ಬೆಂಗಳೂರು : ಸಾರಿಗೆ ನೌಕರರ ಮುಷ್ಕರ ಘೋಷಣೆ ಬೆನ್ನಲ್ಲೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಾಲ್ಕೂ ನಿಗಮಗಳ ನಿವೃತ್ತ ಸಿಬ್ಬಂದಿಗೆ ನೀಡಬೇಕಾದ ಬಾಕಿ ಉಪ ಧನ ಮತ್ತು ಗಳಿಕೆ ರಜೆ ನಗದೀಕರಣ ಪಾವತಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆದೇಶ ನೀಡಿದ್ದಾರೆ.
ವೇತನ ಹೆಚ್ಚಳ, ಹೆಚ್ಚುವರಿ ವೇತನ ಸಹಿತ ನಿವೃತ್ತ ನೌಕರರ ಬಾಕಿ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ಬಾಕಿ ಉಳಿದಿರುವಂತೆ ನೌಕರರಿಗೆ ಸಾರಿಗೆ ನೌಕರರು ಡಿ.31 ರಿಂದ ಕರ್ತವ್ಯ ಬದ್ಧರಾಗಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಮುಷ್ಕರ ತಡೆಯುವ ಉದ್ದೇಶದಿಂದ ರಾಮಲಿಂಗಾರೆಡ್ಡಿ, 11,694 ನಿವೃತ್ತ ಸಿಬ್ಬಂದಿಗೆ ರೂ.224.05 ಕೋಟಿ ಬಾಕಿ ಉಪಧನ ಮತ್ತು ಗಳಿಗೆ ರಜೆ ನಾಗದೀಕರಣ ಪಾವತಿಗೆ ಆದೇಶ ನೀಡಲಾಗಿದೆ.
ಶನಿವಾರ ಮೂವರು ನಿವೃತ್ತ ಸಿಬ್ಬಂದಿಗೆ ಸಾಂಕೇತಿಕವಾಗಿ ಚೆಕ್ ವಿತರಿಸಲಾಗಿದೆ. ಉಳಿದವರಿಗೆ ಹಣ ನೀಡಲು ಸೂಚಿಸಿದ್ದಾರೆ. ನೌಕರರು ಮುಷ್ಕರದಿಂದ ಹಿಂದೆ ಸರಿಯುವ ಕುರಿತು ಇನ್ನೂ ಸ್ಪಷ್ಟತೆ ನೀಡಿಲ್ಲ. ಒಂದು ವೇಳೆ ಮುಷ್ಕರ ನಡೆಸಿದರೆ ನೌಕರರ ವಿರುದ್ಧ ಎಸ್ಮಾ ಜಾರಿ ಮಾಡಲು ಸಾರಿಗೆ ಇಲಾಖೆ ಚರ್ಚೆ ನಡೆಸುತ್ತಿದೆ. ಎಸ್ಮಾ ಜಾರಿಗೊಂಡರೆ ನೌಕರರು ಪ್ರತಿ ಭಟನೆ ಅಥವಾ ಮುಷ್ಕರಕ್ಕಾಗಿ ಕರ್ತವ್ಯ ಬದ್ಧರಾಗಿದ್ದಾರೆ. ಬಹಿಷ್ಕರಿಸಿದರೆ ನೌಕರರನ್ನು ವಾರಂಟ್ ರಹಿತ ಬಂಧಿಸಿ, 6 ತಿಂಗಳ ಜೈಲು ಶಿಕ್ಷೆ ಯಾಗುವಂತೆ ಮಾಡಬಹುದು.