ಬೆಂಗಳೂರು : ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಕ್ಕೆ ತಿದ್ದುಪಡಿ ತಂದು, ಪ್ರಕರಣ 199ಬಿ ಸೇರಿಸಲಾಗಿರುತ್ತದೆ.
ಅದರನ್ವಯ ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು- 2025’ ಅನ್ನು ಜಾರಿಗೊಳಿಸಲಾಗಿದೆ. ಸದರಿ ನಿಯಮದನ್ವಯ 15 ವರ್ಗೀಕರಣದಡಿಯಲ್ಲಿ ಆಸ್ತಿಗೆ ನಮೂನೆ 11ಎ ಪಡೆಯಬಹುದು.
ನಮೂನೆ 11ಎ ಎ೦ದರೆ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೃಷಿಯೇತರ ಉದ್ದೇಶಕ್ಕೆ ಭೂಮಿ ಪರಿವರ್ತಿಸಿ ಹಾಗೂ ಸಕ್ಷಮ ಯೋಜನಾ ಪ್ರಾಧಿಕಾರದಿಂದ ಬಡಾವಣೆ ಅನುಮೋದನೆ ಪಡೆದಿರುವ ಆಸ್ತಿಗಳ ತೆರಿಗೆ ಬೇಡಿಕೆಯ ಉದ್ಭತ ಭಾಗ.
ಇ-ಸ್ವತ್ತು 2.0 ತಂತ್ರಾಂಶ ಬಳಸಿ, ಆನ್‌ಲೈನ್ ನಲ್ಲಿ ನಮೂನೆ 11ಎ ಪಡೆಯಿರಿ- eswathu.karnataka.gov.in
ಇ-ಸ್ವತ್ತು 2.0 ಸಹಾಯವಾಣಿ- -9483476000








