ನವದೆಹಲಿ: ಕೇಂದ್ರ ಸರ್ಕಾರದ ಸಚಿವ ಸಂಪುಟವು ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಗೆ ಅನುಮೋದನೆ ನೀಡಿದೆ. ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಈ ಮಾಹಿತಿಯನ್ನು ನೀಡಿದರು. ಇದೇ ವೇಳೆ ಅವರು ಕೇಂದ್ರ ಸಚಿವ ಸಂಪುಟವು ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಗೆ ಅನುಮೋದನೆ ನೀಡಿದೆ ಎಂದು ತಿಳಿಸಿದರು.
ಇದೇ ವೇಳೆ ಅವರು ಮಾತನಾಡುತ್ತ, ಭಾರತವು ಹಸಿರು ಜಲಜನಕದ ಜಾಗತಿಕ ಕೇಂದ್ರವಾಗಲಿದೆ. ಈ ಮಿಷನ್ ಅಡಿಯಲ್ಲಿ, 2030 ರ ವೇಳೆಗೆ ವಾರ್ಷಿಕವಾಗಿ 5 ಮಿಲಿಯನ್ ಟನ್ ಹಸಿರು ಹೈಡ್ರೋಜನ್ ಅನ್ನು ಉತ್ಪಾದಿಸಲಾಗುವುದು. ಖರೀದಿದಾರರು ಮತ್ತು ಮಾರಾಟಗಾರರನ್ನು ಒಂದೇ ಸೂರಿನಡಿ ತರಲು ಹಸಿರು ಹೈಡ್ರೋಜನ್ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುವುದು. ಗ್ರೀನ್ ಹೈಡ್ರೋಜನ್ ಮಿಷನ್ ಅಡಿಯಲ್ಲಿ 19,744 ಕೋಟಿ ರೂ ಆಗಿದೆ ಅಂತ ತಿಳಿಸಿದರು.
ಇನ್ನೂ ಹವಾಮಾನ ಬದಲಾವಣೆ ಕ್ಷೇತ್ರದಲ್ಲಿ ಭಾರತವು ವಿಶ್ವದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಠಾಕೂರ್ ಹೇಳಿದರು. 2021 ರಲ್ಲಿ ಗ್ಲ್ಯಾಸ್ಗೋದಲ್ಲಿ ಹೇಳಲಾದ ಭಾಷಣ ಮತ್ತು ಕೆಂಪು ಕೋಟೆಯಲ್ಲಿ ಘೋಷಿಸಲಾದ ಹಸಿರು ಹೈಡ್ರೋಜನ್ ಅಡಿಯಲ್ಲಿ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅನ್ನು ಇಂದು ಅನುಮೋದಿಸಲಾಗಿದೆ ಅಂತ ತಿಳಿಸಿದರು.ಇನ್ನೂ 2030ರ ವೇಳೆಗೆ 6 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಇದರಲ್ಲಿ ೮ ಲಕ್ಷ ಕೋಟಿ ಹೂಡಿಕೆ ಇರುತ್ತದೆ. ಆಗಸ್ಟ್ 15 ರಂದು ಕೆಂಪು ಕೋಟೆಯಿಂದ ಹವಾಮಾನ ಬದಲಾವಣೆಗಾಗಿ ಹಸಿರು ಹೈಡ್ರೋಜನ್ ಬಗ್ಗೆ ಪ್ರಧಾನಿ ಮೋದಿ ಚರ್ಚಿಸಿದರು ಮತ್ತು ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಅನ್ನು ಘೋಷಿಸಿದ್ದರು.
The Union Cabinet chaired by Hon. PM @narendramodi Ji approved The National Green Hydrogen Mission aimed to make India a global hub for production, utilisation and export of green hydrogen while significantly reducing India's dependence on fossil fuel imports. #CabinetDecisions pic.twitter.com/e50D5P6vh4
— Jagat Prakash Nadda (@JPNadda) January 4, 2023