ಬೆಳಗಾವಿ : ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆ ಹಣ ಮಹಿಳೆಯರ ಖಾತೆಗೆ ವರ್ಗಾವಣೆ ಅಥವಾ ಮಹಿಳೆಯರ ಖಾತೆಗೆ ಜಮೆ ಆಗುವುದು ವಿಳಂಬವಾಗುತ್ತಲ್ಲೇ ಇದ್ದು. ಇದೀಗ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಮುಂದಿನ 8 ದಿನಗಳಲ್ಲಿ ಯಜಮಾನಿಯರ ಖಾತೆಗೆ ಜಮೆ ಆಗಲಿದೆ ಎಂದು ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದರು.
ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಸ್ತೆ ಅಪಘಾತದಿಂದ ನಾನು ವಿಶ್ರಂತಿ ಪಡೆಯುತ್ತಿದ್ದೆ. ವಿಶ್ರಾಂತಿಯಲ್ಲಿದ್ದ ಕಾರಣಕ್ಕೆ ಹಣ ವಿಳಂಬವಾಗಿದೆ. ಇನ್ನೊಂದು 8 ದಿನಗಳಲ್ಲಿ ಹಣ ಮಹಿಳೆಯರ ಖಾತೆಗೆ ಜಮೆಯಾಗಲಿದೆ ಎಂದು ಹೇಳಿದ್ದಾರೆ. ಕೆಲವು ತಾಂತ್ರಿಕ ದೋಷಗಳಿಂದ ಮಹಿಳೆಯರ ಖಾತೆಗೆ ಕಳೆದ ಮೂರು ತಿಂಗಳಿಂದ ಹಣ ಜಮೆಯಾಗಿಲ್ಲ. ಆದರೆ ಮುಂದಿನ 8 ದಿನಗಳಲ್ಲಿ ಗೃಹಲಕ್ಷ್ಮಿ ಹಣ ಜಮೆ ಆಗುತ್ತದೆ ಎಂದು ಸ್ಪಷ್ಟನೆ ನೀಡಿದರು.
ಹೊಸ ಮಾದರಿಯಲ್ಲಿ ಗೃಹ ಲಕ್ಷ್ಮಿಯ ಹಣ ಜಮಾ ಆಗುತ್ತಿದೆ. ಬೆಂಗಳೂರು ಸುತ್ತಮುತ್ತಲಿನ ೫ ತಾಲ್ಲೂಕು ಪಂಚಾಯಿತಿಗಳಿಗೆ ಹಣ ನೀಡಿದ್ದೇವೆ. ಅಲ್ಲಿಂದ ಸಿಡಿಪಿಒ ಮೂಲಕ ಹಣ ಬಿಡುಗಡೆ ಮಾಡಲಾಯಿತು. ಸರಿಯಾಗಿ ಒಂದು ವಾರ ೧೦ ದಿನದೊಳಗೆ ಗೃಹ ಲಕ್ಷ್ಮಿಯ ಹಣ ಬಿಡುಗಡೆ ಮಾಡಲಾಗುವುದು ಎಂದರು.