ಬೆಂಗಳೂರು: ವಿವಿಧ ಕಾರಣದಿಂದಾಗಿ ಸ್ಥಗಿತಗೊಂಡಿದಂತ 3,000 ಅರ್ಹ ಕಲಾವಿದರಿಗೆ ರಾಜ್ಯ ಸರ್ಕಾರ ಮಾಸಾಶನ ಬಿಡುಗಡೆ ಮಾಡಿ ಆದೇಶಿಸಿದೆ.
ಈ ಕುರಿತಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಮಾಸಾಶನ ಕೋರಿ 2018-2021ರವರೆಗೆ ಅರ್ಜಿ ಸಲ್ಲಿಸಿದ್ದ 3 ಸಾವಿರ ಅರ್ಹ ಸಾಹಿತಿ ಮತ್ತು ಕಲಾವಿದರಿಗೆ ತಲಾ 2 ಸಾವಿರ ರೂ ಗಳಂತೆ 2022ರ ಸೆಪ್ಟೆಂಬರ್ 1ರಿಂದ ಜಾರಿಗೆ ಬರುವಂತೆ ಮಾಸಾಶನ ನೀಡಲು ಸೂಚಿಸಿದೆ.
ತಮ್ಮ ಕುಟುಂಬ ಸಮೇತ ʻಕರ್ತವ್ಯ ಪಥʼಕ್ಕೆ ಭೇಟಿ ನೀಡುವಂತೆ ನಾಗರಿಕರನ್ನು ಆಹ್ವಾನಿಸಿದ ಪ್ರಧಾನಿ ಮೋದಿ!
ಅರ್ಹ ಸಾಹಿತಿ ಮತ್ತು ಕಲಾವಿದರುಗಳಿಗೆ ಮಾಸಾಶನ ಬಿಡುಗಡೆಗೆ ಮುನ್ನ ಅವರ ನೈಜತೆಯನ್ನು ಪರಿಶೀಲಿಸಿ, ಖಾತ್ರಿ ಪಡಿಸಿಕೊಳ್ಳಬೇಕು ಎಂದು ಕೂಡ ಆದೇಶಸದಲ್ಲಿ ತಿಳಿಸಿದೆ. ಅಂದಹಾಗೇ ಮೈಸೂರಿನ ಶ್ರೀನಿವಾಸ ಸಮಿತಿಯು 2019-20 ಹಾಗೂ 2020-21ನೇ ಸಾಲಿನಲ್ಲಿ ಎರಡು ಸಾವಿರ ಸಾಹಿತಿ, ಕಲಾವಿದರಿಗೆ ಮಾಸಾಶನ ಮಂಜೂರು ಮಾಡಲು ಶಿಫಾರಸ್ಸು ಮಾಡಿತ್ತು.