ಕೆಎನ್ಎನ್ಡಿಜಿಟಲ್ ಡೆಸ್ಕ್ : ರೈಲ್ವೆಯಲ್ಲಿ ಸರ್ಕಾರಿ ಉದ್ಯೋಗದ ಕನಸು ಕಾಣುವ ಯುವಕರಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ನೈಋತ್ಯ ರೈಲ್ವೆ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳು 3 ಜನವರಿ 2023 ರಿಂದ ಅಧಿಕೃತ ವೆಬ್ಸೈಟ್ rrcser.co.in ಮೂಲಕ ಅರ್ಜಿ ಸಲ್ಲಿಸಬಹುದು. ಇನ್ನು ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಫೆಬ್ರವರಿ 2, 2023 ಆಗಿದೆ.
ಖಾಲಿ ಇರುವ ಹುದ್ದೆಗಳೆಷ್ಟು.?
ರೈಲ್ವೆ ನೇಮಕಾತಿ ಕೋಶವು ಹೊರಡಿಸಿದ ಅಧಿಸೂಚನೆಯ ಪ್ರಕಾರ, ಈ ಪ್ರಕ್ರಿಯೆಯ ಮೂಲಕ, ನೈರುತ್ಯ ರೈಲ್ವೆಯಲ್ಲಿ ಫಿಟ್ಟರ್, ವೆಲ್ಡರ್, ಎಲೆಕ್ಟ್ರಿಷಿಯನ್, ಕಾರ್ಪೆಂಟರ್, ಡೀಸೆಲ್ ಮೆಕ್ಯಾನಿಕ್, ಮೆಷಿನಿಸ್ಟ್ ಮತ್ತು ಪೇಂಟರ್ ಸೇರಿದಂತೆ ಖಾಲಿ ಇರುವ 1785 ಅಪ್ರೆಂಟಿಸ್ ಹುದ್ದೆಗಳನ್ನ ಭರ್ತಿ ಮಾಡಲಾಗುವುದು. ಇನ್ನು ಈ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳನ್ನ 10ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ನಿಯಮಗಳ ಪ್ರಕಾರ, ಸ್ಟೈಫಂಡ್ ಸಹ ಪಡೆಯುತ್ತಾರೆ.
ವಿದ್ಯಾರ್ಹತೆ ಮತ್ತು ವಯೋಮಿತಿ.?
ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಕನಿಷ್ಠ ವಯಸ್ಸು 15 ವರ್ಷವಾಗಿದ್ರೆ, ಗರಿಷ್ಠ ವಯಸ್ಸು 24 ವರ್ಷಗಳಾಗಿರಬೇಕು. ಆದಾಗ್ಯೂ, ಸರ್ಕಾರದ ನಿಯಮಗಳ ಪ್ರಕಾರ, ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನ 3 ವರ್ಷಗಳು ಮತ್ತು ಎಸ್ಸಿ / ಎಸ್ಟಿ ವರ್ಗದ ಅಭ್ಯರ್ಥಿಗಳಿಗೆ 5 ವರ್ಷಗಳವರೆಗೆ ಸಡಿಲಿಸಲಾಗುತ್ತದೆ. ಇದಲ್ಲದೇ, ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 50% ಅಂಕಗಳೊಂದಿಗೆ 10ನೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅಲ್ಲದೆ, ಸಂಬಂಧಿತ ವಿಭಾಗದಲ್ಲಿ ಐಟಿಐ ಪ್ರಮಾಣಪತ್ರ ಕಡ್ಡಾಯವಾಗಿದೆ.
ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ rrcser.co.in ಅಧಿಕೃತ ವೆಬ್ಸೈಟ್’ನಲ್ಲಿ ಜನವರಿ 3ರಿಂದ ಫೆಬ್ರವರಿ 2, 2023 ರವರೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ, 100 ರೂ.ಗಳ ಅರ್ಜಿ ಶುಲ್ಕವನ್ನ ಸಲ್ಲಿಸಬೇಕಾಗುತ್ತದೆ. ನಿಗದಿತ ಸಮಯದ ನಂತ್ರ ಅರ್ಜಿಯನ್ನ ಸ್ವೀಕರಿಸಲಾಗುವುದಿಲ್ಲ ಎಂಬುದನ್ನ ನೆನಪಿನಲ್ಲಿಡಿ.
ಇದನ್ನು ನೆನಪಿನಲ್ಲಿಡಿ.!
ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಒಮ್ಮೆ ಓದಲು ಸೂಚಿಸಲಾಗಿದೆ. ಅದ್ರಂತೆ, ರೈಲ್ವೆ ಅಪ್ರೆಂಟಿಸ್ ಅಧಿಸೂಚನೆ rrcser.co.in ಅಧಿಕೃತ ವೆಬ್ಸೈಟ್’ನಲ್ಲಿ ಲಭ್ಯವಿದೆ.
BIGG NEWS: ಕುಂದಾನಗರಿಯಲ್ಲಿ ಮತ್ತೆ ರಕ್ತಪಾತ; ಗುಟ್ಕಾ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
BIGG NEWS : ವಿಕಲಚೇತನರಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ಗೆ ಅರ್ಜಿ ಆಹ್ವಾನ