ನವದೆಹಲಿ : 60 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅಸಂಘಟಿತ ಕಾರ್ಮಿಕರಿಗೆ ಉತ್ತಮ ಭವಿಷ್ಯವನ್ನ ಒದಗಿಸುವ ಉದ್ದೇಶದಿಂದ ಮೋದಿ ಸರ್ಕಾರವು ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ ಯೋಜನೆಯನ್ನ ಜಾರಿಗೆ ತಂದಿದೆ. ಸರ್ಕಾರದ ಈ ಪಿಂಚಣಿ ಯೋಜನೆಯು ಆ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಹೆಚ್ಚಿನ ಪ್ರಯೋಜನವನ್ನ ನೀಡುತ್ತದೆ. ಇದು ಅವರ ಭವಿಷ್ಯವನ್ನ ಆರ್ಥಿಕವಾಗಿ, ಬಲವಾಗಿ ಮತ್ತು ಸುಭದ್ರವಾಗಿಸುತ್ತದೆ.
ಈ ಯೋಜನೆಯಡಿ, ಕೇಂದ್ರ ಸರ್ಕಾರವು 60 ವರ್ಷ ವಯಸ್ಸಿನ ನಂತ್ರ ಕಾರ್ಮಿಕರು, ರೈತರು ಮತ್ತು ಕೃಷಿ ಕಾರ್ಮಿಕರಿಗೆ ತಿಂಗಳಿಗೆ ಕನಿಷ್ಠ 1,000 ರೂಪಾಯಿಗಳಿಂದ 3,000 ಆರ್ಥಿಕ ನೆರವು ಸಿಗಲಿದೆ. ಅಲ್ಲದೆ, ಪಿಂಚಣಿ ಪಡೆಯುವ ಸಮಯದಲ್ಲಿ ಯಾರಾದರೂ ಮೃತಪಟ್ಟರೆ, ಫಲಾನುಭವಿಯ ಪತ್ನಿ ಅಥವಾ ಪತಿ ಪಿಂಚಣಿಯ ಅಡಿಯಲ್ಲಿ ಪಡೆದ ಮೊತ್ತದ 50% ಅನ್ನು ಕುಟುಂಬ ಪಿಂಚಣಿಯಾಗಿ ಪಡೆಯುತ್ತಾರೆ. ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಗೆ ಸೇರಲು, ನೀವು ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಯೋಜನೆಗೆ ನೋಂದಾಯಿಸಲು, ನೀವು ನಿಮ್ಮ ಹತ್ತಿರದ ಅಧಿಕೃತ ವೆಬ್ಸೈಟ್ ಅಥವಾ ಕೇಂದ್ರಕ್ಕೆ ಹೋಗಬೇಕು.
ಕಳಸಾ ಬಂಡೂರಿ ಯೋಜನೆಗೆ ಕೇಂದ್ರದಿಂದ ‘ಗ್ರೀನ್ ಸಿಗ್ನಲ್’ : ಉತ್ತರ ಕರ್ನಾಟಕ ಜನರಿಗೆ ಮೋದಿ ಕೊಡುಗೆ ಎಂದ ಸಿಎಂ ಬೊಮ್ಮಾಯಿ
HEALTH TIPS: ನಿಮಗೆ ಮೂತ್ರದ ಸೋಂಕು ಕಾಡುತ್ತಿದ್ದೀಯಾ? ಅದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?