ಕೆಎನ್ಎನ್ಡಿಜಿಟಲ್ ಡೆಸ್ಕ್ : ಜುಲೈ ತಿಂಗಳು ಸುಮಾರು ಅರ್ಧ ಮುಗಿದಿದ್ದು, ಕೇಂದ್ರ ಸರ್ಕಾರಿ ನೌಕರರಿಗೆ ಮುಂದಿನ ಸುತ್ತಿನ ತುಟ್ಟಿಭತ್ಯೆ (DA) ಹೆಚ್ಚಿಸುವ ಸಾಧ್ಯತೆ ಹೆಚ್ಚುತ್ತಿದೆ. ಅದ್ರಂತೆ ಈ ಹಿಂದೆ, ಮುಂದಿನ ಸುತ್ತಿನ ಪರಿಷ್ಕರಣೆಯಲ್ಲಿ, ಕೇಂದ್ರ ನೌಕರರ ವೇತನವನ್ನ 40,000 ರೂ.ಗಳವರೆಗೆ ಹೆಚ್ಚಿಸಲಾಗುವುದು ಎಂದು ವರದಿಯಾಗಿತ್ತು.
ಎಐಸಿಪಿಐ ದತ್ತಾಂಶವು ತುಟ್ಟಿಭತ್ಯೆಯಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಹೆಚ್ಚಳದ ಊಹಾಪೋಹಗಳಿಗೆ ಮತ್ತಷ್ಟು ಕುಚ್ಚು ಹಚ್ಚಿದೆ. ಆರಂಭಿಕ ವರದಿಗಳು ಶೇಕಡಾ 4 ಅಥವಾ ಶೇಕಡಾ 5 ರಷ್ಟು ಹೆಚ್ಚಳವನ್ನು ಸೂಚಿಸಿದವು, ಇದು ಈಗ ಶೇಕಡಾ 6 ಕ್ಕೆ ತಲುಪುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಶೇಕಡಾ 6ರಷ್ಟು ಹೆಚ್ಚಳವು ಡಿಎ ಸಂಖ್ಯೆಯನ್ನ ಪ್ರಸ್ತುತ ಶೇಕಡಾ 34 ರಿಂದ ಶೇಕಡಾ 40ಕ್ಕೆ ಕೊಂಡೊಯ್ಯುತ್ತದೆ.
ಡಿಎ ಹೆಚ್ಚಳವನ್ನು ಯಾವಾಗ ಘೋಷಿಸಲಾಗುತ್ತದೆ?
ಮಾಧ್ಯಮ ವರದಿಗಳ ಪ್ರಕಾರ, ತುಟ್ಟಿಭತ್ಯೆ ಹೆಚ್ಚಳವನ್ನ ಜುಲೈ ಅಂತ್ಯದ ವೇಳೆಗೆ ಘೋಷಿಸಬಹುದು. ಕೆಲವು ವರದಿಗಳು ಈ ಹಿಂದೆ ಜುಲೈ 31ರ ದಿನಾಂಕವನ್ನು ಸಹ ಉಲ್ಲೇಖಿಸಿದ್ದವು, ಆಗಸ್ಟ್ ತಿಂಗಳಲ್ಲಿ, ಕೇಂದ್ರ ಸರ್ಕಾರಿ ನೌಕರರ ಬ್ಯಾಂಕ್ ಖಾತೆಗಳಿಗೆ ಹೆಚ್ಚಿನ ಹಣ ಸೇರಲಿದೆ. ಇತ್ತೀಚಿನ ವರದಿಯ ಪ್ರಕಾರ, ಡಿಎ ಹೆಚ್ಚಳವನ್ನ ಕ್ಯಾಬಿನೆಟ್ ಸಭೆಯ ನಂತ್ರ ಆಗಸ್ಟ್ 3ರಂದು ಘೋಷಿಸುವ ಸಾಧ್ಯತೆಯಿದೆ.
ಅದ್ರಂತೆ, ವರದಿಗಳ ಪ್ರಕಾರ, ಜೂನ್ ಸಂಖ್ಯೆಗಳು ಹೆಚ್ಚಳವನ್ನ ದಾಖಲಿಸದಿದ್ದರೂ, ಶೇಕಡಾ 6ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.
ಕೇಂದ್ರ ಉದ್ಯೋಗಿಗಳು ಎಷ್ಟು ಹೆಚ್ಚಳವನ್ನ ನಿರೀಕ್ಷಿಸುತ್ತಾರೆ?
ಉದ್ಯೋಗಿಯ ಮೂಲ ವೇತನವು 56,900 ರೂ.ಗಳಾಗಿದ್ದರೆ, ಶೇಕಡಾ 6ರಷ್ಟು ಹೆಚ್ಚಳದ ನಂತ್ರ ತಿಂಗಳಿಗೆ ಸುಮಾರು 3,414 ರೂ.ಗಳ ಹೆಚ್ಚಳವಿರುತ್ತದೆ. ಶೇ.34ರ ಅಂಕಿಅಂಶಗಳ ಪ್ರಕಾರ, ಪ್ರಸ್ತುತ ಸ್ವೀಕರಿಸಲಾಗುವ ಡಿಎ ತಿಂಗಳಿಗೆ 19,346 ರೂ.ಗಳಿಂದ 22,760 ರೂ. ವೇತನದಲ್ಲಿ ಒಟ್ಟು ವಾರ್ಷಿಕ 40,968 ರೂಪಾಯಿ ಹೆಚ್ಚಳವಾಗಲಿದೆ.
ಅದೇ ರೀತಿ, 18,000 ರೂ.ಗಳ ಮೂಲ ವೇತನಕ್ಕೆ ಡಿಎ ಹೆಚ್ಚಳವು ತಿಂಗಳಿಗೆ 1,080 ರೂ.ಗಳಾಗಿದ್ದು, ಡಿಎ ಮೊತ್ತವನ್ನ ತಿಂಗಳಿಗೆ ಈಗಿರುವ 6,120 ರೂ.ಗಳಿಂದ 7,200 ರೂ.ಗೆ ತರುತ್ತದೆ. ಶೇಕಡಾ 6ರಷ್ಟು ಡಿಎ ಹೆಚ್ಚಳವಾದರೆ, ಒಟ್ಟು ಹೆಚ್ಚಳವು ವರ್ಷಕ್ಕೆ 12,960 ರೂಪಾಯಿ ಆಗಲಿದೆ.
ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ
ಗರಿಷ್ಠ ಮೂಲ ವೇತನದ ಲೆಕ್ಕಾಚಾರ..!
* ಉದ್ಯೋಗಿಯ ಮೂಲ ವೇತನ 56,900 ರೂ
* ಹೊಸ ತುಟ್ಟಿಭತ್ಯೆ (40%) ರೂ 22,760/ತಿಂಗಳು
* ಇದುವರೆಗಿನ ತುಟ್ಟಿಭತ್ಯೆ (ಶೇ 34) ರೂ 19,346/ತಿಂಗಳು
* 22,760-19,346 = ರೂ 3,414/ತಿಂಗಳಿಗೆ ಎಷ್ಟು ತುಟ್ಟಿ ಭತ್ಯೆ ಹೆಚ್ಚಾಗಿದೆ
* ವಾರ್ಷಿಕ ವೇತನದಲ್ಲಿ ಹೆಚ್ಚಳ 3,414 X12 = 40,968 ರೂ
ಕನಿಷ್ಠ ಮೂಲ ವೇತನದ ಲೆಕ್ಕಾಚಾರ..!
* ಉದ್ಯೋಗಿಯ ಮೂಲ ವೇತನ 18,000 ರೂ
* ಹೊಸ ತುಟ್ಟಿಭತ್ಯೆ (40%) ರೂ 7,200/ತಿಂಗಳು
* ಇದುವರೆಗಿನ ತುಟ್ಟಿಭತ್ಯೆ (ಶೇಕಡಾ 34) ರೂ 6120/ತಿಂಗಳು
* ಎಷ್ಟು ತುಟ್ಟಿ ಭತ್ಯೆ ಹೆಚ್ಚಾಗಿದೆ 7200-6120 = ರೂ.1080/ತಿಂಗಳು
* ವಾರ್ಷಿಕ ವೇತನದಲ್ಲಿ ಹೆಚ್ಚಳ 1080 X12 = 12,960 ರೂ