ಕೋಲಾರ : ಕೋಲಾರ ಜಿಲ್ಲೆಯ ಹಾಲು ಉತ್ಪಾದಕರಿಗೆ ಇದೀಗ ಯುಗಾದಿ ಹಬ್ಬದ ಉಡುಗೊರೆ ನೀಡಲಾಗಿದ್ದು ಕೋಲಾರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಪ್ರತಿ ಲೀಟರಿಗೆ ಎರಡು ರೂಪಾಯಿ ಹೆಚ್ಚಳ ಮಾಡಿದೆ.
ಈ ಹಿಂದೆ ಹಾಲು ಉತ್ಪಾದಕರಿಗೆ ಲೀಟರ್ಗೆ 35.40 ನೀಡಲಾಗುತ್ತಿತ್ತು. ಇದೀಗ 2ರೂಪಾಯಿ ಹೆಚ್ಚಳ ಮಾಡಿದ್ದರಿಂದ ಪ್ರತಿ ಲೀಟರ್ಗೆ 37.40 ಹಾಲು ಉತ್ಪಾದಿಕರಿಗೆ ಸಿಗಲಿದೆ ಜೊತೆಗೆ ಹಸಿರುಮವು ಬೆಳೆಯುವ ರೈತರಿಗೆ ಎಕರೆಗೆ ರೂ.3000 ಪ್ರೋತ್ಸಾಹ ಧನ ನೀಡಲಾಗುತ್ತದೆ ಹಸುಗಳಿಗೆ 70,000 ದಿಂದ 70,000 ವರೆಗೆ ವಿಮೆ ಹೆಚ್ಚಳ ಮಾಡಲಾಗಿದೆ ಎಂದು ಕೋಲಾರ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಕೆ ವೈ ನಂಜೇಗೌಡ ಮಾಹಿತಿ ನೀಡಿದ್ದಾರೆ.








