Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

KUWJ ಸಂಘದ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ

14/03/2026 10:50 PM

ಹಿಂದುಳಿದ ಸಮಾಜದ ಎಂ.ಡಿ.ಆನಂದ್, ಸಾಗರದ ಮಾರಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ: ಸೃಷ್ಟಿಯಾಗಲಿದೆಯೇ ಹೊಸ ಇತಿಹಾಸ?

14/03/2026 10:41 PM

ನಿಮ್ಮ ಮನೆಯಲ್ಲಿರುವ ‘ಇಲಿ’ಗಳನ್ನ ಕೊಲ್ಲದೇ ಓಡಿಸೋದು ಹೇಗೆ ಗೊತ್ತಾ? ಕೇವಲ 10 ರೂ.ಗೆ ಶಾಶ್ವತ ಪರಿಹಾರ!

14/03/2026 10:05 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ರಾಜ್ಯದ 3,862 ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ‘ಸ್ಮಾರ್ಟ್ ಕ್ಲಾಸ್ ರೂಂ’ ಸ್ಥಾಪಿಸಲು ಸರ್ಕಾರ ಆಡಳಿತಾತ್ಮಕ ಅನುಮೋದನೆ
KARNATAKA

BREAKING: ರಾಜ್ಯದ 3,862 ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ‘ಸ್ಮಾರ್ಟ್ ಕ್ಲಾಸ್ ರೂಂ’ ಸ್ಥಾಪಿಸಲು ಸರ್ಕಾರ ಆಡಳಿತಾತ್ಮಕ ಅನುಮೋದನೆ

By kannadanewsnow0902/02/2026 8:13 PM

ಬೆಂಗಳೂರು: ರಾಜ್ಯ ಸರ್ಕಾರದಿಂದ ಸ್ಮಾರ್ಟ್ ಕ್ಲಾಸ್ ಗಳನ್ನು ಸರ್ಕಾರಿ ಶಾಲೆಗಳಲ್ಲಿ ನಿರ್ಮಿಸೋದಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಕೇಂದ್ರ ಪುರಸ್ಕೃತ ಕಾರ್ಯಕ್ರಮವಾದಂತ ಸಮಗ್ರ ಶಿಕ್ಷಣ ಕರ್ನಾಟಕದಡಿ 2022-23, 2024-25 ಮತ್ತು 2025-26ನೇ ಸಾಲಿನ ಕೇಂದ್ರ ಶಿಕ್ಷಣ ಸಚಿವಾಲಯದ ಯೋಜನಾ ಅನುಮೋದನಾ ಮಂಡಳಿ ಅನುಮೋದಿ ರಾಜ್ಯದ 3862 ಪ್ರಾಥಮಿಕ, ಪ್ರೌಢ ಮತ್ತು ಕೆ ಜಿ ಬಿ ವಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ರೂಂ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ.

ಈ ಕುರಿತಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಟಿಸಿದ್ದು, ಮೇಲೆ ಓದಲಾದ ಕ್ರಮಾಂಕ (1)ರಲ್ಲಿನ 2022-23ನೇ ಸಾಲಿನ ಸಮಗ್ರ ಶಿಕ್ಷಣ ಕರ್ನಾಟಕದ ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿರುವ ಯೋಜನಾ ಅನುಮೋದನಾ ಮಂಡಳಿ (PAB)ಯ ದಿನಾಂಕ: 09.05.2022ರ ಸಭೆಯಲ್ಲಿ 1631 ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಘಟಕ ವೆಚ್ಚ ರೂ. 2.4 ಲಕ್ಷದಂತೆ ಒಟ್ಟು ವೆಚ್ಚ ರೂ.3914.40ಲಕ್ಷಗಳಲ್ಲಿ ಸ್ಮಾರ್ಟ್ ಕ್ಲಾಸ್ ಸ್ಥಾಪಿಸಲು ಅನುಮೋದನೆ ನೀಡಲಾಗಿರುತ್ತದೆ ಎಂದಿದ್ದಾರೆ.

2024-25ನೇ ಸಾಲಿನ ಸಮಗ್ರ ಶಿಕ್ಷಣ ಕರ್ನಾಟಕದ ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿರುವ ಪೂರಕ ಯೋಜನಾ ಅನುಮೋದನಾ ಮಂಡಳಿ (PAB)ಯ ದಿನಾಂಕ: 12.08.2025ರ ಸಭೆಯಲ್ಲಿ 95 ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯಗಳಲ್ಲಿ ಘಟಕ ವೆಚ್ಚ ರೂ. 1.2 ಲಕ್ಷದಂತೆ ಒಟ್ಟು ವೆಚ್ಚ ರೂ.114.00 ಲಕ್ಷಗಳಲ್ಲಿ ಸ್ಮಾರ್ಟ್ ಕ್ಲಾಸ್ ಸ್ಥಾಪಿಸಲು ಅನುಮೋದನೆ ನೀಡಲಾಗಿರುತ್ತದೆ.

ಮೇಲೆ ಓದಲಾದ ಕ್ರಮಾಂಕ (3)ರಲ್ಲಿನ 2025-26ನೇ ಸಾಲಿನ ಸಮಗ್ರ ಶಿಕ್ಷಣ ಕರ್ನಾಟಕದ ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿರುವ ಯೋಜನಾ ಅನುಮೋದನಾ ಮಂಡಳಿ (PAB)ಯ ದಿನಾಂಕ: 26.03.2025ರ ಸಭೆಯಲ್ಲಿ 1326 ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ 651 ಪ್ರೌಢ/ಉನ್ನತ ಪ್ರೌಢ ಶಾಳೆಗಲು ಸೇರಿದಂತೆ ಒಟ್ಟು 1977 ಶಾಲೆಗಳಲ್ಲಿ ಘಟಕ ವೆಚ್ಚ ರೂ.2.4 ಲಕ್ಷದಂತೆ ಒಟ್ಟು ವೆಚ್ಚ ರೂ.4744.80 ಲಕ್ಷಗಳಲ್ಲಿ ಸ್ಮಾರ್ಟ್ ಕ್ಲಾಸ್ ಸ್ಥಾಪಿಸಲು ಅನುಮೋದನೆ ನೀಡಲಾಗಿರುತ್ತದೆ.

ಮೇಲೆ ಓದಲಾದ ಕ್ರಮಾಂಕ (4)ರಲ್ಲಿನ 2025-26ನೇ ಸಾಲಿನ ಸಮಗ್ರ ಶಿಕ್ಷಣ ಕರ್ನಾಟಕದ ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿರುವ ಪೂರಕ ಯೋಜನಾ ಅನುಮೋದನಾ ಮಂಡಳಿ (PAB)ಯ ದಿನಾಂಕ: 28.05.2025ರ ಸಭೆಯಲ್ಲಿ 159 ಪ್ರೌಢ /ಉನ್ನತ ಪ್ರೌಢ ಶಾಲೆಗಳಲ್ಲಿ ಘಟಕ ವೆಚ್ಚ ರೂ.2.4 ಲಕ್ಷದಂತೆ ಒಟ್ಟು ವೆಚ್ಚ ರೂ.381.6 ಲಕ್ಷಗಳಲ್ಲಿ ಸ್ಮಾರ್ಟ್ ಕ್ಲಾಸ್ ಸ್ಥಾಪಿಸಲು ಅನುಮೋದನೆ ನೀಡಲಾಗಿರುತ್ತದೆ.

ಮೇಲೆ ಓದಲಾದ ಕ್ರಮಾಂಕ (5)ರಲ್ಲಿ ರಾಜ್ಯ ಯೋಜನಾ ನಿರ್ದೇಶಕರು ಸಮಗ್ರ ಶಿಕ್ಷಣ ಕರ್ನಾಟಕ ಇವರಿಂದ ಸ್ವೀಕೃತವಾದ ಪ್ರಸ್ತಾವನೆಯಲ್ಲಿ 2022-23, 2024-25 ಹಾಗೂ 2025-26ನೇ ಸಾಲಿನ ಸಮಗ್ರ ಶಿಕ್ಷಣ ಕರ್ನಾಟಕದ ವಾರ್ಷಿಕ ಕ್ರಿಯಾ ಯೋಜನೆಗೆ PAB ಸಭೆಯ ಅನುಮೋದನೆಯಂತೆ ಒಟ್ಟು 3862 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು, ಪ್ರೌಢ ಶಾಲೆಗಳು ಮತ್ತು KGBV ಶಾಲೆಗಳಲ್ಲಿ ICT & Digital Initiatives ಚಟುವಟಿಕೆಯಡಿಯಲ್ಲಿ ಒಟ್ಟು ರೂ. 9154.80 ಲಕ್ಷ ಮೊತ್ತದಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್ ಯೋಜನೆ ಅನುಷ್ಠಾನಗೊಳಿಸಲು ಅನುಮೋದನೆ ಕೋರಲಾಗಿರುತ್ತದೆ. ಮುಂದುವರೆದು ದಿನಾಂಕ 16.09.2025ರಂದು ಹಾಗೂ 06.01.2026ರಂದು ನಡೆದ TAP ಸಭೆಯಲ್ಲಿ ಸ್ಮಾರ್ಟ್‌ ಕ್ಲಾಸ್‌ಗೆ ಅಗತ್ಯವಿರುವ ಉಪಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಯೋಜನಾ ನಿರ್ದೇಶಕರು ಸಮಗ್ರ ಶಿಕ್ಷಣ ಕರ್ನಾಟಕ ಇವರ ಪ್ರಸ್ತಾವನೆಯಲ್ಲಿ ಸಲ್ಲಿಸಿರುವ ತಾಂತ್ರಿಕ ನಿರ್ದಿಷ್ಟತೆಯಂತೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಲಾಗಿದೆ.

Share. Facebook Twitter LinkedIn WhatsApp Email

Related Posts

KUWJ ಸಂಘದ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ

14/03/2026 10:50 PM1 Min Read

ಹಿಂದುಳಿದ ಸಮಾಜದ ಎಂ.ಡಿ.ಆನಂದ್, ಸಾಗರದ ಮಾರಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ: ಸೃಷ್ಟಿಯಾಗಲಿದೆಯೇ ಹೊಸ ಇತಿಹಾಸ?

14/03/2026 10:41 PM2 Mins Read

ಕರ್ನಾಟಕದಲ್ಲಿ ಎಲ್‌ಪಿಜಿ ಅಭಾವ ಎಫೆಕ್ಟ್; ‘ಇಂದಿರಾ ಕ್ಯಾಂಟೀನ್’​​ಗಳು ಬಂದ್ ಭೀತಿ!

14/03/2026 9:08 PM1 Min Read
Recent News

KUWJ ಸಂಘದ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ

14/03/2026 10:50 PM

ಹಿಂದುಳಿದ ಸಮಾಜದ ಎಂ.ಡಿ.ಆನಂದ್, ಸಾಗರದ ಮಾರಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ: ಸೃಷ್ಟಿಯಾಗಲಿದೆಯೇ ಹೊಸ ಇತಿಹಾಸ?

14/03/2026 10:41 PM

ನಿಮ್ಮ ಮನೆಯಲ್ಲಿರುವ ‘ಇಲಿ’ಗಳನ್ನ ಕೊಲ್ಲದೇ ಓಡಿಸೋದು ಹೇಗೆ ಗೊತ್ತಾ? ಕೇವಲ 10 ರೂ.ಗೆ ಶಾಶ್ವತ ಪರಿಹಾರ!

14/03/2026 10:05 PM

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ರನ್ ಔಟ್ ಡ್ರಾಮಾ ; ಪಾಕ್ ಆಟಗಾರ ‘ಸಲ್ಮಾನ್ ಆಘಾ’ಗೆ ‘ICC’ ಶಿಕ್ಷೆ!

14/03/2026 10:01 PM
State News
KARNATAKA

KUWJ ಸಂಘದ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ

By kannadanewsnow0914/03/2026 10:50 PM KARNATAKA 1 Min Read

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಸದಸ್ಯತ್ವವನ್ನು ಪಡೆಯಲು ಇಚ್ಛಿಸುವ ಅರ್ಹ ಪತ್ರಕರ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ರಾಜ್ಯದ ಎಲ್ಲಾ…

ಹಿಂದುಳಿದ ಸಮಾಜದ ಎಂ.ಡಿ.ಆನಂದ್, ಸಾಗರದ ಮಾರಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ: ಸೃಷ್ಟಿಯಾಗಲಿದೆಯೇ ಹೊಸ ಇತಿಹಾಸ?

14/03/2026 10:41 PM

ಕರ್ನಾಟಕದಲ್ಲಿ ಎಲ್‌ಪಿಜಿ ಅಭಾವ ಎಫೆಕ್ಟ್; ‘ಇಂದಿರಾ ಕ್ಯಾಂಟೀನ್’​​ಗಳು ಬಂದ್ ಭೀತಿ!

14/03/2026 9:08 PM

ಮಂಡ್ಯ ಜಿಲ್ಲೆಯಲ್ಲಿ ಅನಿಲ ಸರಬರಾಜು ವ್ಯತ್ಯಯ ಆತಂಕ ಬೇಡ; ಜಿಲ್ಲಾಧಿಕಾರಿಗಳ ಅಭಯ

14/03/2026 9:03 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.