ಬೆಂಗಳೂರು : ಯುವ ಜನತೆಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ಯುವಜನ ಸ್ನೇಹಿ ಅಂಶಗಳುಳ್ಳ ‘ಕರ್ನಾಟಕ ಯುವ ನೀತಿ- 2022’ ಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ನಿನ್ನೆ ವಿಧಾನಸೌಧದಲ್ಲಿ ನಡೆದ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಕರ್ನಾಟಕ ಯುವ ನೀತಿ- 2022’ ಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಯುವಜನರಿಗೆ ಹಲವು ಪೂರಕ ತರಬೇತಿ ನೀಡುವುದು, ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ, ಉದ್ಯಮಿಗಳಿಗೆ ಆರ್ಥಿಕ ಬೆಂಬಲ, ಮಾರ್ಗದರ್ಶನ ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ. ಯುವಜನತೆಯ ಅಭಿವೃದ್ಧಿಗೆ ಸಾರ್ವಜನಿಕ ಹಣಕಾಸು ಪೂರೈಕೆ ವ್ಯವಸ್ಥಿತಗೊಳಿಸುವಂತೆ ನೆರವಾಗಲು ವಾರ್ಷಿಕ ಯುವಜನ ಬಜೆಟ್ ರೂಪಿಸುವುದು. ಮದ್ಯ, ತಂಬಾಕು, ಮಾದಕ ವಸ್ತು ಸೇವನೆಯಿಂದಾಗುವ ಹಾನಿ ಕುರಿತು ಯುವ ಜನತೆಗೆ ಜಾಗೃತಿ ಮೂಡಿಸುವುದು, ಡಿಜಿಟಲ್ ಚಟದಿಂದ ಮಕ್ಕಳು ಮತ್ತು ಯುವಜನರನ್ನು ಮುಕ್ತಗೊಳಿಸುವ ಬಗ್ಗೆ ಪೋಷಕರಲ್ಲಿಅರಿವು ಕಾರ್ಯಕ್ರಮ. ಸೇರಿ ಹತ್ತು ಹಲವು ಮಹತ್ವದ ಉದ್ದೇಶ ‘ಕರ್ನಾಟಕ ಯುವ ನೀತಿ- 2022 ರಲ್ಲಿದೆ.
How To Control Ants: ನಿಮ್ಮ ಮನೆಗಳಲ್ಲಿ ಇರುವೆಗಳ ಕಾಟಾನಾ? ನಿಯಂತ್ರಿಸಲು ಇಲ್ಲಿವೆ ಸಿಂಪಲ್ ಮನೆಮದ್ದುಗಳು