ಮೈಸೂರು : ಮಹಿಳೆಯನ್ನು ಹಿಂಬಾಲಿಸಿ ಬಂದ ರೌಡಿಶೀಟರ್ ಗೆ ಧರ್ಮದೇಟು ಬಿದ್ದಿದೆ. ಮೈಸೂರಿನ ಹೂಟಗಹಳ್ಳಿಯಲ್ಲಿ ರೌಡಿಶೀಟರ್ ಗೆ ಮಹಿಳೆಯರೇ ಥಳಿಸಿದ್ದಾರೆ. ಎಚ್ ಡಿ ಕೋಟೆ ತಾಲೂಕಿನ ಅಗತ್ತೂರಿನ ರೌಡಿಶೀಟರ್ ರಾಜೇಶ್ ಎಂಬಾತನಿಗೆ ಥಳಿಸಿದ್ದಾರೆ.
ಮಹಿಳೆ ಫೋನ್ ನಂಬರ್ ಪಡೆದು ಅಸಭ್ಯವಾಗಿ ರಾಜೇಶ್ ವರ್ತಿಸಿದ್ದಾನೆ. ಹುಣಸೂರು ಮುಖ್ಯ ರಸ್ತೆಯಲ್ಲಿ ಸಿಕ್ಕ ರಾಜೇಶನಿಗೆ ಮಹಿಳೆಯರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಫೋನ್ ನಂಬರ್ ಪಡೆದು ಅಸಭ್ಯ ವರ್ತನೆ ತೋರಿದ್ದಾನೆ. ಹುಣಸೂರು ಮುಖ್ಯ ರಸ್ತೆಯಲ್ಲಿ ರಾಜೇಶ್ ಸಿಕ್ಕಾಗ ಮಹಿಳೆಯರೇ ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ ಈಗ ಈ ಒಂದು ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಮೆಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








