ನವದೆಹಲಿ: ಆಜಾದಿ ಕಾ ಅಮೃತ್ ಮಹೋತ್ಸವ ಮತ್ತು “ಹರ್ ಘರ್ ತಿರಂಗಾ” ಅಭಿಯಾನದ ಅಡಿಯಲ್ಲಿ, ರಾಷ್ಟ್ರಧ್ವಜಗಳನ್ನು ದೇಶದ ಎಲ್ಲಾ ಅಂಚೆ ಕಚೇರಿ ಕೌಂಟರ್ ಗಳಲ್ಲಿ ಪ್ರತಿ ಧ್ವಜಕ್ಕೆ ರೂ.25/- ರಂತೆ ಮಾರಾಟಕ್ಕೆ ಲಭ್ಯವಾಗುವಂತೆ ಮಾಡಲಾಗಿದೆ. ಆನ್ ಲೈನ್ ಆರ್ಡರ್ ಗಳನ್ನು ಸಹ epostoffice@indiapost.gov.in ನಲ್ಲಿ ಮಾಡಬಹುದಾಗಿದೆ ದೇಶದ ನಾಗರಿಕರು ಧ್ವಜಗಳನ್ನು ಖರೀದಿಸಲು ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು.
2022 ರ ಸ್ವಾತಂತ್ರ್ಯ ದಿನಾಚರಣೆಗೆ ಮುಂಚಿತವಾಗಿ ಅಂಚೆ ಇಲಾಖೆಯ ಈ ನಿರ್ಧಾರವನ್ನು ಜನರ ಹೃದಯದಲ್ಲಿ ದೇಶಭಕ್ತಿಯ ಭಾವನೆಯನ್ನು ಮೂಡಿಸಲು ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ದಣಿವರಿಯದೆ ಶ್ರಮಿಸಿದವರ ಕೊಡುಗೆಯನ್ನು ನೆನಪಿಸುವ ಸಲುವಾಗಿ ತಮ್ಮ ಮನೆಗಳಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹಾರಿಸಲು ನಾಗರಿಕರನ್ನು ಉತ್ತೇಜಿಸಲಾಗುತ್ತಿದೆ.
ಹರ್ ಘರ್ ತಿರಂಗಾ ಅಡಿಯಲ್ಲಿ, 2022 ರ ಆಗಸ್ಟ್ 13 ರಿಂದ 15 ರ ಅವಧಿಯಲ್ಲಿ ಎಲ್ಲಾ ನಾಗರಿಕರನ್ನು ತಮ್ಮ ಮನೆಗಳಲ್ಲಿ ತಿರಂಗಾವನ್ನು ಹಾರಿಸಲು ಪ್ರೋತ್ಸಾಹಿಸಲು ಯೋಜಿಸಲಾಗಿದೆ. ಈ ಮಹತ್ವದ ಸಂದರ್ಭದ ಮಹತ್ವವನ್ನು ನಾಗರಿಕರಿಗೆ ಸಮಗ್ರ ಪ್ರಚಾರ ಅಭಿಯಾನದ ಮೂಲಕ ತಿಳಿಸಲು ದೇಶದ ಪ್ರತಿಯೊಂದು ಮೂಲೆಯಲ್ಲಿರುವ ತನ್ನ ವಿಶಾಲವಾದ ಭೌತಿಕ ವ್ಯಾಪ್ತಿ ಮತ್ತು ಮಾನವಶಕ್ತಿಯನ್ನು ಬಳಸಿಕೊಳ್ಳಲು ಅಂಚೆ ಇಲಾಖೆ ನಿರ್ಧರಿಸಿದೆ.