ಬೆಂಗಳೂರು : ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಇದೀಗ BMRCL ಸಿಹಿ ಸುದ್ದಿಯೊಂದನ್ನು ನೀಡಿದ್ದು, ಪ್ರಯಾಣಿಕರು ಸುಲಭವಾಗಿ ಟಿಕೆಟ್ ಪಡೆದುಕೊಳ್ಳುವ ಉದ್ದೇಶದಿಂದ ನಮ್ಮ ಮೆಟ್ರೋ ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ ಮೂಲಕ ಟಿಕೆಟ್ ಸೌಲಭ್ಯ ಕಲ್ಪಿಸಿದೆ.
ಹೌದು ಇದುವರೆಗೆ ವಾಟ್ಸಾಪ್ ಮತ್ತು ಪೇಟಿಎಂನಲ್ಲಿ ಮಾತ್ರ ಮೆಟ್ರೋ ಟಿಕೆಟ್ ಗಳನ್ನು ಪಡೆದುಕೊಳ್ಳಲು ಅವಕಾಶವಿದ್ದು, ಇತ್ತೀಚೆಗೆ ಆ ರೀತಿಯ ಟಿಕೆಟ್ ಖರೀದಿಸುವಲ್ಲಿ ಹಲವು ಸಮಸ್ಯೆಗಳು ಇರುವುದರಿಂದ ಸಾರ್ವಜನಿಕರಿಂದ ದೂರು ಕೇಳಿಬಂದಿದ್ದವು. ಈಗ ಇನ್ನೂ 5 ಆಯಪ್ ಗಳಲ್ಲಿ ಟಿಕೆಟ್ ಪಡೆಯಬಹುದಾಗಿದೆ.
ಯಾವ್ಯಾವ ಆಪ್ ಗಳನ್ನು ಬಳಸಬಹುದು?
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಟಿಕೆಟ್ ಪಡೆಯೋದು ಸುಲಭವಾಗಲೆಂದು, ಮೈಲ್ಸ್ ಅಂಡ್ ಕಿಲೋಮೀಟರ್ಸ್, ಟು ಮ್ಯಾಕ್, ಔಟ್ ಪಾಥ್, ರೆಡ್ ಬಸ್, ಹೈವೇ ಡಿ ಲೈಟ್ ಆಯಪ್ ಗಳನ್ನು ಬಳಸಿಕೊಂಡು ಪ್ರಯಾಣಿಕರು ಮೆಟ್ರೋ ಟಿಕೆಟ್ ಗಳನ್ನು ಖರೀದಿಸಬಹುದಾಗಿದೆ. ಅಲ್ಲದೇ ಆನ್ಲೈನ್ ಬುಕಿಂಗ್ ಗೆ ವಿವಿಧ ಆಯಪ್ ಗಳಲ್ಲಿ ಶೇಕಡ 10 ರಿಂದ 30 ರಷ್ಟು ರಿಯಾಯಿತಿ ಕೂಡ ನೀಡಲಾಗುತ್ತಿದೆ.