ಬೆಳಗಾವಿ: ಜಿಲ್ಲೆಯಲ್ಲಿ ನಿಯಂತ್ರಣ ಕಳೆದುಕೊಂಡ ಗೂಡ್ಸ್ ವಾಹನವೊಂದು ಬೈಕ್ ಗೆ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವಂತ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಮುಳ್ಳೂರು ಘಾಟ್ ನಲ್ಲಿ ಗೂಡ್ಸ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ರಾಮದುರ್ಗದ ಅರ್ಚಕ, ಬೈಕ್ ಸವಾರ ವಿಜಯಕುಮಾರ್ ಘೋಡಬೋಲೆ(55) ಹಾಗೂ ಕಲಬುರ್ಗಿಯ ಗೂಡ್ಸ್ ವಾಹನದ ಚಾಲಕ ಅನಿಲ್ ಬೀರದಾರ(23) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಹಾವೇರಿಯಿಂದ ರಾಮದುರ್ಗದತ್ತ ಗೂಡ್ಸ್ ವಾಹನ ತೆರಳುತ್ತಿತ್ತು. ನಿಯಂತ್ರಣ ತಪ್ಪಿ ದೇಗುಲಕ್ಕೆ ತೆರಳುತ್ತಿದ್ದಂತ ಅರ್ಚಕನ ಬೈಕ್ ಗೆ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದಂತ ಅರ್ಚಕ ಹಾಗೂ ಗೂಡ್ಸ್ ವಾಹನದ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸಾಗರದಲ್ಲಿ ‘ಕರಾಟೆ ಇನ್ಸ್ ಸ್ಟಿಟ್ಯೂಟ್’ನ 25ನೇ ವಾರ್ಷಿಕೋತ್ಸವ ಆಚರಣೆ: ಕರಾಟೆ ಪಟುಗಳಿಗೆ ಸನ್ಮಾನ
ಪರಿಷ್ಕೃತ ಜಿಎಸ್‌ಟಿ ದರಗಳಿಂದ ಯಾವ ವಸ್ತುಗಳು ಅಗ್ಗವಾಗಬಹುದು? ಇಲ್ಲಿದೆ ಡೀಟೆಲ್ಸ್ | GST bonanza