ಮಹಿಳೆಯರೇ, ರಾಜ್ಯ ಸರ್ಕಾರ ಉಚಿತ ‘ಹೊಲಿಗೆ ಯಂತ್ರ’ ನೀಡುವ ಯೋಜನೆಗೆ ಅರ್ಜಿ ಪ್ರಕ್ರಿಯೆ ಆರಂಭ, ನೀವೂ ಸಲ್ಲಿಸಿಬೆಂಗಳೂರು : ಬಡ ಮಹಿಳೆಯರನ್ನ ಬೆಂಬಲಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಉಚಿತ ಹೊಲಿಗೆ ಯಂತ್ರ ಯೋಜನೆಯನ್ನ ಆರಂಭಿಸಿದೆ. ಟೈಲರಿಂಗ್’ನಲ್ಲಿ ಪ್ರತಿಭೆಯನ್ನ ಹೊಂದಿರುವ ಅನೇಕ ಮಹಿಳೆಯರಿಗೆ ಯಂತ್ರಗಳನ್ನ ಖರೀದಿಸಲು ಸಾಧ್ಯವಾಗೋಲ್ಲ. ಹೀಗಾಗಿ, ಸರ್ಕಾರವು ಉಚಿತ ಹೋಲಿಗೆ ಯಂತ್ರಗಳನ್ನ ವಿತರಿಸುವ ಮೂಲಕ ಬಡ ಮಹಿಳೆಯರಿಗೆ ಸಹಾಯದ ಉದ್ದೇಶ ಹೊಂದಿದೆ. ಅದ್ರಂತೆ, ನೀವು ಕೂಡ ಕರ್ನಾಟಕ ಸರ್ಕಾರ ನೀಡುವ ಉಚಿತ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಉಚಿತ ಹೊಲಿಗೆ ಯಂತ್ರದ ಪಡೆಯಲು ಬೇಕಾದ ಅರ್ಹತೆಗಳು.!
* ಈ ಯೋಜನೆಯೂ ಮಹಿಳೆಯರಿಗೆ ಮಾತ್ರವಾಗಿದೆ.
* ಅಭ್ಯರ್ಥಿಯು ಕರ್ನಾಟಕದ ಖಾಯಂ ಪ್ರಜೆಯಾಗಿರಬೇಕು.
* ಅರ್ಹತಾ ಮಾನದಂಡಗಳ ಅಡಿಯಲ್ಲಿ ಬರುವ ಮಹಿಳೆಯರು ಮಾತ್ರ ಈ ಯೋಜನೆಯ ಪ್ರಯೋಜನ ಪಡೆಯಬಹುದು.
* ಕುಟುಂಬದ ಆದಾಯವು 12,000 ರೂಪಾಯಿಕ್ಕಿಂತ ಕಡಿಮೆ ಇರಬೇಕು.
* ಅಭ್ಯರ್ಥಿಯು ಬಡತನ ರೇಖೆಗಿಂತ ಕೆಳಗಿರಬೇಕು.
* ಮಹಿಳೆಯರು ದುಡಿಯುವ ವರ್ಗದಲ್ಲಿ ಕೆಲಸ ಮಾಡಲು ಸಮರ್ಥರಾಗಿದ್ದರೆ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
* ಈ ಯೋಜನೆಯಡಿಯಲ್ಲಿ ಮಹಿಳೆಯರ ಕನಿಷ್ಠ ವಯಸ್ಸು 20 ಇರಬೇಕು. ಇನ್ನು ಗರಿಷ್ಠ ವಯಸ್ಸು 49.
* ಅಭ್ಯರ್ಥಿಯು ಟೈಲರಿಂಗ್’ನಲ್ಲಿ ಪ್ರತಿಭೆಯನ್ನ ಹೊಂದಿದ್ದು, ಈ ಯೋಜನೆಯೊಂದಿಗೆ ಹೆಚ್ಚಿನ ಪ್ರಯೋಜನಗಳನ್ನ ಪಡೆಯಬಹುದು.
ಉಚಿತ ಹೊಲಿಗೆ ಯಂತ್ರ ದಾಖಲೆಗಳ ಪಟ್ಟಿ 2023.!
* ಅರ್ಜಿದಾರರ ಕುಟುಂಬದ ಆದಾಯದ ಪರಿಶೀಲನೆಗಾಗಿ ಅರ್ಜಿದಾರರ ಆದಾಯ ಪ್ರಮಾಣಪತ್ರ.
* ಆಧಾರ್ ಕಾರ್ಡ್’ನ ನಕಲು ಪ್ರತಿ.
* ಅಭ್ಯರ್ಥಿಯ ಬಳಿ ಇರುವ ವಯಸ್ಸಿನ ದೃಢೀಕರಣ ಪ್ರಮಾಣಪತ್ರದ ಛಾಯಾಪ್ರತಿ ಅಥವಾ ಮೆಟ್ರಿಕ್ಯುಲೇಷನ್ ಪ್ರಮಾಣಪತ್ರದ ಛಾಯಾ ಪ್ರತಿ.
* ಜಾತಿ ಪ್ರಮಾಣ ಪತ್ರದ ಪ್ರತಿ
* ಟೈಲರಿಂಗ್ ಮತ್ತು ಕಟಿಂಗ್ ಸರ್ಟಿಫಿಕೇಟ್
* ಅರ್ಜಿದಾರರು ಅಂಗವಿಕಲರಾಗಿದ್ದರೆ, ಅಂಗವೈಕಲ್ಯವನ್ನ ಸಾಬೀತುಪಡಿಸುವ ಪ್ರಮಾಣಪತ್ರ.
* ಮೊಬೈಲ್ ಸಂಖ್ಯೆ
* ವಿಧವೆಯರ ಸಾಕ್ಷ್ಯದ ಅಫಿಡವಿಟ್
ಕರ್ನಾಟಕದಲ್ಲಿ ಆನ್ಲೈನ್ ಉಚಿತ ಹೊಲಿಗೆ ಯಂತ್ರ ಯೋಜನೆ- 2023 ಆನ್ಲೈನ್ ನೋಂದಣಿಗೆ ಅರ್ಜಿ ಸಲ್ಲಿಸಿ.!
* ಮೊದಲು ಯೋಜನೆಯ ಅಧಿಕೃತ ವೆಬ್ಸೈಟ್ National Portal of India ಗೆ ಭೇಟಿ ನೀಡಿ
* ಮೇಲಿನ ಪರದೆಯಲ್ಲಿ ಮುಖಪುಟವನ್ನ ತೆರೆಯಿರಿ.
* ಈಗ ಉಚಿತ ಹೊಲಿಗೆ ಯಂತ್ರ ಯೋಜನೆ ಕಾಕರ್ನಾಟಕದ ಲಿಂಕ್ ಆನ್ ಲೈನ್ ಅರ್ಜಿ ನಮೂನೆ ಇರುತ್ತೆ.
* ಆ ಲಿಂಕ್ ಕ್ಲಿಕ್ ಮಾಡಿ.
* ಅದರ ನಂತರ ಅರ್ಜಿ ನಮೂನೆ ಪರದೆಯ ಮೇಲೆ ತೆರೆಯುತ್ತದೆ.
* ಅರ್ಜಿ ನಮೂನೆಯ ಕೆಳಗಿರುವ ಡೌನ್ ಲೋಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ಅದರ ನಂತರ ಪಿಎಫ್ಡಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಮತ್ತು ಎಲ್ಲಾ ಫಾರ್ಮ್ಗಳನ್ನು ಭರ್ತಿ ಮಾಡಿ.
ಹೆಸರು, ವಯಸ್ಸು, ಮೊಬೈಲ್ ಸಂಖ್ಯೆ, ವಿಳಾಸ, ಆಧಾರ್ ಸಂಖ್ಯೆ ಮತ್ತು ಇತರ ಅಗತ್ಯ ಮಾಹಿತಿಯಂತಹ ನಿಮ್ಮ ಎಲ್ಲಾ ವೈಯಕ್ತಿಕ ವಿವರಗಳನ್ನು ನಮೂದಿಸಿ.
* ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿದ ನಂತರ ಎಲ್ಲಾ ದಾಖಲೆಗಳನ್ನು ಅರ್ಜಿ ನಮೂನೆಯೊಂದಿಗೆ ಲಗತ್ತಿಸಿ.
* ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ಡೌನ್ಲೋಡ್ ಮಾಡಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
Free-Sewing-Machine-Scheme-Application-Form’ – Google Drive
ರಾಮ ಭಕ್ತರಿಗೆ ಸಿಹಿ ಸುದ್ದಿ ; 2024 ಜನವರಿ 1ಕ್ಕೆ ‘ಅಯೋಧ್ಯೆ ರಾಮ ಮಂದಿರ’ ಉದ್ಘಾಟನೆ ; ಸಚಿವ ‘ಅಮಿತ್ ಶಾ’ ಘೋಷಣೆ
BREAKING NEWS: ಬೆಂಗಳೂರಿನ ಅಂತಿಮ ಮತದಾರರ ಪಟ್ಟಿ ಪ್ರಕಟ | Voter List