೊರತುಪಡಿಸಿದ ಪ್ರದೇಶದಲ್ಲಿ ಭೂಪರಿವರ್ತಿತ ಜಮೀನುಗಳಲ್ಲಿ ವಿನ್ಯಾಸ ಅನುಮೋದನೆಯ ಕುರಿತಂತೆ ಮಹತ್ವದ ಆದೇಶವನ್ನು ಸರ್ಕಾರ ಮಾಡಿದೆ.
ಈ ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧಿನಿಯಮ, 2025 ರ ಪ್ರಕರಣ 199(ಬಿ) ರಲ್ಲಿ ಕಟ್ಟಡ ನಿರ್ಮಾಣ ಉದ್ದೇಶಗಳಿಗಾಗಿ ಇರುವ ಕಟ್ಟಡ ನಿವೇಶನಗಳಿಗಾಗಿ ಹೊಸ ಖಾತಾ ಅಥವಾ ಪಿ.ಐ.ಡಿ-ಯನ್ನು ನೀಡಲು, ಗ್ರಾಮ ಪಂಚಾಯಿತಿ ಅಥವಾ ಸರ್ಕಾರವು ಅಧಿಸೂಚನೆಯ ಮೂಲಕ ಗೊತ್ತುಪಡಿಸಲಾದ ಪ್ರಾಧಿಕಾರಗಳು, ಅಧಿಕಾರ ವ್ಯಾಪ್ತಿಯ ಯೋಜನಾ ಪ್ರಾಧಿಕಾರದ ಮೂಲಕ ಲೇಔಟ್ ಪ್ಲಾನಿಗಾಗಿ ಪೂರ್ವಾನುಮೋದನೆಯನ್ನು ಪಡೆದುಕೊಳ್ಳತಕ್ಕದ್ದು ಎಂದು ತಿಳಿಸಲಾಗಿರುತ್ತದೆ ಎಂದಿದ್ದಾರೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 64 (5-ಎ) ರಲ್ಲಿ ಗ್ರಾಮ ಪಂಚಾಯತ್‌ಗಳು, ಕಟ್ಟಡ ಲೆಸೆನ್ಸ್ ಅಥವಾ ವಸತಿ ಅಥವಾ ವಾಸ ಸ್ಥಳಗಳ ಲೇಔಟ್‌ಗಳ ಅನುಮೋದನೆಗಳನ್ನು ನೀಡುವ ವಿಷಯದಲ್ಲಿ ನಗರ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961 ರ ಉಪಬಂಧಗಳನ್ನು ಕಡ್ಡಾಯವಾಗಿ ಪಾಲಿಸುವ ಬಗ್ಗೆ ತಿಳಿಸಲಾಗಿರುತ್ತದೆ ಎಂದು ಹೇಳಿದ್ದಾರೆ.
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಅಧಿನಿಯಮ, 1961 ರ ಪುಕರಣ 4ಕೆ ರಲ್ಲಿ ಸ್ಥಳೀಯ ಯೋಜನಾ ಪ್ರದೇಶವನ್ನು ಹೊರತುಪಡಿಸಿದ ಪುದೇಶದಲ್ಲಿ ಭೂ- ಅಭಿವೃದ್ಧಿಗೆ ಸಂಬಂಧಿಸಿದಂತೆ, ನಗರಾಭಿವೃದ್ಧಿ ಇಲಾಖೆಯಿಂದ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ (ಸ್ಥಳೀಯ ಯೋಜನಾ ಪ್ರದೇಶಗಳನ್ನು ಹೊರತುಪಡಿಸಿ ಇತರ ಪ್ರದೇಶಗಳಲ್ಲಿ ಭೂ ಅಭಿವೃದ್ಧಿ) ವಿನಿಯಮಗಳು, 2025 ನ್ನು ಅಧಿಸೂಚಿಸಲಾಗಿರುತ್ತದೆ.
ಉಲ್ಲೇಖಿತ ವಿನಿಯಮಗಳಂತೆ, ಸ್ಥಳೀಯ ಯೋಜನಾ ಪ್ರದೇಶವನ್ನು ಹೊರತುಪಡಿಸಿದ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿಗಳು ಭೂ ಅಭಿವೃದ್ಧಿ ವಿನ್ಯಾಸ ಅನುಮೋದನೆಗೆ ಸಂಬಂಧಿಸಿದಂತೆ ಈ ಕೆಳಕಂಡಂತೆ ಕ್ರಮ ವಹಿಸತಕ್ಕದ್ದು ಎಂದಿದ್ದಾರೆ.
1. ಅಭಿವೃದ್ಧಿದಾರರು ವಿನಿಯಮ 4(1) ರಲ್ಲಿ ತಿಳಿಸಿರುವಂತೆ ನಮೂನೆ-Iರಲ್ಲಿ ಅರ್ಜಿಯನ್ನು ಉಲ್ಲೇಖಿತ ವಿನಿಯಮಗಳಲ್ಲಿ ತಿಳಿಸಿರುವ ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಪಂಚಾಯಿತಿಗೆ ಪುಸ್ತಾವನೆಯನ್ನು ಸಲ್ಲಿಸತಕ್ಕದ್ದು.
2. ಹಿರಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ / ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ವೀಕರಿಸಿದ ಅರ್ಜಿಯನ್ನು ವಿನಿಯಮ-4(1)ರಲ್ಲಿ ತಿಳಿಸಿರುವಂತೆ ಎಲ್ಲಾ ದಾಖಲೆಗಳೊಂದಿಗೆ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರಿಗೆ ವಿನಿಯಮ 8(1) ರಲ್ಲಿ ತಿಳಿಸಿರುವಂತೆ ನಮೂನೆ-IIರಲ್ಲಿ ಸಲ್ಲಿಸತಕ್ಕದ್ದು.
3. ವಿನಿಯಮ 9(2ಎ) ಅಡಿಯಲ್ಲಿ ಸಂಬಂಧಿಸಿದ ಸಕ್ಷಮ ಪ್ರಾಧಿಕಾರದ ತಾಂತ್ರಿಕ ಅನುಮೋದನೆಯನ್ನು ವಿನಿಯಮದ ನಮೂನೆ-V ರಡಿಯಲ್ಲಿ ಹಿರಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ/ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು ಸ್ವೀಕರಿಸಿದ ನಂತರ, ಬಡಾವಣೆ ನಕ್ಷೆಯ ಪ್ರಕಾರ ರಸ್ತೆಗಳು, ಪಾರ್ಕ್‌ಗಳು, ವಾಹನ ನಿಲ್ದಾಣಗಳು, ನಾಗರೀಕ ಸೌಲಭ್ಯದ ಪ್ರದೇಶಗಳು, ಸಾರ್ವಜನಿಕ ಬಳಕೆಯ ಪ್ರದೇಶಗಳು ಹಾಗೂ ಇತರೆ ಮೂಲಭೂತ ಸೌಕರ್ಯಗಳ ಪುದೇಶಗಳ, ಪ್ರದೇಶಗಳ ಅಸ್ತಿಗಳನ್ನು ತೆರಿಗೆ ನಿರ್ಧರಣಾ ವಹಿಗೆ ಸೇರ್ಪಡೆಮಾಡಿ ನಮೂನೆಗಳನ್ನು ಬಡಾವಣೆ ಮಾಲೀಕರ ಹೆಸರಿಗೆ ಸ್ವಯಂ ಚಾಲಿತವಾಗಿ ತಂತ್ರಾಂಶದ ಮೂಲಕ ನೀಡತಕ್ಕದ್ದು.
4. ಬಡಾವಣೆಯ ಮಾಲೀಕರು, ವಿನಿಯಮ-9(2)ರ ನಮೂನೆ-VIII ರಲ್ಲಿ ಗ್ರಾಮ ಪಂಚಾಯಿತಿಗೆ ಉಚಿತವಾಗಿ ವಿನ್ಯಾಸ ನಕ್ಷೆಯ ಪುಕಾರ ರಸ್ತೆಗಳ ಅಗಲೀಕರಣಕ್ಕೆ ಮೀಸಲಿರಿಸಿದ ರಸ್ತೆಗಳು ಸೇರಿದಂತೆ ರಸ್ತೆಗಳು, ಪಾರ್ಕ್‌ಗಳು, ವಾಹನ ನಿಲ್ದಾಣಗಳು, ನಾಗರೀಕ ಸೌಲಭ್ಯದ ಪ್ರದೇಶಗಳು, ಸಾರ್ವಜನಿಕ ಬಳಕೆಯ ಪ್ರದೇಶಗಳು ಹಾಗೂ ಇತರೆ ಮೂಲಭೂತ ಸೌಕರ್ಯಗಳ ಪುದೇಶಗಳನ್ನು ನೋಂದಾಯಿತ ಪರಿತ್ಯಾಜನ ಪತ್ರದ ಮುಖಾಂತರ ವರ್ಗಾಯಿಸತಕ್ಕದ್ದು.
5. ಬಡಾವಣೆಯ ಮೂಲೆ ನಿವೇಶನಗಳು ಹಾಗೂ ಬಿಡುಗಡೆಗೊಳಿಸದ ಮಧ್ಯಂತರ ನಿವೇಶನಗಳನ್ನು ಮಾಲೀಕರು ಸಂಬಂಧಿಸಿದ ಗ್ರಾಮ ಪಂಚಾಯಿತಿಗೆ ವಿನಿಯಮ-9(2)ರ ನಮೂನೆ-IX ರಲ್ಲಿ ತಿಳಿಸಿರುವಂತೆ ನೋಂದಾಯಿತ ಅಡಮಾನ ಒಪ್ಪಿಗೆ ಪತ್ರಮಾಡಿ ಕೊಡತಕ್ಕದ್ದು.
ಉಲ್ಲೇಖಿತ ವಿನಿಯಮಗಳ ವಿನಿಯಮ 10(1) ಮತ್ತು 10(2)ರಲ್ಲಿ ತಿಳಿಸಿರುವಂತೆ, ನಿಗದಿತ ಅವಧಿಯೊಳಗೆ ಬಡಾವಣೆಯನ್ನು ಅಭಿವೃದ್ಧಿಗೊಳಿಸಿದಲ್ಲಿ ಗ್ರಾಮ ಪಂಚಾಯಿತಿಯು ಅಭಿವೃದ್ಧಿದಾರರಿಂದ ಪಡೆದ ಮೂಲೆ ನಿವೇಶನ ಹಾಗೂ ಮದ್ಯಂತರ ನಿವೇಶನಗಳನ್ನು ಅಂತಿಮ ವಿನ್ಯಾಸ ಅನುಮೋದನೆಯಾದ ನಂತರ ನೋಂದಾಯಿತ ಅಡಮಾನ ಒಪ್ಪಿಗೆ ಪತ್ರವನ್ನು ರದ್ದುಪಡಿಸುವುದು.ಇಲ್ಲವಾದಲ್ಲಿ ವಿನಿಯಮ-10(3) ಮತ್ತು 104) ರಂತೆ ಕ್ರಮವಹಿಸತಕ್ಕದ್ದು.
6. ಹಿರಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ/ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು ಮೇಲಿನ ಪಕಾರ್ಯಗಳು ಪೂರ್ಣಗೊಂಡ ಒಂದು ದಿನದೊಳಗಾಗಿ ನಮೂನೆ-VII ರಲ್ಲಿ ತಾತ್ಕಲಿಕ ವಿನ್ಯಾಸ ಅನುಮೋದಿತ ನಕ್ಷೆಯನ್ನು ನೀಡತಕ್ಕದ್ದು ಮತ್ತು ತಾಂತ್ರಿಕ ವಿನ್ಯಾಸದಲ್ಲಿ ಗುರುತಿಸಲಾದ ಶೇಕಡ 40 ರಷ್ಟು ನಿವೇಶನಗಳಿಗೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ( ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು 2025 ರ ನಿಯಮ (6) ರನ್ವಯ ತಂತ್ರಾಂಶದ ಮೂಲಕ ಬಡಾವಣೆಯ ಮಾಲೀಕರ ಹೆಸರಿಗೆ ನಮೂನೆ-11ಎ ವಿತರಿಸತಕ್ಕದ್ದು.
7. ಬಡಾವಣೆಯ ಮಾಲೀಕರು, ವಿನಿಯಮ-11 ರ ಪುಕಾರ ಅನುಮೋದಿತ ಬಡಾವಣೆಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಪ್ರಸ್ತುತ ಜಾರಿಯಲ್ಲಿರುವ ನಿಯಮಗಳಂತೆ ಸಂಬಂಧಿಸಿದ ಇಲಾಖೆಗಳಾದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಎಸ್ಕಾಂ ಹಾಗೂ ಅವಶ್ಯಕ ಇತರೆ ಇಲಾಖೆಗಳಿಂದ ಅನುಮೋದಿತ ವಿನ್ಯಾಸದಂತೆ ದೃಢೀಕೃತ ಅಂದಾಜು ಪಟ್ಟಿಗಳನ್ವಯ ಅನುಷ್ಠಾನ ಮಾಡಲು ಅಭಿವೃದ್ಧಿದಾರರಿಗೆ ಸೂಚಿಸುವುದು.
8. ಅಭಿವೃದ್ಧಿದಾರರು ವಿನ್ಯಾಸದಲ್ಲಿನ ಕಾಮಗಾರಿಗಳನ್ನು ಪೂರ್ಣಗೊಳಿಸಿದ ನಂತರ ಸಂಬಂಧಿಸಿದ ಇಲಾಖೆಗಳಾದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಎಸ್ಕಾಂ ಹಾಗೂ ಅವಶ್ಯಕ ಇತರೆ ಇಲಾಖೆಗಳಿಂದ ಕಾಮಗಾರಿಗಳು ಅಂದಾಜು ಪಟ್ಟಿಯಂತೆ ಗುಣಾತ್ಮಕವಾಗಿ ಪೂರ್ಣಗೊಳಿಸಿರುವ ಬಗ್ಗೆ ದೃಢೀಕರಣವನ್ನು ನಿಗಧಿತ ನಮೂನೆಯಲ್ಲಿ ಪಡೆಯತಕ್ಕದ್ದು ಹಾಗೂ ಅಭಿವೃದ್ಧಿದಾರರು ಸದರಿ ಇಲಾಖೆಗಳು ನಿಗಧಿಪಡಿಸಿದ ಮೇಲ್ವಿಚಾರಣಾ ಶುಲ್ಕವನ್ನು ಸಂಬಂಧಿಸಿದ ಇಲಾಖೆಗಳಿಗೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಅಂದಾಜು ಮೊತ್ತದ ಶೇ.0.50 ರಷ್ಟನ್ನು ವಿನಿಯಮ 11(2) ರಲ್ಲಿ ತಿಳಿಸಿರುವಂತೆ ಗ್ರಾಮ ಪಂಚಾಯಿತಿಗೆ ಪಾವತಿಸುವುದು.
9. ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡ ನಂತರ ಬಡಾವಣೆಯ ಮಾಲೀಕರು ವಿನಿಯಮ-11(4)ರ ನಮೂನೆ-X ರಲ್ಲಿ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡ ಬಗ್ಗೆ ಇಲಾಖೆಗಳಿಂದ ಪಡೆದ ದೃಢೀಕರಣ ಪತ್ರ ಸಲ್ಲಿಸತಕ್ಕದ್ದು, ವಿನಿಯಮ 13 ರಲ್ಲಿ ತಿಳಿಸಿರುವಂತೆ ಒಂದು ವರ್ಷ’ ದೋಷದ ಹೊಣೆಗಾರಿಕೆ ಅವಧಿಯಲ್ಲಿ (defect liability period) ವಿನ್ಯಾಸದಲ್ಲಿನ ಮೂಲ ಭೂತ ಸೌಕರ್ಯಗಳನ್ನು ಅಭಿವೃದ್ಧಿದಾರರು ನಿರ್ವಹಿಸುವ ಬಗ್ಗೆ ನೋಟರೀಕೃತ ದೃಢೀಕರಣ ಪತ್ರದೊಂದಿಗೆ ಅಭಿವೃದ್ಧಿ ಕಾಮಗಾರಿಗಳ ಅಂದಾಜು ಮೊತ್ತದ ಶೇಕಡ 10 ರಷ್ಟನ್ನು ಬ್ಯಾಂಕ್ ಗ್ಯಾರಂಟಿ ಅಥವಾ ಮೊತ್ತವನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಭದ್ರತಾ ಠೇವಣಿ ಇಡತಕ್ಕದ್ದು, ನಿಗದಿಪಡಿಸಿದ ಅವಧಿಯ ನಂತರ ಗ್ರಾಮ ಪಂಚಾಯಿತಿಯ ಶಿಫಾರಸ್ಸಿನ ಮೇರೆಗೆ ಸದರಿ ಮೊತ್ತವನ್ನು ಹಿಂತಿರುಗಿಸತಕ್ಕದ್ದು.
10. ಹಿರಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ/ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು ನಮೂನೆ- X ರಲ್ಲಿ ಅರ್ಜಿ ಸ್ವೀಕರಿಸಿದ ನಂತರ ಇಲಾಖೆಗಳಿಂದ ಪಡೆದ ದೃಢೀಕರಣ ಪತ್ರದ ಆಧಾರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಪೂರ್ಣವಾಗಿರುವ ಬಗ್ಗೆ ದೃಢೀಕರಿಸಿ ಕೊಂಡು ಅಂತಿಮ ವಿನ್ಯಾಸ ನಕ್ಷೆಗೆ ತಾಂತ್ರಿಕ ಅನುಮೋದನೆಯನ್ನು ಪಡೆಯಲು ವಿನಿಯಮ-12(2) ರ ನಮೂನೆ-XI ರಲ್ಲಿ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರು ಅಥವಾ ಅವರಿಂದ ಅಧಿಕೃತಗೊಂಡ ಅಧಿಕಾರಿಗೆ ಅರ್ಜಿಯನ್ನು ಸಲ್ಲಿಸತಕ್ಕದ್ದು.
11. ವಿನಿಯಮ-12ರಲ್ಲಿ ತಿಳಿಸಿರುವಂತೆ, ನಮೂನೆ-XII ರಲ್ಲಿ ಸಕ್ಷಮ ಪ್ರಾಧಿಕಾರದಿಂದ ಅಂತಿಮ ತಾಂತ್ರಿಕ ಅನುಮೋದಿತ ವಿನ್ಯಾಸ ನಕ್ಷೆಯನ್ನು ಸ್ವೀಕರಿಸಿದ ನಂತರ ಒಂದು ದಿನದೊಳಗಾಗಿ ಹಿರಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ /ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು ಅಂತಿಮ ವಿನ್ಯಾಸ ಅನುಮೋದಿತ ನಕ್ಷೆಯನ್ನು ನಮೂನೆ-XIII ರಲ್ಲಿ ನೀಡತಕ್ಕದ್ದು. ವಿನಿಯಮ-12(2)ರ ಪ್ರಕಾರ ಉಳಿದ ಶೇಕಡ 60 ರಷ್ಟು ನಿವೇಶನಗಳಿಗೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು 2025 ರ ನಿಯಮ (6)ರನ್ವಯ ತಂತ್ರಾಂಶದ ಮೂಲಕ ಮಾಲೀಕರ ಹೆಸರಿಗೆ ನಮೂನೆ-11ಎ ನೀಡತಕ್ಕದ್ದು.
12. ಸಂಬಂಧಿಸಿದ ಗ್ರಾಮ ಪಂಚಾಯಿತಿಗಳು ವಿನಿಯಮ-12(3)ರ ಪ್ರಕಾರ ಉದ್ಯಾನವನಗಳನ್ನು ನಿರ್ವಹಿಸತಕ್ಕದ್ದು. ನಾಗರೀಕ ಸೌಲಭ್ಯ ನಿವೇಶನಗಳನ್ನು ಸರ್ಕಾರವು ಅಧಿಸೂಚಿಸಿದಂತೆ ವಿನಿಯೋಗಿಸತಕ್ಕದ್ದು.
13. ಗ್ರಾಮ ಪಂಚಾಯಿತಿಯು ಪರಿತ್ಯಾಜನಾ ಪತ್ರದ ಮೂಲಕ ಪಡೆದ ಉದ್ಯಾನವನಗಳನ್ನು “ಕರ್ನಾಟಕ ಉದ್ಯಾನವನಗಳು, ಆಟದ ಮೈದಾನಗಳು ಮತ್ತು ಬಯಲು ಸ್ಥಳಗಳು (ಸಂರಕ್ಷಣೆ ಮತ್ತು ನಿಯಂತ್ರಣ) ಕಾಯ್ದೆ, 1985 (1985ರ ಕರ್ನಾಟಕ ಕಾಯ್ದೆ (16))” ರನ್ವಯ ಹಾಗೂ ನಾಗರೀಕ ಸೌಲಭ್ಯ ನಿವೇಶನಗಳನ್ನು ಮತ್ತು ರಸ್ತೆಗಳನ್ನು ನಿಯಮಗಳನ್ವಯ ನಿರ್ವಹಣೆ ಮಾಡತಕ್ಕದ್ದು.
ಆದ್ದರಿಂದ, ಸ್ಥಳೀಯ ಯೋಜನಾ ಪ್ರದೇಶವನ್ನು ಹೊರತುಪಡಿಸಿದ ಪ್ರದೇಶದಲ್ಲಿ ಬರುವ ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿನ ಭೂಪರಿವರ್ತಿತ ಜಮೀನುಗಳಲ್ಲಿ ವಿನ್ಯಾಸ ಅನುಮೋದನೆ ಹಾಗೂ ವಿನಿಯಮದ ಭಾಗ-ಬಿರಲ್ಲಿ ತಿಳಿಸಿರುವಂತೆ ಕಟ್ಟಡ ಪರವಾನಿಗೆ ನೀಡುವ ಬಗ್ಗೆ ಉಲ್ಲೇಖದಲ್ಲಿ ತಿಳಿಸಿರುವ ವಿನಿಯಮಗಳನ್ನು ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಸಂಬಂಧಿಸಿದ ಇಲಾಖೆಗಳ ಮಾರ್ಗಸೂಚಿಗಳನ್ವಯ ಅನುಷ್ಠಾನಗೊಳಿಸಿರುವುದನ್ನು ಖಾತ್ರಿಪಡಿಸಿಕೊಂಡು ಬಡಾವಣೆಗಳಿಗೆ ಸಂಬಂಧಿಸಿದ ಎಲ್ಲಾ ಅಗತ್ಯ ದಾಖಲೆಗಳನ್ನು ನಿರ್ವಹಿಸಿ, ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಅಗತ್ಯ ಕ್ರಮವಹಿಸಲು ತಿಳಿಸಿದೆ.
ಮೇಲ್ಕಂಡ ಎಲ್ಲಾ ಪ್ರಕ್ರಿಯೆಗಳನ್ನು ವಿನಿಯಮಗಳನ್ವಯ ಕ್ರಮವಹಿಸಿರುವುದನ್ನು ಶೇ.100 ರಷ್ಟನ್ನು ಸಹಾಯಕ ನಿರ್ದೇಶಕರು (ಪಂ.ರಾಜ್), ತಾಲ್ಲೂಕು ಪಂಚಾಯಿತಿ, ಶೇ.50 ರಷ್ಟನ್ನು ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ, ಶೇ.25 ರಷ್ಟು ಉಪ ಕಾರ್ಯದರ್ಶಿ (ಅಭಿವೃದ್ಧಿ), ಜಿಲ್ಲಾ ಪಂಚಾಯಿತಿ ಹಾಗೂ ಶೇ.10 ರಷ್ಟನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯಿತಿಯವರು ಕಡ್ಡಾಯವಾಗಿ ಪರಿಶೀಲಿಸಿ, ದಾಖಲೀಕರಣಗೊಳಿಸುವುದು.
ಅಡಕ:ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗಳ ಮಾರ್ಗಸೂಚಿಗಳನ್ನು ಕ್ರಮವಾಗಿ ಅನುಸೂಚಿ -1 ಮತ್ತು 2 ರಲ್ಲಿ ಲಗತ್ತಿಸಿದೆ ಹಾಗೂ ಸದರಿ ಮಾರ್ಗಸೂಚಿಗಳು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 4-Kರಡಿ ದಿನಾಂಕ:07.05.2025ರಂದು ಹೊರಡಿಸಿರುವ The Karnataka Town and Country Planning (Development of Land in areas other than Local Planning Areas) Regulations, dated:07.05.2025ರಲ್ಲಿನ ವಿನಿಯಮಗಳಿಗೆ ಒಳಪಟ್ಟಿರುತ್ತದೆ ಎಂಬುದಾಗಿ ಹೇಳಿದ್ದಾರೆ.
ವಸಂತ ಬಿ ಈಶ್ವರಗೆರೆ… ಸಂಪಾದಕರು












