ನವದೆಹಲಿ : ಇಂಡಿಯಾ ಪೋಸ್ಟ್ ಆಫೀಸ್ ದೊಡ್ಡ ಮೊತ್ತವನ್ನ ಗಳಿಸಲು ಉತ್ತಮ ಅವಕಾಶ ನೀಡುತ್ತಿದೆ. ಇದರಲ್ಲಿ 5,000 ರೂ.ಗಳನ್ನ ಹೂಡಿಕೆ ಮಾಡುವ ಮೂಲಕ ನೀವು ಉತ್ತಮವಾಗಿ ಗಳಿಸಬಹುದು. ಅಂಚೆ ಕಚೇರಿ ತನ್ನ ಫ್ರ್ಯಾಂಚೈಸ್ ಯೋಜನೆಯನ್ನ ಪ್ರಾರಂಭಿಸಿದ್ದು, ಇದನ್ನ ತೆಗೆದುಕೊಂಡರೆ, ಗ್ರಾಹಕರು ಇಲಾಖೆಗೆ ಸಂಬಂಧಿಸಿದ ಸೇವೆಗಳನ್ನ ಒದಗಿಸುವ ಮೂಲಕ ಪ್ರತಿ ತಿಂಗಳು ಹಣ ಗಳಿಸಬಹುದು. ಇದರ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಮುಂದೆ ಓದಿ.
ಭಾರತೀಯ ಅಂಚೆ ಇಲಾಖೆಯು ಜನರಿಗೆ ಎಲ್ಲಾ ರೀತಿಯ ಸೇವೆಗಳನ್ನ ಒದಗಿಸುತ್ತದೆ. ಪೋಸ್ಟ್ ಅಥವಾ ಪತ್ರಗಳನ್ನ ಕಳುಹಿಸುವುದು, ಮನಿ ಆರ್ಡರ್ ಕಳುಹಿಸುವುದು, ಸ್ಟಾಂಪ್’ಗಳು, ಸ್ಟೇಶನರಿಗಳನ್ನ ಕಳುಹಿಸುವುದು ಇತ್ಯಾದಿಗಳನ್ನ ಇದು ಒಳಗೊಂಡಿದೆ. ಇಷ್ಟೇ ಅಲ್ಲ, ಅಂಚೆ ಕಚೇರಿ ಹಲವಾರು ಸಣ್ಣ ಉಳಿತಾಯ ಯೋಜನೆಗಳನ್ನ ನಿರ್ವಹಿಸುತ್ತದೆ. ಸಣ್ಣ ಉಳಿತಾಯ ಖಾತೆ ತೆರೆಯುವುದು, ನಗದು ಠೇವಣಿ ಮಾಡುವುದು, ಜೀವನ ಪ್ರಮಾಣಪತ್ರವನ್ನ ತಯಾರಿಸುವುದು ಮುಂತಾದ ಅನೇಕ ಕೆಲಸಗಳನ್ನ ಅಂಚೆ ಕಚೇರಿಗಳಲ್ಲಿ ಮಾಡಲಾಗುತ್ತದೆ. ಆದಾಗ್ಯೂ, ದೇಶದ ಅನೇಕ ಭಾಗಗಳಲ್ಲಿನ ಜನರು ಇನ್ನೂ ಅಂಚೆ ಕಚೇರಿ ಸೌಲಭ್ಯಗಳನ್ನ ಪಡೆಯಲು ಸಾಧ್ಯವಾಗುತ್ತಿಲ್ಲ.
ಪ್ರಸ್ತುತ, ದೇಶದಲ್ಲಿ 1.55 ಲಕ್ಷ ಅಂಚೆ ಕಚೇರಿಗಳಿವೆ. ಈ ಹಿನ್ನೆಲೆಯಲ್ಲಿ, ಸರ್ಕಾರವು ಅಂಚೆ ಕಚೇರಿಗಳ ವ್ಯಾಪ್ತಿಯನ್ನ ಹೆಚ್ಚಿಸುವತ್ತ ಗಮನ ಹರಿಸುತ್ತಿದೆ. ನೀವು ಮನೆಯಲ್ಲಿ ಕುಳಿತು ಸರ್ಕಾರವನ್ನ ಸೇರುವ ಮೂಲಕ ವ್ಯವಹಾರವನ್ನ ಪ್ರಾರಂಭಿಸಬಹುದು. ಇಲಾಖೆಗೆ ಸಂಬಂಧಿಸಿದ ಕೆಲಸವನ್ನ ಮಾಡುವ ಮೂಲಕ ನೀವು ಹಣ ಗಳಿಸಬಹುದು. ಅಂಚೆ ಕಚೇರಿ ತನ್ನ ಫ್ರ್ಯಾಂಚೈಸ್ ಸ್ಕೀಮ್ ಸೌಲಭ್ಯವನ್ನ ಒದಗಿಸುತ್ತಿದೆ. ಇದರ ಅಡಿಯಲ್ಲಿ ಎರಡು ರೀತಿಯ ಫ್ರಾಂಚೈಸಿಗಳು ಲಭ್ಯವಿವೆ. ಇವುಗಳಲ್ಲಿ ಪೋಸ್ಟ್ ಫ್ರ್ಯಾಂಚೈಸ್ ಔಟ್ ಲೆಟ್’ಗಳು ಮತ್ತು ಪೋಸ್ಟಲ್ ಏಜೆಂಟರು ಸೇರಿದ್ದಾರೆ. ಅಂಚೆ ಕಚೇರಿಗಳಿಲ್ಲದ ಪ್ರದೇಶಗಳಲ್ಲಿ ನೀವು ಪೋಸ್ಟ್ ಫ್ರ್ಯಾಂಚೈಸ್ ಔಟ್ ಲೆಟ್ ಆಯ್ಕೆ ಮಾಡಬಹುದು. ಅಂಚೆ ಏಜೆಂಟರ ಫ್ರಾಂಚೈಸಿಗಳು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಂಚೆ ಚೀಟಿ ಮತ್ತು ಲೇಖನ ಸಾಮಗ್ರಿಗಳ ವಿತರಣೆಯನ್ನ ನಡೆಸುತ್ತವೆ.
ಕಡಿಮೆ ಹೂಡಿಕೆ, ಹೆಚ್ಚು ಲಾಭ.!
ಪೋಸ್ಟ್ ಆಫೀಸ್ ಔಟ್ ಲೆಟ್ ಫ್ರ್ಯಾಂಚೈಸ್ ತೆಗೆದುಕೊಳ್ಳಲು ನೀವು 8 ನೇ ತರಗತಿಯಲ್ಲಿ ಉತ್ತೀರ್ಣರಾದರೆ ಸಾಕು. ಇದಕ್ಕಾಗಿ ಸುಮಾರು 200 ಚದರ ಅಡಿ ಜಾಗವಿದ್ದು, 5,000 ರೂ.ಗಳ ಭದ್ರತಾ ಮೊತ್ತವನ್ನ ಠೇವಣಿ ಇಡಬೇಕು. ಪ್ರತಿ ಸೇವೆಗೆ ಶುಲ್ಕ ವಿಧಿಸುವ ಮೂಲಕ ಹಣವನ್ನ ಗಳಿಸಬಹುದು. ಇದಲ್ಲದೇ ನೀವು ಪೋಸ್ಟಲ್ ಏಜೆಂಟ್ ಫ್ರ್ಯಾಂಚೈಸ್’ಗಾಗಿ ಸ್ವಲ್ಪ ಹೆಚ್ಚು ಹೂಡಿಕೆ ಮಾಡಬೇಕಾಗುತ್ತದೆ. ಯಾಕಂದ್ರೆ, ನೀವು ಸ್ಟೇಷನರಿ ಮತ್ತು ಸ್ಟಾಂಪ್’ಗಳನ್ನ ಖರೀದಿಸಬೇಕು ಮತ್ತು ವಿತರಿಸಬೇಕು.
Alert : ಪಾಲಿಸಿದಾರರೇ ಎಚ್ಚರ ; ಮರೆತು ಕೂಡ ಈ ತಪ್ಪು ಮಾಡ್ಬೇಡಿ, ಇಲ್ಲದಿದ್ರೆ ನಿಮ್ಗೆ ನಷ್ಟ
Good News : ಪಿಂಚಣಿದಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ಮನೆ ಬಾಗಿಲಿಗೇ ಬರಲಿದೆ `ಡಿಜಿಟಲ್ ಇ-ಜೀವಂತ ಪ್ರಮಾಣ ಪತ್ರ’