ಬೆಂಗಳೂರು : ರಾಜ್ಯದ ಪ್ರವಾಸೋದ್ಯಮ ನೀತಿಯಡಿ ಎರಡು ಮೆಗಾ ಸೇರಿ ಒಟ್ಟು 28 ಪ್ರವಾಸೋದ್ಯಮ ಯೋಜನಾ ಪ್ರಸ್ತಾವಗಳಿಗೆ ಅನುಮೋದನೆ ನೀಡಲಾಗಿದೆ. 28 ಯೋಜನೆಗಳ ಪೈಕಿ ಒಂದಕ್ಕೆ ಮಾತ್ರ ಸ್ಥಳ ವೀಕ್ಷಣೆಯ ಷರತ್ತು ವಿಧಿಸಲಾಗಿದೆ. ಈ ಯೋಜನೆಗಳ ಮೂಲಕ ಒಟ್ಟು ₹793 ಕೋಟಿ ಬಂಡವಾಳ ಹೂಡಿಕೆ ಆಗಲಿದೆ. 4 ಸಾವಿರ ನೇರ ಉದ್ಯೋಗಗಳು ಸೃಷ್ಟಿ ಆಗಲಿವೆ ಎಂದು ಪ್ರವಾಸೋದ್ಯಮ ಸಚಿವರಾದ ಎಚ್.ಕೆ.ಪಾಟೀಲ್ ಅವರು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸುಸಜ್ಜಿತ ಏರ್‌ಡೋಂ, ಹಂಪಿಯಲ್ಲಿ ತಾಜ್ ಹೋಟೆಲ್ ಸಮೂಹದ ಬೃಹತ್ ಹೋಟೆಲ್ ನಿರ್ಮಾಣವೂ ಸೇರಿ 793 ಕೋಟಿ ರೂ. ಮೊತ್ತದ 27 ಖಾಸಗಿ ಹೂಡಿಕೆ ಯೋಜನೆಗಳಿಗೆ ಪ್ರವಾಸೋದ್ಯಮ ಇಲಾಖೆಯ ಸಮಿತಿ ಮಂಗಳವಾರ ಒಪ್ಪಿಗೆ ನೀಡಿದೆ. ಪ್ರವಾಸೋದ್ಯಮ ನೀತಿ 2020-26ರ ಅನ್ವಯ ಈ ಎಲ್ಲಾ ಯೋಜನೆಗಳಿಗೆ ಅನುಮತಿ ನೀಡಲಾಗಿದೆ.28 ಅರ್ಜಿಗಳು ಸಲ್ಲಿಕೆಯಾಗಿದ್ದು 27ಕ್ಕೆ ಅನುಮತಿ ನೀಡಲಾಗಿದೆ. ಒಪ್ಪಿಗೆ ನೀಡಿರುವ ಎಲ್ಲವೂ ಖಾಸಗಿ ಹೂಡಿಕೆಯಾಗಿದ್ದು, 4000 ನೇರ ಉದ್ಯೋಗಾವಕಾಶ ಸೃಷ್ಟಿ ನಿರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ.
ಹಂಪಿಯಲ್ಲಿ ತಾಜ್ ಸಮೂಹ ಸಂಸ್ಥೆ 99. ಹಾಸಿಗೆ ಸಾಮರ್ಥ್ಯದ ಬೃಹತ್ ಹೋಲ್ ನಿರ್ಮಿಸಲಿದೆ. ಮತ್ತೊಂದು ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸುಸಜ್ಜಿತ ಏರ್ ಡೋಮ್ ನಿರ್ಮಾಣ ಮಾಡಲಾಗುತ್ತದೆ.
ಉಳಿದಂತೆ 12 ಪ್ರೀಮಿಯಂ ಹೋಟೆಲ್‌ಗಳು, 13 ಸಾಮಾನ್ಯ ದರ್ಜೆ ಹೋಟೆಲ್, 1 ರಸ್ತೆ ಬದಿಯ ಸೌಕರ್ಯ, 1 ವೆಲ್ಲೆಸ್ ಸೆಂಟರ್ ಸೇರಿದೆ ಎಂದು ಮಾಹಿತಿ ನೀಡಿದ್ದಾರೆ.