Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೌರಿಂಗ್ ಆಸ್ಪತ್ರೆ ಕಂಪೌಂಡ್ ಕುಸಿದು 7 ಜನ ಸಾವು ಕೇಸ್ : ಸ್ಥಳಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್ ಪಾಟೀಲ್ ಭೇಟಿ

30/04/2026 1:31 PM

JOB ALERT : `SSLC-ITI’ ಪಾಸಾದವರಿಗೆ ಗುಡ್ ನ್ಯೂಸ್ : 9195 `ಕಾನ್ಸ್ ಟೇಬಲ್’ ಹುದ್ದೆಗಳಿಗೆ ಅರ್ಜಿ ಆಹ್ವಾನ

30/04/2026 1:24 PM

ನೆರೆಹೊರೆಯವರ ಕಣ್ಣುಗಳು ನಿಮ್ಮ ಕುಟುಂಬದ ಮೇಲೆ ಬೀಳದಂತೆ ಇದನ್ನು ಒಟ್ಟಿಗೆ ಇರಿಸಿ!

30/04/2026 1:15 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS: `ಶಿಕ್ಷಕ ಹುದ್ದೆ’ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಪ್ರಾಥಮಿಕ ಶಾಲೆಗಳಲ್ಲಿ 40,000 `ಅತಿಥಿ ಶಿಕ್ಷಕ’ರ ನೇಮಕಾತಿಗೆ ರಾಜ್ಯ ಸರ್ಕಾರ ಆದೇಶ.!
KARNATAKA

GOOD NEWS: `ಶಿಕ್ಷಕ ಹುದ್ದೆ’ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಪ್ರಾಥಮಿಕ ಶಾಲೆಗಳಲ್ಲಿ 40,000 `ಅತಿಥಿ ಶಿಕ್ಷಕ’ರ ನೇಮಕಾತಿಗೆ ರಾಜ್ಯ ಸರ್ಕಾರ ಆದೇಶ.!

By kannadanewsnow5729/05/2025 5:15 AM

ಬೆಂಗಳೂರು : ರಾಜ್ಯ ಸರ್ಕಾರು ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿಯೊಂದು ನೀಡಿದ್ದು, 2025-26 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಎದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ತಾತ್ಕಾಲಿಕವಾಗಿ 40 ಸಾವಿರ ಅತಿಥಿ ಶಿಕ್ಷಕರುಗಳನ್ನು ನೇಮಕ ಮಾಡಿಕೊಳ್ಳಲು ಆದೇಶ ಹೊರಡಿಸಿದೆ.

ಮೇಲ್ಮಂಡ ವಿಷಯಕ್ಕೆ ಸಂಬಂಧಿಸಿದಂತೆ, 2025-26 ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಎದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಖಾಯಂ ಶಿಕ್ಷಕರ ನೇಮಕವಾಗುವವರೆಗೆ ಅಥವಾ ಶೈಕ್ಷಣಿಕ ವರ್ಷದ ಅಂತ್ಯದವರೆಗೆ (ಮಾರ್ಚ್-2026) ವರೆಗೆ ಯಾವುದು ಮೊದಲೂ ಅಲ್ಲಿಯವರೆಗೆ ಶಿಕ್ಷಕರ ಕೊರತೆಯನ್ನು ನೀಗಿಸುವ ದೃಷ್ಟಿಯಿಂದ) ಒಟ್ಟು-40000. ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ಉಲ್ಲೇಖ-03ರ ಸರ್ಕಾರದ ಪತ್ರದಲ್ಲಿ ಅನುಮತಿ ನೀಡಲಾಗಿದೆ.

ಉಲ್ಲೇಖ-03 ರಲ್ಲಿ ಒಟ್ಟು-40000. ಹುದ್ದೆಗಳಿಗೆ ಅಥಿತಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಸಹಮತಿಸಿದ್ದು, ಪ್ರಸ್ತುತ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ (ಪಿ.ಎಸ್.ಟಿ ಮತ್ತು ಜಿ.ಪಿ.ಟಿ) ವೃಂದದ ಒಟ್ಟು 38867 ಹುದ್ದೆಗಳಿಗೆ ಎದುರಾಗಿ ಪ್ರಥಮ ಹಂತದಲ್ಲಿ ಸದರಿ 34027 ಖಾಲಿ ಹುದ್ದೆಗಳಿಗೆ ಜಿಲ್ಲಾವಾರು/ತಾಲ್ಲೂಕುವಾರು ಅತಿಥಿ ಶಿಕ್ಷಕರನ್ನು ಉಲ್ಲೇಖ-01 & 03 ರ ಪತ್ರದಲ್ಲಿ ವಿಧಿಸಿರುವ ಷರತ್ತುಗಳಿಗೊಳಪಟ್ಟು ನೇಮಕ ಮಾಡಿಕೊಳ್ಳಲು ಅನುಮತಿ ನೀಡಿದೆ.

ಅದರಂತೆ, ಕೆಳಕಂಡ ಷರತ್ತಿಗೊಳಪಟ್ಟು ತಾತ್ಕಾಲಿಕವಾಗಿ ನಿಯಮಾನುಸಾರ ನೇಮಕಾತಿ ಮಾಡಿಕೊಳ್ಳಲು ಸೂಚಿಸಿ ತಾಲ್ಲೂಕುವಾರು & ಜಿಲ್ಲಾವಾರು ಹಂಚಿಕೆ ಮಾಡಿದ ಅತಿಥಿ ಶಿಕ್ಷಕರ ವಿವರಗಳನ್ನು ಅನುಬಂಧದಲ್ಲಿ ಅಡಕಗೊಳಿಸಿದೆ.

ಷರತ್ತುಗಳು:-

ಮಂಜೂರಾದ ಖಾಲಿ ಇರುವ ಹುದ್ದೆಗಳಿಗೆದುರಾಗಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವುದು.

ಪ್ರಾಥಮಿಕ ಶಾಲೆಗಳಿಗೆ ಸಂಬಂಧಿಸಿದಂತೆ ಅತಿಥಿ ಶಿಕ್ಷಕರ ಆಯ್ಕೆ ಜವಾಬ್ದಾರಿ ಸಂಬಂಧಪಟ್ಟ ಸರ್ಕಾರಿ ಶಾಲಾ ಮುಖ್ಯ ಶಿಕ್ಷಕರುಗಳ ಮೂಲಕವೇ ಮಾಡುವುದು.

ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರನ್ನು ಪ್ರಮುಖವಾಗಿ ಆದ್ಯತೆ ಮೇರೆಗೆ ಗ್ರಾಮೀಣ ಪ್ರದೇಶಗಳಲ್ಲಿನ ಖಾಲಿ ಹುದ್ದೆಗಳಿಗೆ ಹಾಗೂ ಶಿಕ್ಷಕ ರಹಿತ ಶಾಲೆಗಳಿಗೆ/ಹೆಚ್ಚು ವಿದ್ಯಾರ್ಥಿಗಳಿರುವ ಖಾಲಿ ಹುದ್ದೆಗಳಿಗೆ ಮೊದಲ ಆದ್ಯತೆ ನೀಡುವುದು.

ರಾಜ್ಯದಲ್ಲಿ ಶಾಲಾ ಶಿಕ್ಷಣ ಇಲಾಖೆಯಡಿ ವಿಶೇಷವಾಗಿ ಪ್ರಾರಂಭಿಸಿರುವ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಗಳು/ಬೆಂಗಳೂರು ಪಬ್ಲಿಕ ಶಾಲೆಗಳು/ ದ್ವಿಭಾಷಾ (Bilingual) (ಆಂಗ್ಲಭಾಷಾ) ಮಾಧ್ಯಮದ ತರಗತಿಗಳಿರುವ ಶಾಲೆಗಳು ಹಾಗೂ ಆದರ್ಶ ವಿದ್ಯಾಲಯಗಳಲ್ಲಿ ಶೇಕಡ 100 ರಷ್ಟು ಅತಿಥಿ ಶಿಕ್ಷಕರನ್ನು ಆದ್ಯತೆ ಮೇರೆಗೆ ನೇಮಕಾತಿ ಮಾಡುವುದು.

ಅತಿಥಿ ಶಿಕ್ಷಕರನ್ನು ಆಯಾ ಹುದ್ದೆಗೆ ನಿಗದಿಪಡಿಸಿರುವ ಕನಿಷ್ಠ ವಿದ್ಯಾರ್ಹತೆಯನ್ನು ಪರಿಗಣಿಸಿ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡತಕ್ಕದ್ದು.

ಅತಿಥಿ ಶಿಕ್ಷಕರ ಹಾಜರಾತಿ ವಹಿಯನ್ನು ಪ್ರತ್ಯೇಕವಾಗಿ ನಿರ್ವಹಣೆ ಮಾಡುವುದು.

ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರ ಗೌರವ ಸಂಭಾವನೆ ದರ ಮಾಹೆಯಾನ ರೂ 12000/- ಆಗಿರುತ್ತದೆ.

ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡ ಹುದ್ದೆಗಳಿಗೆ ವರ್ಗಾವಣೆ/ ನೇಮಕಾತಿ ಮುಖಾಂತರ ಖಾಯಂ ಶಿಕ್ಷಕರು ಸ್ಥಳನಿಯುಕ್ತಿಗೊಂಡಲ್ಲಿ ಸದರಿ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅತಿಥಿ ಶಿಕ್ಷಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ, ತದನಂತರ ತಾಲ್ಲೂಕಿನಲ್ಲಿ ಅಗತ್ಯಾನುಸಾರ ವರ್ಗಾವಣೆಯಿಂದ ಅಥವಾ ಇತರೆ ಕಾರಣಗಳಿಂದ ತೆರವಾದ ಖಾಲಿ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು/ಹುದ್ದೆಯನ್ನು ಸ್ಥಳೀಯವಾಗಿ ಹಂಚಿಕೆ ಮಾಡಿ ಕ್ರಮವಹಿಸುವುದು.

ಪ್ರಸ್ತುತ ವರ್ಗಾವಣೆ ತಂತ್ರಾಂಶದಲ್ಲಿದ್ದಂತೆ ಖಾಲಿಹುದ್ದೆಗಳನ್ನಾಧರಿಸಿ ತಾಲ್ಲೂಕುವಾರು ಅತಿಥಿ ಶಿಕ್ಷಕರ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದ್ದು ಸದರಿ ಅತಿಥಿ ಶಿಕ್ಷಕರ ಹುದ್ದೆಗಳನ್ನು ತಾಲ್ಲೂಕು ಪಂಚಾಯಿತಿವಾರು ಮರುಹಂಚಿಕೆ ಮಾಡಿ ಅನುದಾನದ ವಿರವ ಈ ಕಛೇರಿಗೆ ಸಲ್ಲಿಸಿದ ನಂತರ ತಾಲ್ಲೂಕಿನಿಂದ ತಾಲ್ಲೂಕಿಗೆ (ಜಿಲ್ಲೆಯ ಒಳಗೆ) ಅತಿಥಿ ಶಿಕ್ಷಕರ ಮರುಹಂಚಿಕೆ ಮಾಡುವಂತಿಲ್ಲ.

ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವಾಗ ತೀವ ನಿಗಾವಹಿಸಿ ಉತ್ತಮ ಗುಣ ಮತ್ತು ನಡತೆ ಹೊಂದಿರುವ ಅಭ್ಯರ್ಥಿಗಳನ್ನು ಮಾತ್ರ ನೇಮಕಾತಿ ಮಾಡಿಕೊಳ್ಳುವುದು.

ಮೇಲ್ಕಂಡ ಎಲ್ಲಾ ಷರತ್ತುಗಳನ್ನು ಪಾರದರ್ಶಕವಾಗಿ ಚಾಚು ತಪ್ಪದೇ ಪಾಲಿಸಲು ಸಂಬಂಧಪಟ್ಟ ಮುಖ್ಯ ಶಿಕ್ಷಕರುಗಳಿಗೆ ಕಡ್ಡಾಯವಾಗಿ ಸೂಕ್ತ ಸೂಚನೆಗಳನ್ನು ಜಿಲ್ಲಾ ಉಪನಿರ್ದೇಶಕರು/ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡುವುದು. ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಯಾವುದೇ ಲೋಪದೋಷಗಳಾದಲ್ಲಿ ಸಂಬಂಧಪಟ್ಟ ತಾಲ್ಲೂಕು/ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿಸಿ ಶಿಸ್ತು ಕ್ರಮಕ್ಕೆ ಒಳಪಡಿಸಲಾಗುವುದು.

ಈ ಕೂಡಲೇ ನೇಮಕ ಮಾಡಿಕೊಳ್ಳಲು ಸಹಾಯವಾಗುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಅಗತ್ಯತೆ/ಅವಶ್ಯಕತೆ ಇರುವ ಶಾಲೆಗಳ ಖಾಲಿ ಹುದ್ದೆಗಳಿಗೆ ನಿಯಮಾನುಸಾರ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ತಾಲ್ಲೂಕು ಹಂತದಲ್ಲಿ ಶಾಲಾವಾರು ಹುದ್ದೆ ಹಂಚಿಕೆ ಆದೇಶವನ್ನು ಕಡ್ಡಾಯವಾಗಿ ದಿನಾಂಕ 28.05.2025 ರಂದೇ ಹೊರಡಿಸುವುದು.

ನೇಮಕಗೊಂಡ ತಾಲ್ಲೂಕು ಅತಿಥಿ ಶಿಕ್ಷಕರ ವಿವರಗಳನ್ನು ಕೆಳಕಂಡ ನಿಗದಿತ ನಮೂನೆಯಲ್ಲಿ ಜಿಲ್ಲಾವಾರು ಕ್ರೂಢೀಕರಿಸಿ ಈ ಕಛೇರಿಗೆ ಜಿಲ್ಲಾ ಉಪನಿರ್ದೇಶಕರು ವಿಳಂಬಕ್ಕೆ ಅವಕಾಶ ನೀಡದೇ ದಿನಾಂಕ: 28-05-2025 ರೊಳಗೆ ಅಧಿತಿ ಶಿಕ್ಷಕರನ್ನು ನೇಮಕ ಮಾಡಿಕೊಂಡ ವಿವರವನ್ನು ತಾಲ್ಲೂಕು ಪಂಚಾಯಿತಿವಾರು ಹುದ್ದೆಗಳ ವಿವರವನ್ನು ಕೆಳಗಿನ ನಮೂನೆಯಲ್ಲಿ ಕ್ರೋಡೀಕರಿಸಿ ದೃಡೀಕೃತ (ಪಿ.ಡಿ.ಎಫ್ ಮಾದರಿಯಲ್ಲಿ) ಸಾವ್ ಪ್ರತಿಯನ್ನು ಈ ಕಛೇರಿ ಇ-ಮೇಲ್ ವಿಳಾಸ. primarydpi@gmail.com ಮುಖಾಂತರ ಸಲ್ಲಿಸುವುದು. ತಪ್ಪಿದಲ್ಲಿ ಸೂಕ್ತ ಶಿಸ್ತ್ರಕ್ರಮ ಜರುಗಿಸಲಾಗುವುದು.

GOOD NEWS: Great news for `teacher post' aspirants: Government orders appointment of 40000 `guest teachers' in primary schools!
Share. Facebook Twitter LinkedIn WhatsApp Email

Related Posts

ಬೌರಿಂಗ್ ಆಸ್ಪತ್ರೆ ಕಂಪೌಂಡ್ ಕುಸಿದು 7 ಜನ ಸಾವು ಕೇಸ್ : ಸ್ಥಳಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್ ಪಾಟೀಲ್ ಭೇಟಿ

30/04/2026 1:31 PM1 Min Read

ನೆರೆಹೊರೆಯವರ ಕಣ್ಣುಗಳು ನಿಮ್ಮ ಕುಟುಂಬದ ಮೇಲೆ ಬೀಳದಂತೆ ಇದನ್ನು ಒಟ್ಟಿಗೆ ಇರಿಸಿ!

30/04/2026 1:15 PM2 Mins Read

BREAKING : ಬೌರಿಂಗ್ ಆಸ್ಪತ್ರೆ ಕಂಪೌಂಡ್ ಕುಸಿದು 7 ಜನ ಸಾವು ಕೇಸ್ : ಶಾಲಿನಿ ರಜನೀಶ್‌, ಮಹೇಶ್ವರ ರಾವ್‌ ವಿರುದ್ಧ ಕೇಸ್‌?!

30/04/2026 1:13 PM1 Min Read
Recent News

ಬೌರಿಂಗ್ ಆಸ್ಪತ್ರೆ ಕಂಪೌಂಡ್ ಕುಸಿದು 7 ಜನ ಸಾವು ಕೇಸ್ : ಸ್ಥಳಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್ ಪಾಟೀಲ್ ಭೇಟಿ

30/04/2026 1:31 PM

JOB ALERT : `SSLC-ITI’ ಪಾಸಾದವರಿಗೆ ಗುಡ್ ನ್ಯೂಸ್ : 9195 `ಕಾನ್ಸ್ ಟೇಬಲ್’ ಹುದ್ದೆಗಳಿಗೆ ಅರ್ಜಿ ಆಹ್ವಾನ

30/04/2026 1:24 PM

ನೆರೆಹೊರೆಯವರ ಕಣ್ಣುಗಳು ನಿಮ್ಮ ಕುಟುಂಬದ ಮೇಲೆ ಬೀಳದಂತೆ ಇದನ್ನು ಒಟ್ಟಿಗೆ ಇರಿಸಿ!

30/04/2026 1:15 PM

BREAKING : ಬೌರಿಂಗ್ ಆಸ್ಪತ್ರೆ ಕಂಪೌಂಡ್ ಕುಸಿದು 7 ಜನ ಸಾವು ಕೇಸ್ : ಶಾಲಿನಿ ರಜನೀಶ್‌, ಮಹೇಶ್ವರ ರಾವ್‌ ವಿರುದ್ಧ ಕೇಸ್‌?!

30/04/2026 1:13 PM
State News
KARNATAKA

ಬೌರಿಂಗ್ ಆಸ್ಪತ್ರೆ ಕಂಪೌಂಡ್ ಕುಸಿದು 7 ಜನ ಸಾವು ಕೇಸ್ : ಸ್ಥಳಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್ ಪಾಟೀಲ್ ಭೇಟಿ

By kannadanewsnow0530/04/2026 1:31 PM KARNATAKA 1 Min Read

ಬೆಂಗಳೂರು : ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ಆವರಣ ಗೋಡೆ ಕುಸಿದು ಏಳು ಮಂದಿ ಕಾರ್ಮಿಕರು ಮೃತಪಟ್ಟ ದುರದೃಷ್ಟಕರ ಘಟನೆಗೆ ಸಂಬಂಧಿಸಿದಂತೆ,…

ನೆರೆಹೊರೆಯವರ ಕಣ್ಣುಗಳು ನಿಮ್ಮ ಕುಟುಂಬದ ಮೇಲೆ ಬೀಳದಂತೆ ಇದನ್ನು ಒಟ್ಟಿಗೆ ಇರಿಸಿ!

30/04/2026 1:15 PM

BREAKING : ಬೌರಿಂಗ್ ಆಸ್ಪತ್ರೆ ಕಂಪೌಂಡ್ ಕುಸಿದು 7 ಜನ ಸಾವು ಕೇಸ್ : ಶಾಲಿನಿ ರಜನೀಶ್‌, ಮಹೇಶ್ವರ ರಾವ್‌ ವಿರುದ್ಧ ಕೇಸ್‌?!

30/04/2026 1:13 PM

ನಾಳೆ ಶಿಕ್ಷಕರ ಸಂಘದ ಚುನಾವಣೆ: ಸಾಗರದಲ್ಲಿ ‘ಸ್ವಾಭಿಮಾನಿ ತಂಡ’ದಿಂದ ಭರ್ಜರಿ ಪ್ರಚಾರ, ಮತ ನೀಡಲು ಮನವಿ

30/04/2026 1:04 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.