ನವದೆಹಲಿ : ನಾಲ್ಕು ವರ್ಷಗಳ ಪದವಿ ಪಡೆದ ವಿದ್ಯಾರ್ಥಿಗಳು ನೇರವಾಗಿ ಪಿಎಚ್.ಡಿ ಕೋರ್ಸ್’ಗಳನ್ನ ಮುಂದುವರಿಸಬಹುದು ಎಂದು ಯುಜಿಸಿ ಅಧ್ಯಕ್ಷ ಜಗದೀಶ್ ಕುಮಾರ್ ಹೇಳಿದ್ದಾರೆ.
ದೇಶದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ 4 ವರ್ಷದ ಕೋರ್ಸ್ಗಳು ಆರಂಭವಾಗಲಿವೆ ಎಂದು ಯುಜಿಸಿ ಈಗಾಗಲೇ ಮಾಹಿತಿ ನೀಡಿದೆ. ಸಧ್ಯ ಯುಜಿಸಿ ಅಧ್ಯಕ್ಷ ಜಗದೀಶ್ ಕುಮಾರ್ ನಾಲ್ಕು ವರ್ಷಗಳ ಪದವಿ ಪಡೆದ ವಿದ್ಯಾರ್ಥಿಗಳು ನೇರವಾಗಿ ಪಿಎಚ್.ಡಿ ಕೋರ್ಸ್’ಗಳನ್ನ ಮುಂದುವರಿಸಬಹುದು ಎಂದು ತಿಳಿಸಿದ್ದಾರೆ.
ಮೂರು ವರ್ಷಗಳ ಆನರ್ಸ್ ಪದವಿಯನ್ನ ನೀಡಬೇಕೇ ಅಥವಾ ನಾಲ್ಕು ವರ್ಷಗಳ ಪದವಿ ಕೋರ್ಸ್ ನೀಡಬೇಕೇ ಎಂಬುದನ್ನು ವಿಶ್ವವಿದ್ಯಾಲಯಗಳು ನಿರ್ಧರಿಸಬಹುದು ಎಂದು ಅವರು ಹೇಳಿದರು. ಇನ್ನು 4 ವರ್ಷಗಳ ಕಾರ್ಯಕ್ರಮವು ಸಂಪೂರ್ಣವಾಗಿ ಜಾರಿಯಾಗುವವರೆಗೆ 3 ವರ್ಷದ ಪದವಿ ಕೋರ್ಸ್’ಗಳನ್ನ ನಿಲ್ಲಿಸಲಾಗುವುದಿಲ್ಲ.
ನಮ್ಮ ಕ್ಲೀನಿಕ್ ಯೋಜನೆಗೆ ಚಾಲನೆ: ಜನವರಿ ಅಂತ್ಯದೊಳಗೆ 438 ನಮ್ಮ ಕ್ಲೀನಿಕ್ ಆರಂಭ – ಸಿಎಂ ಬೊಮ್ಮಾಯಿ
BIGG NEWS : ಡಿ.19 ಕ್ಕೆ ಬೆಳಗಾವಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಿಗದಿ