ಕೆಎನ್ಎನ್ ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಯಾವುದೇ ಒಂದು ವಿಷಯವನ್ನು ತಿಳಿದುಕೊಳ್ಳಬೇಕೆಂದರೆ ಮೊದಲಿಗೆ ನೆನಪಾಗೋದೆ ಗೂಗಲ್ ಸರ್ಜ್.. ಆದ್ರೇ ಅತೀ ಹೆಚ್ಚಾಗಿ 2022 ವರ್ಷದಲ್ಲಿ ಗಲ್ ಸರ್ಚ್ನಲ್ಲಿ ಮಾಡಿರೋದೇನು ಗೊತ್ತಾ? ಈ ಕುರಿಯ ರಿಪೋರ್ಟ್ ಬಿಡುಗಡೆ ಮಾಡಲಾಗಿದೆ ಇಲ್ಲಿದೆ ಓದಿ
video viral : ಗೋಧಿ ಚೀಲ ಕದ್ದ ಆರೋಪಿಯನ್ನು ಟ್ರಕ್ನ ಬಾನೆಟ್ಗೆ ಕಟ್ಟಿ ಠಾಣೆಗೆ ಕರೆತಂದ ಚಾಲಕ | WATCH
2021ಕ್ಕೆ ಹೋಲಿಸಿದ್ರೆ ಈ ವರ್ಷ ಬೇರೆ ಬೇರೆ ವಿಚಾರಗಳನ್ನು ಹುಡುಕಾಟ ಮಾಡಲಾಗಿದೆ ಭಾರತದಲ್ಲಿ 2022ರ ಟಾಪ್ ಸರ್ಚ್ನಲ್ಲಿರುವುದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್). ಕ್ರೀಡೆ ಬಿಟ್ಟರೆ ಕೋವಿನ್ ಪೋರ್ಟ್ಲ್ ಅನ್ನು ಅತಿ ಹೆಚ್ಚು ಹುಡುಕಲಾಗಿದೆ. ಕೋವಿಡ್ ವಿರುದ್ಧದ ಲಸಿಕೆ ಪಡೆಯಲು ಪೋರ್ಟಲ್ ಅನ್ನು ಜನರು ಹುಡುಕಾಡಿದ್ದಾರೆ ಮಾಹಿತಿ ಬಹಿರಂಗವಾಗಿದೆ
ನವೆಂಬರ್ 20ರಂದು FIFA World Cup ಆರಂಭವಾಗಿದೆ. ಆದರೆ ಈ ಬಾರಿ ಭಾರತದಲ್ಲಿ ಗೂಗಲ್ನಲ್ಲಿ ಹುಡುಕಾಡಿದ ಮೂರನೇ ಅತಿ ಹೆಚ್ಚಿನ ವಿಷಯ ಇದೇ ಆಗಿದೆ. ಗೂಗಲ್ನಲ್ಲಿ ಅತಿ ಹೆಚ್ಚು ಹುಡುಕಾಡಿದ 4 ಮತ್ತು 5 ವಿಷಯವೂ ಕ್ರೀಡೆಗೆ ಸಂಬಂಧಿಸಿದ್ದು, Asia Cup ಮತ್ತು ICC Men’s T20 World Cup ಅನ್ನು ಜನರು ಹೆಚ್ಚಾಗಿ ಹುಡುಕಾಡಿದ್ದಾರೆ ಎಂದು ಗೂಗಲ್ ವರದಿ ಹೇಳಿದೆ.
video viral : ಗೋಧಿ ಚೀಲ ಕದ್ದ ಆರೋಪಿಯನ್ನು ಟ್ರಕ್ನ ಬಾನೆಟ್ಗೆ ಕಟ್ಟಿ ಠಾಣೆಗೆ ಕರೆತಂದ ಚಾಲಕ | WATCH
ಸಿನಿಮಾಗಳ ಹುಡುಕಾಟ; ಗೂಗಲ್ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ಗೂಗಲ್ನಲ್ಲಿ ಅತಿ ಹೆಚ್ಚು ಹುಡುಕಾಡಿದ 6ನೇ ವಿಚಾರ ಸಿನಿಮಾಗೆ ಸಂಬಂಧಿಸಿದ್ದು. 6ನೇ ಸ್ಥಾನದಲ್ಲಿ Brahmastra: Part One – Shiva ಇದೆ. 9ನೇ ಸ್ಥಾನದಲ್ಲಿ ಕೆಜಿಎಫ್ ಚಾಪ್ಟರ್-2 ಇದೆ.
2021 ಮತ್ತು 2022ರಲ್ಲಿ ಭಾರತದಲ್ಲಿ ಜನರು Near me ನಲ್ಲಿ ತಮ್ಮ ಹತ್ತಿರದ ಪ್ರದೇಶಗಳ ಕೋವಿಡ್ ಪ್ರಕರಣಗಳ ಸಂಖ್ಯೆ, ಕೋವಿಡ್ ಮಾರ್ಗಸೂಚಿ ಪ್ರಕಾರ ಇರುವ ನಿಯಮಗಳೇನು?, ಕೋವಿಡ್ ಲಸಿಕೆ ಎಲ್ಲಿ ಸಿಗುತ್ತದೆ? ಎಂದು ಸರ್ಚ್ ಮಾಡಿದ್ದಾರೆ. ಇದರ ಜೊತೆಗೆ ಈ ವರ್ಷ ಹತ್ತಿರದ ಈಜುಕೊಳ, ಹತ್ತಿರದ ವಾಟರ್ ಪಾರ್ಕ್, ಹತ್ತಿರದ ಸಿನಿಮಾ ಹಾಲ್ಗಳನ್ನು ಹುಡುಕಾಡಿದ್ದಾರೆ.
ಅದೇ ಕಳೆದ ವರ್ಷ ಹತ್ತಿರದಲ್ಲಿ ಕೋವಿಡ್ ಪರೀಕ್ಷಾ ಕೇಂದ್ರ ಎಲ್ಲಿದೆ, ಆಕ್ಸಿಜನ್ ಸಿಲಿಂಡರ್ ಎಲ್ಲಿ ಸಿಗುತ್ತದೆ, ಹತ್ತಿರದ ಕೋವಿಡ್ ಆಸ್ಪತ್ರೆ ಯಾವುದು? ಎಂದು ಸರ್ಚ್ ಮಾಡಿದ್ದರು.
video viral : ಗೋಧಿ ಚೀಲ ಕದ್ದ ಆರೋಪಿಯನ್ನು ಟ್ರಕ್ನ ಬಾನೆಟ್ಗೆ ಕಟ್ಟಿ ಠಾಣೆಗೆ ಕರೆತಂದ ಚಾಲಕ | WATCH
ಕೇಂದ್ರ ಸರ್ಕಾರ ಘೋಷಣೆ ಮಾಡಿದ ನೂತನ ಅಗ್ನಿಪಥ್ ಯೋಜನೆ ಕುರಿತು 2022ರಲ್ಲಿ ಜನರು ಗೂಗಲ್ ಮಾಡಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ನಡೆಯುತ್ತಿರುವ ಕಾರಣ ನ್ಯಾಟೋ ಎಂದು ಹುಡುಕಾಡಿದ್ದಾರೆ. ಎನ್ಎಫ್ಟಿ ಮತ್ತು ಬ್ಲಾಕ್ ಫಂಗಸ್ ಎಂದರೇನು? ಎಂದು ಜನರು ಅತಿ ಹೆಚ್ಚಾಗಿ ಹುಡುಕಾಟ ನಡೆಸಿದ್ದಾರೆ. ಇನ್ನೂ 2022ರಲ್ಲಿ ಅತಿ ಹೆಚ್ಚು ಹುಡುಕಿದ ರಾಜಕಾರಣಿಗಳು ಬಿಜೆಪಿಯಲ್ಲಿದ್ದ ನೂಪುರ್ ಶರ್ಮಾ, ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು, ಬ್ರಿಟನ್ ಪ್ರಧಾನಿಯಾದ ರಿಷಿ ಸುನಕ್ ಮತ್ತು ಲಲಿತ್ ಮೋದಿ ಆಗಿದ್ದಾರೆ.
ಒಟ್ಟಾರೆ ಪ್ರತಿ ವರ್ಷದ ಗೋಗಲ್ನಲ್ಲಿ ಒಂದಲ್ಲ ಒಂದು ವಿಷಯ ಅತೀ ಹೆಚ್ಚಾಗಿ ಹುಡುಕಾಟ ನಡೆಸುತ್ತಾರೆ ಮುಂದಿನ ವರ್ಷ ಯಾವ ವಿಷಯ ಹುಡುಕಾಟ ನಡೆಸುತ್ತಾರೆ ಅನ್ನೊದನ್ನು ಕಾದು ನೋಡಬೇಕಾಗಿದೆ
video viral : ಗೋಧಿ ಚೀಲ ಕದ್ದ ಆರೋಪಿಯನ್ನು ಟ್ರಕ್ನ ಬಾನೆಟ್ಗೆ ಕಟ್ಟಿ ಠಾಣೆಗೆ ಕರೆತಂದ ಚಾಲಕ | WATCH