ನವದೆಹಲಿ : ಟೆಕ್ ದೈತ್ಯ ಗೂಗಲ್ ತನ್ನ ಬಳಕೆದಾರರಿಗೆ ಕಠಿಣ ಎಚ್ಚರಿಕೆ ನೀಡಿದೆ. ಗೂಗಲ್ ಪ್ಲೇ ಸ್ಟೋರ್ನಿಂದ 16 ಅಪಾಯಕಾರಿ ಅಪ್ಲಿಕೇಶ್ಗಳನ್ನ ತೆಗೆದುಹಾಕಿದೆ. ಬಳಕೆದಾರರು ಆ ಅಪ್ಲಿಕೇಶನ್ಗಳನ್ನ ಬಳಸುತ್ತಿದ್ದರೆ, ಅವುಗಳನ್ನು ತಕ್ಷಣವೇ ಅಳಿಸಬೇಕು ಎಂದು ಸಲಹೆ ನೀಡಿದೆ.
ಗೂಗಲ್ ಪ್ಲೇ ಸ್ಟೋರ್ನಲ್ಲಿ 16 ಅಪ್ಲಿಕೇಶನ್ಗಳನ್ನ ಗುರುತಿಸಿದ್ದು, ಅದು ಬ್ಯಾಟರಿಯನ್ನ ನಾಶಪಡಿಸುತ್ತದೆ ಮತ್ತು ಡೇಟಾ ಬಳಕೆಯನ್ನ ಹೆಚ್ಚಿಸುತ್ತದೆ. ಈಗಾಗಲೇ 20 ದಶಲಕ್ಷಕ್ಕೂ ಹೆಚ್ಚು ಜನರು ಈ ಆ್ಯಪ್ ಇನ್ಸ್ಟಾಲ್ ಮಾಡಿದ್ದು, ಬಳಕೆದಾರರ ಬಳಕೆಯ ಬಗ್ಗೆ ತಪ್ಪು ಮಾಹಿತಿಯನ್ನ ಹರಡುತ್ತಿದೆ. ತಮ್ಮ ಅಪ್ಲಿಕೇಶನ್ಗಳು ಭದ್ರತಾ ಕಂಪನಿಯಿಂದ ಮಾನ್ಯತೆ ಪಡೆದಿವೆ ಎಂದು ಸುಳ್ಳು ಜಾಹೀರಾತುಗಳೊಂದಿಗೆ ಬಳಕೆದಾರರನ್ನ ದಾರಿತಪ್ಪಿಸಲು ಪ್ರಯತ್ನಿಸುತ್ತಿದೆ ಎಂದು ಗೂಗಲ್ ಹೇಳಿದೆ.
ಆರ್ಸ್ ಟೆಕ್ನಿಕಾದ ವರದಿಯ ಪ್ರಕಾರ, ಗೂಗಲ್ ಪ್ಲೇ ಸ್ಟೋರ್ 16 ಅಪ್ಲಿಕೇಶನ್ಗಳನ್ನ ತೆಗೆದುಹಾಕಿದೆ. ಪ್ರಮುಖ ಸೈಬರ್ ಸೆಕ್ಯುರಿಟಿ ಸಂಸ್ಥೆ ಮೆಕಾಫೀ ಗುರುತಿಸಿರುವ ಈ ಅಪಾಯಕಾರಿ ಅಪ್ಲಿಕೇಶನ್ಗಳು ಈ ಹಿಂದೆ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳು ಮತ್ತು ಟ್ಯಾಬ್ಲೆಟ್ಗಳಲ್ಲಿ ಡೌನ್ಲೋಡ್ ಮಾಡಲು ಲಭ್ಯವಿದ್ದವು ಎಂದು ಪ್ರಮುಖ ಸೈಬರ್ ಭದ್ರತಾ ಸಂಸ್ಥೆ ಮೆಕಾಫೀ ಹೇಳಿಕೊಂಡಿದೆ. ಇದನ್ನು QR ಕೋಡ್’ಗಳನ್ನ ಸ್ಕ್ಯಾನ್ ಮಾಡಲು, ಮೊಬೈಲ್ ಅಥವಾ ಟ್ಯಾಬ್ಲೆಟ್’ಗಳಲ್ಲಿ ಟಾರ್ಚ್’ನಂತೆ ಫ್ಲ್ಯಾಶ್ ಅನ್ನು ಆನ್ ಮಾಡಲು ಅಥವಾ ವಿವಿಧ ಉದ್ದೇಶಗಳಿಗಾಗಿ ಬಳಸಲು ಬಳಸಬಹುದು. ಅದೇ ಅಪ್ಲಿಕೇಶನ್ಗಳು ಈಗ ಬಳಕೆದಾರರಿಗೆ ನಷ್ಟವನ್ನ ಉಂಟು ಮಾಡುತ್ತಿವೆ ಎಂದು ಮೆಕಾಫೀಯ ಪ್ರತಿನಿಧಿಗಳು ಹೇಳಿದರು.
ಅದ್ರಂತೆ, BusanBus, Joycode, Currency Converter, High speed Camera, Smart Task Manager, Flashlight+, K-Dictionary, Quick Note, EzDica ಸೇರಿ ಇತ್ಯಾದಿ ಅಪ್ಲಿಕೇಶನ್ಗಳನ್ನ ಅಳಿಸಲಾಗಿದೆ.