ಕೆಎನ್ಎನ್ಡಿಜಿಟಲ್ ಡೆಸ್ಕ್ : ದೇಶದಲ್ಲಿ ಕಾರ್ಮಿಕ ಸುಧಾರಣೆಗಾಗಿ ಕೇಂದ್ರ ಸರ್ಕಾರ ಶೀಘ್ರದಲ್ಲೇ ಹೊಸ ಕಾರ್ಮಿಕ ಸಂಹಿತೆಯನ್ನ ತರಬಹುದು. 4 ಹೊಸ ಕಾರ್ಮಿಕ ಸಂಹಿತೆಗಳನ್ನ ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಹಲವು ಮಾಧ್ಯಮ ವರದಿಗಳು ಹೇಳಿವೆ. ಹೊಸ ಕಾರ್ಮಿಕ ಸಂಹಿತೆ ಜಾರಿಯಾದ ನಂತ್ರ ನೌಕರರ ರಜೆ, ವೇತನ, ಗ್ರಾಚ್ಯುಟಿ ಮತ್ತು ಭವಿಷ್ಯ ನಿಧಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಈ ಹೊಸ ಕಾರ್ಮಿಕ ಸಂಹಿತೆ ಜಾರಿಯಾದ ನಂತ್ರ ಗ್ರಾಚ್ಯುಟಿ ನಿಯಮಗಳಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಇದರ ನಂತ್ರ ಗ್ರಾಚ್ಯುಟಿಯ ಪ್ರಯೋಜನವನ್ನ ಪಡೆಯಲು ನೌಕರರು ಸತತ 5 ವರ್ಷಗಳ ಕಾಲ ಕೆಲಸ ಮಾಡುವ ಅಗತ್ಯವಿಲ್ಲ. ಸರ್ಕಾರವು ಈ ನಿಯಮಗಳನ್ನ ಇನ್ನೂ ಪ್ರಕಟಿಸಿಲ್ಲ. ಆದ್ರೆ, ಹೊಸ ಕಾರ್ಮಿಕ ಕಾನೂನು ಪರಿಚಯಿಸಿದ ನಂತ್ರ ಈ ಗ್ರಾಚ್ಯುಟಿಯ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನ ಮಾಡಲಾಗುವುದು.
ಗ್ರಾಚ್ಯುಟಿ ಎಂದರೇನು?
ಪ್ರಸ್ತುತ ಯುಗದಲ್ಲಿ ಒಬ್ಬ ವ್ಯಕ್ತಿಯು ಕನಿಷ್ಠ 5 ವರ್ಷಗಳ ಕಾಲ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ಅವನು ಗ್ರಾಚ್ಯುಟಿ ಪಡೆಯುತ್ತಾನೆ. ಗ್ರಾಚ್ಯುಟಿ ಲೆಕ್ಕಾಚಾರವನ್ನ ನಿರ್ದಿಷ್ಟ ಸೂತ್ರದ ಮೇಲೆ ಮಾಡಲಾಗುತ್ತದೆ. ಗ್ರಾಚ್ಯುಟಿಯ ಸ್ವಲ್ಪ ಭಾಗವನ್ನ ಉದ್ಯೋಗಿಯ ಸಂಬಳದಿಂದ ಮತ್ತು ಹೆಚ್ಚಿನ ಭಾಗವನ್ನ ಕಂಪನಿಯಿಂದ ನೀಡಲಾಗುತ್ತದೆ. ಪ್ರಸ್ತುತ, ಉದ್ಯೋಗಿ ಕಂಪನಿಯಲ್ಲಿ 5 ವರ್ಷಗಳನ್ನ ಪೂರ್ಣಗೊಳಿಸದಿದ್ರೆ, ಅವರು ಗ್ರಾಚ್ಯುಟಿ ಹಣವನ್ನ ಪಡೆಯುವುದಿಲ್ಲ. ಆದ್ರೆ, ಹೊಸ ಕಾರ್ಮಿಕ ಸಂಹಿತೆ ಜಾರಿಗೆ ಬಂದರೆ ಈ ನಿಯಮವು ಬದಲಾಗುತ್ತದೆ.
ಗ್ರಾಚ್ಯುಟಿಯ ಲೆಕ್ಕಾಚಾರ..!
ಗ್ರಾಚ್ಯುಟಿ ಮೊತ್ತ = ಕೊನೆಯ ಸಂಬಳ × (15/26) × ಕಂಪನಿಯಲ್ಲಿ ಎಷ್ಟು ಕೆಲಸ ಮಾಡಿದೆ
ಉದಾಹರಣೆಗೆ, ಒಬ್ಬ ಉದ್ಯೋಗಿ 20 ವರ್ಷಗಳ ಕಾಲ ಕೆಲಸ ಮಾಡಿದ್ದರೆ ಮತ್ತು ಕೆಲಸವನ್ನು ತೊರೆಯುವ ಸಮಯದಲ್ಲಿ ನಿಮ್ಮ ಸಂಬಳ 75,000 ಸಾವಿರ ರೂಪಾಯಿಗಳಾಗಿದ್ದರೆ, ಈಗ ತಿಂಗಳಿಗೆ 26 ದಿನಗಳನ್ನು ಮಾತ್ರ ಎಣಿಸಲಾಗುತ್ತದೆ. ಯಾಕಂದ್ರೆ, ತಿಂಗಳಿಗೆ ಕನಿಷ್ಠ ನಾಲ್ಕು ದಿನಗಳ ರಜೆ ಇದೆ. ಈ ಸಂದರ್ಭದಲ್ಲಿ, ಒಟ್ಟು ಗ್ರಾಚ್ಯುಟಿ ಮೊತ್ತವು 8,65,385 ರೂಪಾಯಿ ಆಗಲಿದೆ.
ಒಂದು ವರ್ಷದ ಉದ್ಯೋಗಕ್ಕಾದರೂ ಗ್ರಾಚ್ಯುಟಿ ದೊರೆಯುತ್ತದೆಯೇ?
ಈಗ ಒಂದು ವರ್ಷ ಕೆಲಸ ಮಾಡಿದ ನಂತರವೂ ನೌಕರರಿಗೆ ಗ್ರಾಚ್ಯುಟಿ ಸಿಗುತ್ತದೆ ಎಂದು ಲೋಕಸಭೆಯಲ್ಲಿ ಕರಡು ಪ್ರತಿಯಲ್ಲಿ ಹೇಳಲಾಗಿದೆ ಎಂದು ಹಲವು ಮಾಧ್ಯಮ ವರದಿಗಳು ಹೇಳಿವೆ. ಈ ಹೊಸ ನಿಯಮವನ್ನ ನಿಗದಿತ ಅವಧಿಯ ಉದ್ಯೋಗಿಗಳಿಗೆ ಅನ್ವಯಿಸಬಹುದು. ನಿಯಮಗಳ ಬದಲಾವಣೆಯ ನಂತರ, ನೌಕರರು ಸತತ ಒಂದು ವರ್ಷ ಕಂಪನಿಯಲ್ಲಿ ಕೆಲಸ ಮಾಡಿದರೆ ಗ್ರಾಚ್ಯುಟಿಯ ಪ್ರಯೋಜನವನ್ನ ಪಡೆಯುತ್ತಾರೆ. ಕಂಪನಿಯು ನಿಗದಿತ ಅವಧಿಯ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆಯ ಪ್ರಯೋಜನವನ್ನ ನೀಡುತ್ತದೆ. ಪ್ರಸ್ತುತ, ಗ್ರಾಚ್ಯುಟಿಯ ಗರಿಷ್ಠ ಮಿತಿ 20 ಲಕ್ಷ ರೂಪಾಯಿ ಆಗಿದೆ.