ಬೆಂಗಳೂರು : ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಿದ್ದು,2025ರ ಡಿಸೆಂಬರ್ 15ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ.
ಉದ್ಯೋಗಿನಿ ಯೋಜನೆ : ಮಹಿಳೆಯರು ಆದಾಯ ಉತ್ಪನ್ನಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಯಂ ಉದ್ಯೋಗಿಗಳಾಗಲು ಬ್ಯಾಂಕುಗಳ ಮೂಲಕ ಸಾಲ ಮತ್ತು ನಿಗಮದ ಮೂಲಕ ಸಹಾಯಧನ ನೀಡಲಾಗುತ್ತಿದೆ.
ವಯೋಮಿತಿ 18 ರಿಂದ 55 ವರ್ಷಗಳು.
ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ :
ಆದಾಯ ಮಿತಿ : ರೂ. 2.00 ಲಕ್ಷಗಳು
ಘಟಕ ವೆಚ್ಚ: ಕನಿಷ್ಠ ರೂ. 1.00 ಲಕ್ಷದಿಂದ ಗರಿಷ್ಟ ರೂ. 3.00 ಲಕ್ಷಗಳು
ಸಹಾಯಧನ : ಶೇ. 50 ರಷ್ಟು
ಸಾಮಾನ್ಯ ವರ್ಗ:
ಆದಾಯ ಮಿತಿ: ರೂ. 1.50 ಲಕ್ಷಗಳು
ಘಟಕ ವೆಚ್ಚ: ಗರಿಷ್ಟ ರೂ. 3.00 ಲಕ್ಷಗಳು
ಸಹಾಯಧನ : ಶೇ.30 ರಷ್ಟು
ಚೇತನ ಯೋಜನೆ : ದಮನಿತ ಮಹಿಳೆಯರಿಗೆ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ರೂ. 30,000/- ಗಳ ಪ್ರೋತ್ಸಾಹಧನ ನೀಡಲಾಗುತ್ತದೆ.
ವಯೋಮಿತಿ 18 ವರ್ಷ ಮೇಲ್ಪಟ್ಟು.
ಧನಶ್ರೀ ಯೋಜನೆ
ಮಹಿಳೆಯರಿಗೆ ಸ್ವಯ೦ ಉದ್ಯೋಗ ಕೈಗೊಳ್ಳಲು ರೂ. 30,000/-ಗಳ ಪ್ರೋತ್ಸಾಹ ಧನ ನೀಡಲಾಗುತ್ತದೆ. ವಯೋಮಿತಿ 18 ರಿಂದ 60 ವರ್ಷಗಳು.
(ಈ ಯೋಜನೆಯ ಅರ್ಜಿಯನ್ನು ಅನ್‌ಲೈನ್ ಮತ್ತು ಆಫ್‌ಲೈನ್‌ಗಳಲ್ಲಿ ಸಲ್ಲಿಸಬಹುದು)
ಲಿಂಗ ಅಲ್ಪಸಂಖ್ಯಾತ ಪುನರ್ವಸತಿ ಯೋಜನೆ: ಆದಾಯ ವೃದ್ಧಿ ಚಟುವಟಿಕೆ
ಕೈಗೊಳ್ಳಲು ರೂ. 30,000/- ಗಳ ಪ್ರೋತ್ಸಾಹಧನ ನೀಡಲಾಗುತ್ತದೆ.
(ಈ ಯೋಜನೆಯ ಅರ್ಜಿಯನ್ನು ಅನ್‌ಲೈನ್ ಮತ್ತು ಆಫ್‌ಲೈನ್‌ಗಳಲ್ಲಿ ಸಲ್ಲಿಸಬಹುದು)kannada newsnow.com
ವಿಶೇಷ ಸೂಚನೆ
ಅರ್ಜಿದಾರರು ತಮ್ಮಬ್ಯಾಂಕ್ ಖಾತೆಗೆ ಆಧಾರ್ ಸೀಡಿ೦ಗ್ ಮಾಡಿಸಿರಬೇಕು.
ಧನಶ್ರೀ ಯೋಜನೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಗಳಿಗೆ ಅರ್ಜಿದಾರರು ಅರ್ಜಿಯನ್ನು ಅನ್ ಲೈನ್ ಮತ್ತು ಆಫ್ ಲೈನ್ ನಲ್ಲಿ ಸಲ್ಲಿಸಬಹುದು. ಈ ಎರಡು ಯೋಜನೆಗಳಿಗೆ ಅರ್ಜಿಯನ್ನು ಆಫ್ ಲೈನ್ ನಲ್ಲಿ ಸಲ್ಲಿಸುವವರು ನಿಗದಿಪಡಿಸಿದ ಅವಧಿಯೊಳಗೆ ಅಗತ್ಯ ದಾಖಲೆಗಳೊಂದಿಗೆ ತಮ್ಮಜಿಲ್ಲೆಯ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಅಭಿವೃದ್ಧಿ ನಿರೀಕ್ಷಕರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿನಿಗಮ ಇವರನ್ನು ಸ೦ಪರ್ಕಿಸಿ ಅರ್ಜಿಸಲ್ಲಿಸುವುದು.
ಉದ್ಯೋಗಿನಿ ಯೋಜನೆಯ SCSP/TSP ಬಳಕೆಯಾಗದ (Unspent) ಅನುದಾನದಡಿ ಸೌಲಭ್ಯ ಪಡೆಯಲು ಇಚ್ಛಿಸುವ ಫಲಾಪೇಕ್ಷಿಗಳು/ ಅರ್ಜಿದಾರರು ಸಹ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿಸಲ್ಲಿಸುವುದು.
ಸರ್ಕಾರದ ವಿವೇಚನಾ ಕೋಟಾ ಮತ್ತು ನಿಗಮದ ವಿವೇಚನಾ ಕೋಟಾದಡಿ ಸೌಲಭ್ಯ ಪಡೆಯಲು ಇಚ್ಛಿಸುವ ಫಲಾಪೇಕ್ಷಿಗಳು / ಅರ್ಜಿದಾರರು ಮಾನ್ಯ ಸಚಿವರು | ಮಾನ್ಯಶಾಸಕರು ಕರ್ನಾಟಕ ಸರ್ಕಾರ / ಮಾನ್ಯ ಅಧ್ಯಕ್ಷರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಇವರ ಶಿಫಾರಸ್ಸು ಪತ್ರ ಪಡೆದು ಸೇವಾ ಸಿ೦ಧು ಪೋರ್ಟಲ್ (ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಬೆ೦ಗಳೂರು ಒನ್, ಕರ್ನಾಟಕ ಒನ್) ಕೇಂದ್ರಗಳಲ್ಲಿ ಅರ್ಜಿಸಲ್ಲಿಸುವುದು.
ಈ ಎಲ್ಲಾ ಯೋಜನೆಗಳಿಗೆ ಅರ್ಜಿಗಳನ್ನು ಫಲಾಪೇಕ್ಷಿಗಳು/ಅರ್ಜಿದಾರರು ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್) ಕೇಂದ್ರಗಳಲ್ಲಿ ಅರ್ಜಿಸಲ್ಲಿಸುವುದು.
ಈ ಹಿಂದಿನ ಸಾಲುಗಳಲ್ಲಿ ಅರ್ಜಿಸಲ್ಲಿಸಿ ಸೌಲಭ್ಯ ಪಡೆಯದೇ ಇರುವವರು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ.
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಿದೆ.
2025ರ ಡಿಸೆಂಬರ್ 15ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ.@CMofKarnataka @siddaramaiah @DKShivakumar @laxmi_hebbalkar pic.twitter.com/DPW6o34h95
— DIPR Karnataka (@KarnatakaVarthe) November 15, 2025








