ಬೆಂಗಳೂರು : ನಿನ್ನೆ ನಡೆದ ಸಚಿವ ಸಂಪುಟದಲ್ಲಿ ಬಸ್ ಟಿಕೆಟ್ ದರ ಶೇಕಡ 15ರಷ್ಟು ಹೆಚ್ಚಿಗೆ ಮಾಡಿ ಸರ್ಕಾರ ನಿರ್ಧಾರ ಕೈಗೊಂಡಿತ್ತು. ಇದರ ಬೆನ್ನಲ್ಲೇ ಸಾರಿಗೆ ನೌಕರರಿಗೆ ಇದೀಗ ಸರ್ಕಾರ ಸಿಹಿ ಸುದ್ದಿ ಒಂದನ್ನು ನೀಡಿದ್ದು, ನೌಕರರ ಪಿಎಫ್ ಹಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ಸಾವಿರ ಕೋಟಿ ರೂಪಾಯಿ ನೀಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಹೌದು ಕಳೆದ ವರ್ಷ ನವೆಂಬರ್ ನಲ್ಲಿ KSRTC, KKRTC, BMTC ಹಾಗೂ NWKRTC ಎಲ್ಲ ನಾಲ್ಕು ಸಾರಿಗೆ ನಿಗಮಗಳು ನೌಕರರ ಸುಮಾರು 2972 ಕೋಟಿ ಹಣವನ್ನು ಪಿಎಫ್ ಟ್ರಸ್ಟ್ ಗೆ ಜಮೆ ಮಾಡದೇ ದುರ್ಬಳಕೆ ಮಾಡಿ ಕೊಂಡಿವೆ ಎಂಬ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಇದೀಗ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾರಿಗೆ ನೌಕರರ ಪಿಎಫ್ ಟ್ರಸ್ಟ್ ಗೆ 2000 ಕೋಟಿ ಕೋಟಿ ಹಣ ನೀಡಲು ಸಂಪುಟದಲ್ಲಿ ಅನುಮೋದನೆ ದೊರೆತಿದೆ.
ಸಾರಿಗೆ ಸಿಬ್ಬಂದಿಗಳ ಪಿಎಫ್ ಟ್ರಸ್ಟ್ಗೆ ಎರಡು ಸಾವಿರ ಕೋಟಿ ರೂಪಾಯಿ ನೀಡಲು ನಿರ್ಧರಿಸಿದ್ದು, ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದೆ. ಸದ್ಯಕ್ಕೆ ನಾಲ್ಕು ನಿಗಮಗಳು ಬ್ಯಾಂಕ್ನಿಂದ ಸಾಲ ಪಡೆದು, ಪಿಎಫ್ ಟ್ರಸ್ಟ್ಗೆ ಹಣ ನೀಡಲಿವೆ. ಮುಂದಿನ ಒಂದು ವಾರದಲ್ಲಿ ಯಾವುದಾದರೂ ಬ್ಯಾಂಕ್ಗಳಿಂದ ಸಾರಿಗೆ ಇಲಾಖೆ 2 ಸಾವಿರ ಕೋಟಿ ರೂ. ಸಾಲ ಪಡೆಯಲಿದೆ. ಇದಕ್ಕೆ ರಾಜ್ಯ ಸರ್ಕಾರ ಶೂರಿಟಿಯಾಗಲಿದೆ.