ಬೆಂಗಳೂರು : ಶಿಕ್ಷಕ ಹುದ್ದೆಯ ನಿರೀಕ್ಷಿತರಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ರಾಜ್ಯ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಅರೆಕಾಲಿಕ ಶಿಕ್ಷಕರ (Guest Teachers) ಹುದ್ದೆಗಳ ಭರ್ತಿಗೆ ಮುಂದಾಗಿದೆ.
ಅದ್ರಂತೆ, ಖಾಲಿ ಇರುವ 5159 ಹುದ್ದೆಗಳ ಭರ್ತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದ್ದು, 2022-23ರ ಪ್ರತಿಯಾಗಿ ಪ್ರಸಕ್ತ ಸಾಲಿನಲ್ಲಿ ಈ ಅತಿಥಿ ಶಿಕ್ಷಕರನ್ನ ಒಪ್ಪಂದದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಕರಡು ಅಧಿಸೂಚನೆ ಬಿಡುಗಡೆ ಮಾಡಿದೆ.
ಹುದ್ದೆಯ ಹೆಸರು : ಅತಿಥಿ ಶಿಕ್ಷಕರು
ಹುದ್ದೆಗಳ ಸಂಖ್ಯೆ : 5159
ಉದ್ಯೋಗ ಸ್ಥಳ : ಕರ್ನಾಟಕ
ವೇತನ : ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ನಿಯಮಾವಳಿಗಳ ಪ್ರಕಾರ
ವಯೋಮಿತಿ : ಅಭ್ಯರ್ಥಿಯ ಕನಿಷ್ಠ ವಯಸ್ಸು ಕಾಲೇಜು ಶಿಕ್ಷಣ ಇಲಾಖೆಯ ನೇಮಕಾತಿ ನಿಯಮಗಳ ಪ್ರಕಾರ ಇರಬೇಕು.
ಆಯ್ಕೆ ಪ್ರಕ್ರಿಯೆ : ಮೆರಿಟ್ ಪಟ್ಟಿ
ಪ್ರಮುಖ ದಿನಾಂಕಗಳು..!
ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ : 19 ಜಲೈ 2022
ಅತಿಥಿ ಶಿಕ್ಷಕರು ಸಾಫ್ಟ್ ಕಾಪಿ ಸಲ್ಲಿಕೆಯ ಕೊನೆಯ ದಿನಾಂಕ: 26 ಜುಲೈ 2022
ಅಂದ್ಹಾಗೆ, ಅತಿಥಿ ಶಿಕ್ಷಕರ ನೇಮಕಾತಿ ಮತ್ತು ತಾಲೂಕುವಾರು ಹುದ್ದೆಗಳ ವಿವರಗಳಿಗಾಗಿ 26 ಜುಲೈ 2022 ರಂದು ಅಥವಾ ಅದಕ್ಕೂ ಮೊದಲು ಇ-ಮೇಲ್ ಐಡಿ est4cpibng@gmail.com ಗೆ ನಿಗದಿತ ನಮೂನೆಯಲ್ಲಿ ಅರ್ಜಿಯನ್ನ ಕಳುಹಿತಕ್ಕದ್ದು.
ಅಸಕ್ತ ಮತ್ತು ಅರ್ಹ ಅಧಿಕೃತ ವೆಬ್ಸೈಟ್ schooleducation.kar.nic.in ಪ್ರವೇಶಿಸಿ ಹುದ್ದೆಗಳ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೋದು.