ಬೆಂಗಳೂರು : ರಸ್ತೆ ಬದಿ ವ್ಯಾಪಾರಿಗಳಿಗೆ ಡಿಸಿಎಂ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಹಿಸುದ್ದಿ ನೀಡಿದ್ದು, ಇನ್ನು ಮುಂದೆ ಬಿಬಿಎಂಪಿಯಲ್ಲಿ ನೋಂದಣಿ ಮಾಡಿಕೊಂಡವರಿಗೆ ತಳ್ಳು ಗಾಡಿಯಲ್ಲಿ ಸಬ್ಸಿಡಿ ನೀಡಲಾಗುತ್ತದೆ ಎಂದು ತಿಳಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ಇನ್ನು ಮುಂದೆ ಯಾರೂ ರಸ್ತೆ ಬದಿ ವ್ಯಾಪಾರ ಮಾಡುವಂತಿಲ್ಲ, ಅವರು ಬಿಬಿಎಂಪಿಯಲ್ಲಿ ಹೆಸರನ್ನು ನೋಂದಾಯಿಸಿಕೊಂಡರೆ ತಳ್ಳುವ ಗಾಡಿಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗುವುದು, ಮೋಟಾರರ ವಾಹನಗಳು ಸೇರಿದಂತೆ 4-5 ಬಗೆಯ ವಾಹನಗಳನ್ನು ವ್ಯಾಪಾರಿಗಳಿಗೆ ನೀಡುವ ನಿರ್ಧಾರ ಮಾಡಲಾಗಿದೆ, ವ್ಯಾಪಾರಿಗಳು ತಮಗಿಷ್ಟ ಬರುವ ಗಾಡಿಯನ್ನು ಆರಿಸಿಕೊಳ್ಳಬಹುದು ಎಂದು ಹೇಳಿದರು.