ನವದೆಹಲಿ: ದೇಶದಲ್ಲಿ 7 ದಿನಗಳ ಕಾಲ ಲಾಕ್ಡೌನ್ ( lockdown ) ವಿಧಿಸಲು ಸರ್ಕಾರ ನಿರ್ಧರಿಸಿದೆ ಎಂಬ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಲ್ಲದೇ ದೇಶದಲ್ಲಿ ಕೋವಿಡ್ 4ನೇ ಅಲೆಯ ಭೀತಿ ಕೂಡ ಎದುರಾಗಿರೋದಾಗಿ ಹೇಳಲಾಗುತ್ತಿತ್ತು. ಆದ್ರೇ ಆ ವೀಡಿಯೋದ ಅಸಲಿಯತ್ತನ್ನು ಪಿಐಪಿ ಪ್ಯಾಕ್ಟ್ ಚೆಕ್ಕಿಂಗ್ ಬಯಲು ಮಾಡಿದೆ. ಅದೇನು ಅನ್ನೋ ಬಗ್ಗೆ ಮುಂದೆ ಓದಿ.
ಡಿಸೆಂಬರ್ 24ರಿಂದಲೇ ದೇಶದಲ್ಲಿ ಒಂದು ವಾರಗಳ ಕಾಲ ಲಾಕ್ ಡೌನ್ ಜಾರಿಗೊಳ್ಳಲಿದೆ ಎನ್ನುವಂತ ವೀಡಿಯೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಇದಷ್ಟೇ ಅಲ್ಲದೇ ಲಾಕ್ ಡೌನ್ ವಿಧಿಸುವ ನಿರ್ಧಾರವನ್ನು ತುರ್ತು ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೈಗೊಂಡಿದ್ದಾರೆ ಎನ್ನಲಾಗಿತ್ತು.
ಈ ವೀಡಿಯೋವನ್ನು ಯೂಟ್ಯೂಬ್ ನಲ್ಲಿ ನೋಡಿದಂತ ನೋಡುಗರು ದೇಶದಲ್ಲಿ ಕೊರೋನಾ 4ನೇ ಅಲೆಯ ಭೀತಿಯೇ ಉಂಟಾಗಿರೋದಾಗಿ ಭಯಪಟ್ಟಿದ್ದರು. ವೈರಲ್ ವೀಡಿಯೋ ವ್ಯಾಪಕವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತಿದ್ದಂತೇ, ಇದರ ಹಿಂದೆ ಪಿಐಪಿ ಫ್ಯಾಕ್ ಚೆಕ್ಕಿಂಗ್ ತಂಡ ಬಿತ್ತು.
ವೈರಲ್ ಆಗಿರೋ ವೀಡಿಯೋ ಸಂಬಂಧ ಸಂಬಂಧಿಸಿದಂತ ಅಧಿಕಾರಿಗಳು, ಪ್ರಧಾನಿ ಸಚಿವಾಲಯದಿಂದ ಮಾಹಿತಿ ಪಡೆದು, ಇದೊಂದು ವೈರಲ್ ಸುದ್ದಿಯಷ್ಟೇ. ಇದು ಸತ್ಯಾಂಶಕ್ಕೆ ದೂರವಾಗಿರೋದು ಆಗಿದೆ. ಈ ರೀತಿಯ ಯಾವುದೇ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಳ್ಳೋದಾಗಿ ತಿಳಿಸಿಲ್ಲ. ಈ ವೀಡಿಯೋ ಮಾಹಿತಿಯೇ ಸುಳ್ಳು ಎಂಬುದಾಗಿ ಸ್ಪಷ್ಟ ಪಡಿಸಿದೆ.
‘CE News’ नामक एक #YouTube चैनल के वीडियो में यह दावा किया जा रहा है कि आज रात 12 बजे से 7 दिन तक भारत बंद रखने का फैसला लिया गया है#PIBFactCheck
▶️ इस वीडियो में किया गया दावा फ़र्ज़ी है
▶️ भारत सरकार ने ऐसा कोई फैसला नहीं लिया है pic.twitter.com/eX3QXdkOxn
— PIB Fact Check (@PIBFactCheck) December 24, 2022
ತಜ್ಞರ ಪ್ರಕಾರ, ಭಾರತದಲ್ಲಿನ ಪ್ರಸ್ತುತ ಕೋವಿಡ್ ಪರಿಸ್ಥಿತಿಯು ಅಂತರರಾಷ್ಟ್ರೀಯ ವಿಮಾನಗಳನ್ನು ಸ್ಥಗಿತಗೊಳಿಸಲು ಅಥವಾ ಲಾಕ್ಡೌನ್ ಜಾರಿಗೆ ಕರೆ ನೀಡುವುದಿಲ್ಲ, ಆದರೆ ಕೆಲವು ದೇಶಗಳಲ್ಲಿ ಪ್ರಕರಣಗಳ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಕಣ್ಗಾವಲು ಮತ್ತು ಜಾಗರೂಕತೆಯ ಅಗತ್ಯವಿದೆ ಎಂದು ತಿಳಿಸಿದ್ದಾರೆ.
BIGG NEWS: ಕೋವಿಡ್ ರೂಲ್ಸ್ ಬ್ರೇಕ್; ಮಾಸ್ಕ್ ಧರಿಸದೆ ಕಡಲತೀರಗಳಲ್ಲಿ ಮೋಜು ಮಸ್ತಿ
BIGG NEWS : ರಾಜ್ಯದಲ್ಲಿ ಕೊರೊನಾ ಭೀತಿ ಹೆಚ್ಚಳ : ಶಾಲಾ-ಕಾಲೇಜುಗಳಲ್ಲಿ ಈ ನಿಯಮಗಳ ಜಾರಿಗೆ ಶಿಕ್ಷಣ ಇಲಾಖೆ ಚಿಂತನೆ