Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗ್ರಾಮೀಣ ಯುವಕರಿಗೆ ಗುಡ್ ನ್ಯೂಸ್ : ‘ಗ್ರಾಮ ಒನ್’ಕೇಂದ್ರ ಆರಂಭಿಸಲು ಸುವರ್ಣಾವಕಾಶ, ಅರ್ಜಿ ಸಲ್ಲಿಕೆ ಕುರಿತು ಇಲ್ಲಿದೆ ಮಾಹಿತಿ

26/02/2026 5:45 AM

`ಗೃಹಲಕ್ಷ್ಮೀ ಫಲಾನುಭವಿ’ ಮರಣ ಹೊಂದಿದರೆ ಮನೆಯ ಮುಂದಿನ `ಯಜಮಾನಿ’ ಅರ್ಜಿ ಸಲ್ಲಿಸಲು ಅವಕಾಶ !

26/02/2026 5:25 AM

ನಿಮ್ಮ `BPL’ ರೇಷನ್ ಕಾರ್ಡ್ ರದ್ದಾಗಿದ್ರೆ ಈ ದಾಖಲೆಗಳ ಜೊತೆಗೆ ಅರ್ಜಿ ಸಲ್ಲಿಸಿ !

26/02/2026 5:15 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶರಾವತಿ ಸಂತ್ರಸ್ತರ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಸರ್ಕಾರ ಬದ್ಧ: ಸಚಿವ ಮಧು ಬಂಗಾರಪ್ಪ
KARNATAKA

ಶರಾವತಿ ಸಂತ್ರಸ್ತರ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಸರ್ಕಾರ ಬದ್ಧ: ಸಚಿವ ಮಧು ಬಂಗಾರಪ್ಪ

By kannadanewsnow0922/09/2025 8:43 PM

ಶಿವಮೊಗ್ಗ: ಮಲೆನಾಡಿನ ಜನರ ಆರಾಧ್ಯ ದೈವ ಶ್ರೀ ಸಿಗಂದೂರೇಶ್ವರಿ ಅಮ್ಮನವರ ಕೃಪೆಯಿಂದ ನಾಡಿನೆಲ್ಲೆಡೆ ಸಕಾಲದಲ್ಲಿ ಮಳೆಯಾಗಿದ್ದು, ಕೆರೆ ಕಟ್ಟೆ ಕಾಲುವೆಗಳು ಭರ್ತಿಯಾಗಿವೆ ಮಾತ್ರವಲ್ಲ ಉತ್ತಮ ಬೆಳೆ ಬರುವ ನಿರೀಕ್ಷೆ ಇದೆ. ಇದರಿಂದಾಗಿ ಸಹಜವಾಗಿ ಸಂತಸ ಮೂಡಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್. ಬಂಗಾರಪ್ಪ ಅವರು ಹೇಳಿದರು.

ಅವರು ಇಂದು ಸಾಗರ ತಾಲೂಕಿನ ಸಿಗಂದೂರಿನ ಶ್ರೀ ಚೌಡೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಅಂಗವಾಗಿ ಏರ್ಪಡಿಸಲಾಗಿದ್ದ ಸಿಗಂದೂರು ದಸರಾ ಸಂಭ್ರಮ 25 ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಶ್ರೀಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ನೆರವು ಮತ್ತು ಸಹಕಾರವನ್ನು ನೀಡುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಿವೆ. ಎಂದಿನಂತೆ ಮುಂದೆಯೂ ಶ್ರೀ ಕ್ಷೇತ್ರದ ಸರ್ವಾಂಗೀಣ ವಿಕಾಸಕ್ಕೆ ನೆರವು ನೀಡಲಾಗುವುದು ಎಂದರು.

ಹಲವು ದಶಕಗಳಿಂದ ಇತ್ಯರ್ಥವಾಗದೇ ಉಳಿದಿರುವ ಶರಾವತಿ ಸಂತ್ರಸ್ತರು, ಅರಣ್ಯ ಭೂಮಿ ಸಾಗುವಳಿದಾರರ ಹಿತ ಕಾಯಲು ಸರ್ಕಾರ ಹಿಂದೆ ಹೇಳಿದ ಮಾತಿನಂತೆ ಬದ್ಧವಾಗಿದೆ. ಅರಣ್ಯಗಳಲ್ಲಿ ಹಲವು ದಶಕಗಳಿಂದ ವಾಸವಾಗಿರುವ ಹಾಗೂ ಸಾಗುವಳಿದಾರರನ್ನು ಒಕ್ಕಲೆಬ್ಬಿಸದಂತೆ ಈಗಾಗಲೇ ಸರ್ಕಾರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದೆ. ಅದಕ್ಕೆ ಸಂಬಂಧಿಸಿದಂತೆ ಹಾಗೂ ದೇಶದ ಸರ್ವೋಚ್ಛ ನ್ಯಾಯಾಲಯದ ಸೂಚನೆಯಂತೆ ಸಮೀಕ್ಷಾ ಕಾರ್ಯ ಪೂರ್ಣಗೊಂಡಿದ್ದು ಅದರ ವರದಿಯನ್ನು ಸಲ್ಲಿಸಲಾಗಿದೆ. ಸಂತ್ರಸ್ತರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ನಿರೀಕ್ಷೆಯಂತೆ ಉತ್ತಮ ಹಾಗೂ ನಮ್ಮ ಪರವಾದ ತೀರ್ಪು ಬರುವ ಆಶಯವಿದೆ ಎಂದವರು ನುಡಿದರು.

ಈ ಸಂಬಂಧ ಈಗಾಗಲೇ ಅರಣ್ಯ ಹಾಗೂ ಕಂದಾಯ ಸಚಿವರೊಂದಿಗೆ ಹಲವು ಸುತ್ತಿನ ಚರ್ಚೆ ನಡೆಸಲಾಗಿದೆ. ದೇವಸ್ಥಾನಗಳಲ್ಲಿ ಮೊಳಗುವ ಗಂಟೆ ಸದ್ದಿಗಿಂತ ಶಾಲೆಗಳಲ್ಲಿ ಹೊಡೆಯುವ ಗಂಟೆ ಸದ್ದಿನಲ್ಲಿ ದೇಶದ ಮತ್ತು ಮಕ್ಕಳ ಭವಿಷ್ಯ ಅಡಗಿದೆ ಎಂದ ಅವರು ಶಿಕ್ಷಣ ಕ್ಷೇತ್ರದ ಉನ್ನತಿಗೆ ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿರುವ ಹೊಸ ಯೋಜನೆಯಡಿ ಕೆ.ಪಿ.ಎಸ್. ಶಾಲೆಗಳನ್ನು 500ರಿಂದ 850ಕ್ಕೆ ಹೆಚ್ಚಿಸಿ ಇತ್ತೀಚೆಗೆ ನಡೆದ ಕ್ಯಾಬಿನೆಟ್ ನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳು ರಾಜ್ಯದ ಪ್ರತಿ ಮನೆಗಳನ್ನು ತಲುಪಿದ್ದು, ಅವರ ನೆಮ್ಮದಿಯ ಬದುಕಿಗೆ ಸಹಕಾರಿಯಾಗಿವೆ ಎಂದರು.

ಇದೇ ಸಂದರ್ಭದಲ್ಲಿ ಸಿಗಂದೂರಿನ ಚಿತ್ತ ಸರ್ಕಾರಿ ಶಾಲೆಗಳತ್ತ ಯೋಜನೆಯಡಿಯಲ್ಲಿ ದೇವಸ್ಥಾನದ ವತಿಯಿಂದ ಹುರುಳಿ, ಕಟ್ಟಿಂಕಾರು, ಮರಾಠಿ ಅಂಬಾರಗುಡ್ಡ ಶಾಲೆಗಳಿಗೆ ಬಣ್ಣದ ಡಬ್ಬಗಳನ್ನು ವಿತರಿಸಲಾಯಿತು.

ಈ ಸಭೆಯಲ್ಲಿ ಡಾ. ಎಸ್.ರಾಮಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಕಲಗೋಡು ರತ್ನಾಕರ, ರಮೇಶ್, ದೂಗೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಫಯಾಜ್ ಅಹಮದ್, ಕಾರುಣ್ಯ ರಾಮ್, ಮತ್ತಿತರರು ಉಪಸ್ಥಿತರಿದ್ದರು.

ನವದುರ್ಗೆಯರಲ್ಲಿದೆ ನವಗ್ರಹ ಭಾವ: ಜಗನ್ಮಾತೆಯ ಕೃಪೆಗೆ ಪಾತ್ರರಾಗಲು ಹೀಗೆ ಪೂಜಿಸಿ

KRS ದೀಪಾಲಂಕಾರ ಉದ್ಘಾಟಿಸಿದ ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ

Share. Facebook Twitter LinkedIn WhatsApp Email

Related Posts

ಗ್ರಾಮೀಣ ಯುವಕರಿಗೆ ಗುಡ್ ನ್ಯೂಸ್ : ‘ಗ್ರಾಮ ಒನ್’ಕೇಂದ್ರ ಆರಂಭಿಸಲು ಸುವರ್ಣಾವಕಾಶ, ಅರ್ಜಿ ಸಲ್ಲಿಕೆ ಕುರಿತು ಇಲ್ಲಿದೆ ಮಾಹಿತಿ

26/02/2026 5:45 AM2 Mins Read

`ಗೃಹಲಕ್ಷ್ಮೀ ಫಲಾನುಭವಿ’ ಮರಣ ಹೊಂದಿದರೆ ಮನೆಯ ಮುಂದಿನ `ಯಜಮಾನಿ’ ಅರ್ಜಿ ಸಲ್ಲಿಸಲು ಅವಕಾಶ !

26/02/2026 5:25 AM2 Mins Read

ನಿಮ್ಮ `BPL’ ರೇಷನ್ ಕಾರ್ಡ್ ರದ್ದಾಗಿದ್ರೆ ಈ ದಾಖಲೆಗಳ ಜೊತೆಗೆ ಅರ್ಜಿ ಸಲ್ಲಿಸಿ !

26/02/2026 5:15 AM2 Mins Read
Recent News

ಗ್ರಾಮೀಣ ಯುವಕರಿಗೆ ಗುಡ್ ನ್ಯೂಸ್ : ‘ಗ್ರಾಮ ಒನ್’ಕೇಂದ್ರ ಆರಂಭಿಸಲು ಸುವರ್ಣಾವಕಾಶ, ಅರ್ಜಿ ಸಲ್ಲಿಕೆ ಕುರಿತು ಇಲ್ಲಿದೆ ಮಾಹಿತಿ

26/02/2026 5:45 AM

`ಗೃಹಲಕ್ಷ್ಮೀ ಫಲಾನುಭವಿ’ ಮರಣ ಹೊಂದಿದರೆ ಮನೆಯ ಮುಂದಿನ `ಯಜಮಾನಿ’ ಅರ್ಜಿ ಸಲ್ಲಿಸಲು ಅವಕಾಶ !

26/02/2026 5:25 AM

ನಿಮ್ಮ `BPL’ ರೇಷನ್ ಕಾರ್ಡ್ ರದ್ದಾಗಿದ್ರೆ ಈ ದಾಖಲೆಗಳ ಜೊತೆಗೆ ಅರ್ಜಿ ಸಲ್ಲಿಸಿ !

26/02/2026 5:15 AM

ರಾಜ್ಯದ ಜನತೆಯ ಗಮನಕ್ಕೆ : `FIR’ ದಾಖಲಿಸಲು ಪೊಲೀಸರು ನಿರಾಕರಿಸಿದ್ರೆ ಏನು ಮಾಡಬೇಕು? ಹೀಗಿವೆ ಕಾನೂನು ಅಸ್ತ್ರಗಳು !

26/02/2026 5:05 AM
State News
KARNATAKA

ಗ್ರಾಮೀಣ ಯುವಕರಿಗೆ ಗುಡ್ ನ್ಯೂಸ್ : ‘ಗ್ರಾಮ ಒನ್’ಕೇಂದ್ರ ಆರಂಭಿಸಲು ಸುವರ್ಣಾವಕಾಶ, ಅರ್ಜಿ ಸಲ್ಲಿಕೆ ಕುರಿತು ಇಲ್ಲಿದೆ ಮಾಹಿತಿ

By kannadanewsnow5726/02/2026 5:45 AM KARNATAKA 2 Mins Read

ಬೆಂಗಳೂರು: ಸ್ವಂತ ಉದ್ಯೋಗ ಮಾಡಬಯಸುವ ಗ್ರಾಮೀಣ ಭಾಗದ ಯುವಕ-ಯುವತಿಯರಿಗೆ ಕರ್ನಾಟಕ ಸರ್ಕಾರವು ಸುವರ್ಣಾವಕಾಶ ನೀಡುತ್ತಿದೆ. ನಿಮ್ಮದೇ ಗ್ರಾಮದಲ್ಲಿ ‘ಗ್ರಾಮ ಒನ್’…

`ಗೃಹಲಕ್ಷ್ಮೀ ಫಲಾನುಭವಿ’ ಮರಣ ಹೊಂದಿದರೆ ಮನೆಯ ಮುಂದಿನ `ಯಜಮಾನಿ’ ಅರ್ಜಿ ಸಲ್ಲಿಸಲು ಅವಕಾಶ !

26/02/2026 5:25 AM

ನಿಮ್ಮ `BPL’ ರೇಷನ್ ಕಾರ್ಡ್ ರದ್ದಾಗಿದ್ರೆ ಈ ದಾಖಲೆಗಳ ಜೊತೆಗೆ ಅರ್ಜಿ ಸಲ್ಲಿಸಿ !

26/02/2026 5:15 AM

ರಾಜ್ಯದ ಜನತೆಯ ಗಮನಕ್ಕೆ : `FIR’ ದಾಖಲಿಸಲು ಪೊಲೀಸರು ನಿರಾಕರಿಸಿದ್ರೆ ಏನು ಮಾಡಬೇಕು? ಹೀಗಿವೆ ಕಾನೂನು ಅಸ್ತ್ರಗಳು !

26/02/2026 5:05 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.